ಮೈಸೂರು: ಮಹಿಳಾ ಪಿಎಸ್‍ಐ ಒಬ್ಬರ ಪುತ್ರ ನಗರದ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿ ಪೊಲೀಸರ (Police) ಅತಿಥಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಬೈಕ್ (Bike) ವೀಲ್ಹಿಂಗ್ ಮಾಡಿದ ಯುವಕನನ್ನು ಸೆಯ್ಯದ್ ಐಮಾನ್ ಎಂದು ಗುರುತಿಸಲಾಗಿದೆ. ಸಿದ್ಧಾರ್ಥ ಸಂಚಾರಿ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಬೈಕ್‍ನ್ನು ಸೀಜ್ ಮಾಡಲಾಗಿದೆ. ಇದನ್ನೂ ಓದಿ: ಇಸ್ರೋ ವಿಜ್ಞಾನಿಗಳ ಭೇಟಿಗೆ ಸೀಮಿತವಾದ ಪ್ರಧಾನಿ ಭೇಟಿ
ಯುವಕ ನಗರದ ರಿಂಗ್ ರಸ್ತೆ ಹಾಗೂ ರಾಜೀವ್ ನಗರದಲ್ಲಿ ವ್ಹೀಲಿಂಗ್ ಮಾಡುತ್ತಿದ್ದ. ಬಳಿಕ ಇದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ. ಇದೇ ವೀಡಿಯೋಗಳನ್ನು ಆಧರಿಸಿ ಪೊಲೀಸರು ಯುವಕನನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಹೆತ್ತಪ್ಪನಿಂದಲೇ ಮಗನ ಕೊಲೆಗೆ ಸುಪಾರಿ – ಹತ್ಯೆಗೈದು ಮನೆ ಸೇರಿದ್ದವನ ಕಥೆ ಹೇಳಿತು ಸುಣ್ಣದ ಡಬ್ಬಿ!
Web Stories