ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತಿ, ಪತ್ನಿ ಇಬ್ಬರೂ ಒಟ್ಟಿಗೆ ಮುಖ್ಯಮಂತ್ರಿ ಪದಕಕ್ಕೆ (CM Medal) ಭಾಜನರಾಗಿರುವ ಅಪರೂಪದ ಪ್ರಸಂಗ ನಡೆದಿದೆ.
ಇನ್‌ಸ್ಪೆಕ್ಟರ್ ಶಿವರುದ್ರಪ್ಪ ಮೇಟಿ, ಡಿಎಂ ಪಿಎಸ್‌ಐ ಭವ್ಯ ದಂಪತಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ದಂಪತಿಗೆ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಬೆಲೆ ಏರಿಕೆಗೆ ಖಂಡನೆ – 2ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಅಹೋರಾತ್ರಿ ಧರಣಿ
- Advertisement -
- Advertisement -
2008 ರಲ್ಲಿ ರಿಸರ್ವ್ ಸಬ್ ಇನ್‌ಸ್ಪೆಕ್ಟರ್ ಆಗಿ ಶಿವರುದ್ರಪ್ಪ ಮೇಟಿ ಆಯ್ಕೆಯಾದರು. ಈ ಬ್ಯಾಚ್‌ನಲ್ಲಿ ಅತಿ ಚಿಕ್ಕ ವಯಸ್ಸಿನ ಸಬ್ ಇನ್‌ಸ್ಪೆಕ್ಟರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಕಲಬುರಗಿಯ ನಾಗನಹಳ್ಳಿ ಪೊಲೀಸ್ ಟ್ರೇನಿಂಗ್‌ನಲ್ಲಿ ತರಭೇತಿ ಪಡೆದು, 2010 ರಲ್ಲಿ ಸಿವಿಲ್ ಸಬ್ ಇನ್‌ಸ್ಪೆಕ್ಟರ್ ಆಗಿ ಆಯ್ಕೆಯಾದರು. ಮಂಗಳೂರು ಬರ್ಕೆ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುವಾಗ ಕಿಡಿಗೇಡಿಗಳಿಗೆ ದುಸ್ವಪ್ನರಾಗಿದ್ದರು.
- Advertisement -
- Advertisement -
ಭೂಗತ ಪಾತಕಿ ಬನ್ನಜೆ ರಾಜ್‌ನ ನಕಲಿ ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ಕೇಸ್‌ನ ತನಿಖೆ, ಜಿಲ್ಲಾ ಕಾರಾಗ್ರಹದಲ್ಲಿ ನಡೆಯುವ ಅಕ್ರಮಗಳ ತಡೆ, ಕೋಮುಗಲಭೆ ತಡೆಗಟ್ಟುವಲ್ಲಿ ಯಶಸ್ವಿಯಾದರು. ನಂತರ ದಾವಣಗೆರೆ ಜಿಲ್ಲೆಯ ಅಜಾದ್ ನಗರ, ಸಂಚಾರ ಠಾಣೆ, ಚನ್ನಗಿರಿ, ಸಂತೆಬೆನೂರ್ ಠಾಣೆಯಲ್ಲಿ ಅತಿ ಹೆಚ್ಚು ಗಾಂಜಾವನ್ನು ವಶಪಡಿಕೊಂಡು, ಅಪರಾಧಿಗಳಿಗೆ ಶಿಕ್ಷೆ ಕೊಡಿಸಿದ್ದಾರೆ. ಶ್ರೀಗಂಧ ಕಳ್ಳತನ ಕೇಸ್, ನಕಲಿ ಬಂಗಾರ ಕೇಸ್‌ಗಳೊಂದಿಗೆ ಸ್ವತ್ತು ಕಳ್ಳತನ ಕೇಸ್ ಪತ್ತೆ ಮಾಡಿದ್ದಾರೆ. ನಂತರ ಪ್ರಮೋಷನ್ ಆಗಿ ಪ್ರಸ್ತುತ ತುಮಕೂರು ಲೋಕಾಯುಕ್ತದಲ್ಲಿ ಭ್ರಷ್ಟಾಚಾರದ ವಿರುದ್ದ ಸಾಕಷ್ಟು ಕೇಸ್‌ಗಳನ್ನು ಮಾಡಿದ್ದಾರೆ. ಈ ಎಲ್ಲಾ ಸೇವೆಯನ್ನ ಗುರುತಿಸಿ ಇಂದು ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಬೆಳಗ್ಗೆಯೇ ತುಂತುರು ಮಳೆ