ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಟೋಲ್ ಗೇಟ್ (Surathkal Toll Gate) ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ಹೋರಾಟಗಾರರಿಗೆ ಪೊಲೀಸರು (Police) ಮಧ್ಯ ರಾತ್ರಿ ಬಿಸಿ ಮುಟ್ಟಿಸಿದ್ದಾರೆ.
Advertisement
ಸುರತ್ಕಲ್‍ನ ಎನ್‍ಐಟಿಕೆ (NITK) ಬಳಿ ಇರುವ ಟೋಲ್ ಗೇಟ್ ಅಕ್ರಮವಾಗಿ ಇದೆ ಅದನ್ನು ತೆರವುಗೊಳಿಸಬೇಕೆಂದು ಸಾಕಷ್ಟು ಹೋರಾಟಗಳು ನಡೆದಿತ್ತು. ಆದ್ರೆ ಈವರೆಗೂ ಅಧಿಕಾರಿಗಳು ಹಾಗೂ ರಾಜಕಾರಣಿಗಳು ತೆರವಿಗೆ ಪ್ರಯತ್ನಪಟ್ಟಿಲ್ಲ. ಹೀಗಾಗಿ ಅಕ್ಟೋಬರ್ 18 ರಂದು ಸಾವಿರಾರು ಸಂಖ್ಯೆಯಲ್ಲಿ ಹೋರಾಟಗಾರರೇ ಬೃಹತ್ ಪ್ರತಿಭಟನೆಯ (Protesters) ಮೂಲಕ ಟೋಲ್ ಗೇಟನ್ನು ಕಿತ್ತು ಬಿಸಾಡೋದಾಗಿ ಈಗಾಗಲೇ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಪ್ರಮುಖ ಹೋರಾಟಗಾರರ ಮನೆಗೆ ಮಧ್ಯ ರಾತ್ರಿ ದಾಳಿ ನಡೆಸಿದ ಪೊಲೀಸರು ಎಲ್ಲರಿಗೂ ನೋಟಿಸ್ ನೀಡಿದ್ದಾರೆ. ಹೋರಾಟ ಕೈಬಿಡಬೇಕೆಂದು ನೋಟಿಸ್ ನೀಡಿ ಎರಡು ಲಕ್ಷ ಬಾಂಡ್, ಸರ್ಕಾರಿ ಅಧಿಕಾರಿಯ ಜಾಮೀನು ಸೇರಿ ಮುಚ್ಚಳಿಕೆ ಬರೆದು ಕೊಡಲು ತಾಕೀತು ಮಾಡಲಾಗಿದೆ. ಇದನ್ನೂ ಓದಿ: ಗ್ರಾಮ ವಾಸ್ತವ್ಯದಿಂದ 17 ಸಾವಿರ ಜನರಿಗೆ ಅನುಕೂಲವಾಗಿದೆ: ಆರ್.ಅಶೋಕ್
Advertisement
Advertisement
ಈ ನಡುವೆ ನೋಟಿಸನ್ನು ಕೆಲ ಹೋರಾಟಗಾರರು ಪಡೆಯಲಿಲ್ಲ. ನೋಟಿಸ್ ಪಡೆದ ಹೋರಾಟಗಾರರೂ ಬಾಂಡ್ ಇಡೋದಿಲ್ಲ ಎಂದಿದ್ದು, ಅಕ್ಟೋಬರ್ 18 ರಂದು ಟೋಲ್ ಗೇಟ್‌ನ್ನು ತೆರವುಗೊಳಿಸಿಯೇ ಸಿದ್ಧ ಎಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಹೋರಾಟವನ್ನು ಧಮನಿಸುವ ಕೆಲಸ ಮಾಡುವ ಜಿಲ್ಲಾಡಳಿತ ಕ್ರಮ ಖಂಡನೀಯ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ, ಹಾಸನಾಂಬೆ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ – ಮಕ್ಕಳು ಸೇರಿ 9 ಮಂದಿ ದುರ್ಮರಣ