ಬೆಂಗಳೂರು: ಶೋಕಿಗಾಗಿ ದುಬಾರಿ ಬೆಲೆಯ ಕಾರುಗಳನ್ನ ಕದಿಯುತ್ತಿದ್ದ ಗ್ಯಾಂಗ್ ವೊಂದನ್ನು ರಾಜಗೋಪಾಲನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಕಾರ್ ಕಳ್ಳತನಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಜೀವನ್, ಶ್ರೀನಿವಾಸ್, ಮಂಜುನಾಥ್, ಸಾಗರ್, ಅಮ್ಜದ್, ನೂರುಲ್ಲಾ ಮತ್ತು ಪ್ರವೀಣ್ ಬಂಧಿತ ಆರೋಪಿಗಳು. ಒಂದು ವರ್ಷದಿಂದ ಈ ಗ್ಯಾಂಗ್ ಕಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
Advertisement
Advertisement
ಈ ಗ್ಯಾಂಗ್ ನವರು ಮೊದಲು ಟ್ರಾವೆಲ್ ಏಜೆನ್ಸಿಯಲ್ಲಿ ಕಾರನ್ನು ಬುಕ್ ಮಾಡಿ ಟ್ರಿಪ್ ಕರೆದುಕೊಂಡು ಹೋಗುತ್ತಿದ್ದರು. ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಾರ್ ಚಾಲಕನ ಜೊತೆ ಸಲುಗೆಯಿಂದ ಮಾತನಾಡುತ್ತಿದ್ದರು. ಬಳಿಕ ಕಾರ್ ಚಾಲಕನಿಗೆ ಕಂಠ ಪೂರ್ತಿ ಕುಡಿಸುತ್ತಿದ್ದರು. ಚಾಲಕನಿಗೆ ಮದ್ಯದ ನಶೆ ಏರುತ್ತಿದ್ದಂತೆಯೇ ಕೈಕಾಲು ಕಟ್ಟಿ ಆತನನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಕಾರ್ ಸಮೇತ ಪರಾರಿಯಾಗುತ್ತಿದ್ದರು. ಹೀಗೆ ಕದ್ದ ಕಾರುಗಳನ್ನು ಗುರುತು ಸಿಗದಂತೆ ಅಚ್ಚುಕಟ್ಟಾಗಿ ಬದಲಾಯಿಸುತ್ತಿದ್ದರು. ಆರ್‍ಸಿ ಬುಕ್, ಚಾರ್ಸಿ ನಂಬರ್ ಸೇರಿ ಎಲ್ಲವನ್ನು ಅಚ್ಚುಕಟ್ಟಾಗಿ ಡಾಕ್ಯುಮೆಂಟ್ ಬದಲಾಯಿಸುತ್ತಿದ್ದರು. ಈ ಖದೀಮರು ಬರೋಬ್ಬರಿ 17 ಬೆಲೆಬಾಳುವ ಕಾರುಗಳನ್ನ ಕದ್ದಿದ್ದರು.
Advertisement
ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಬೆಲೆ ಬಾಳುವ 17 ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=U8KS52yx3vk