– ಹೆಂಡತಿ ಮಕ್ಕಳೊಂದಿಗೆ ಅಂಬೇಡ್ಕರ್ ಫೋಟೋ ಹಿಡಿದು ಪ್ರೊಟೆಸ್ಟ್
ಚಿಕ್ಕಬಳ್ಳಾಪುರ: ಪೊಲೀಸ್ ಇಲಾಖೆಯ (Police Department) ಇಬ್ಬರು ಪೇದೆಗಳು ತಮ್ಮದೇ ಇಲಾಖೆಯ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapur) ನಡೆದಿದೆ.
Advertisement
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ (Chikkaballapur Police Station) ಪೇದೆ ಆಶೋಕ್ ಹಾಗೂ ಚೇಳೂರು ಪೊಲೀಸ್ ಠಾಣಾ ಪೇದೆ ನರಸಿಂಹಮೂರ್ತಿ ತಮ್ಮ ಹೆಂಡತಿ ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಐಸ್ಕ್ರೀಂ ತಿನ್ನಬೇಡಿ, ಕೂಲ್ ಡ್ರಿಂಕ್ಸ್ ಕುಡಿಯಬೇಡಿ – ಲಾ ಕಾಲೇಜ್ ಸೂಚನಾ ಪತ್ರ ವೈರಲ್ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ನೋಟಿಸ್
Advertisement
Advertisement
2023ರ ಆಗಸ್ಟ್ ನಲ್ಲಿ ಮನಿ ಡಬ್ಲಿಂಗ್ ಪ್ರಕರಣವೊಂದರಲ್ಲಿ ಪೇದೆಗಳಾದ ಆಶೋಕ್ ಹಾಗೂ ನರಸಿಂಹಮೂರ್ತಿ ವಿರುದ್ದ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮನಿ ಡಬ್ಲಿಂಗ್ ಪ್ರಕರಣದಲ್ಲಿ ಆರೋಪಿತರು ಶಾಮೀಲಾಗಿರುವ ಆರೋಪ ಇದ್ದುದರಿಂದ, ಇಬ್ಬರನ್ನು ಅಮಾನತುಗೊಳಿಸಿ ವಿಚಾರಣೆ ನಡೆಸಲಾಗುತ್ತಿತ್ತು. ತದನಂತರ ಅಮಾನತು ಆದೇಶ ರದ್ದು ಮಾಡಿ ಮಂಚೇನಹಳ್ಳಿ ಹಾಗೂ ಚೇಳೂರು ಠಾಣೆಗೆ ಕರ್ತವ್ಯಕ್ಕೆ ನಿಯೋಜನೆ ಸಹ ಮಾಡಲಾಗಿತ್ತು. ಇದನ್ನೂ ಓದಿ: Lok Sabha Elections 2024: ಒಂದೇ ಕುಟುಂಬದ 85 ಮಂದಿಯಿಂದ ಏಕಕಾಲದಲ್ಲಿ ಮತದಾನ!
Advertisement
ಈ ನಡುವೆ ಇಲಾಖೆಯ ವಿಚಾರಣೆಗೆ ಹಾಜರಾಗದೇ ಕಾಲಹರಣ ಮಾಡಿದ್ದ ಪೇದೆಗಳು ನಿನ್ನೆ ವಿಚಾರಣೆಗೆ ತಡವಾಗಿ ಹಾಜರಾಗಿ ಮತ್ತೆ ಕಾಲಾವಾಕಾಶ ಕೋರಿದ್ದರು. ಈ ವಿಚಾರದಲ್ಲಿ ವಿಚಾರಾಣಾಧೀನ ಅಧಿಕಾರಿ ಸಮಪರ್ಕವಾಗಿ ಸ್ಪಂಸಿಲ್ಲ ಹಾಗೂ ಎಸ್ಪಿ ಡಿ.ಎಲ್ ನಾಗೇಶ್ ಪ್ರಕರಣದಲ್ಲಿ ನಮ್ಮ ವಾದ ಕೇಳದೇ ನೇರವಾಗಿ ಅಮಾನತು ಮಾಡಿ ಮಾನಸಿಕ ಕಿರುಕುಳ ನೀಡಿದ್ದು ಕೆಳ ಜಾತಿ ಅಂತ ಜಾತಿ ತಾರತಮ್ಮ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.
ಇಂದು (ಮೇ 11) ಎಸ್ಪಿ ಕಚೇರಿ ಎದುರು ಹೆಂಡತಿ ಮಕ್ಕಳ ಸಮೇತ ಆಗಮಿಸಿ ಅಂಬೇಡ್ಕರ್ ಪೋಟೋ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಎಸ್ಪಿ ಖಾಸೀಂ ಸಾಬ್ ಪ್ರತಿಭಟನಾ ನಿರತ ಪೇದೆಗಳ ಮನವೊಲಿಸಿ ಅಹವಾಲು ಸ್ವೀಕಾರ ಮಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿ ನಿರ್ಮಿಸಲು ಮುಂದಾದ ಮದ್ರಾಸ್ ಐಐಟಿ – ಆನಂದ್ ಮಹೀಂದ್ರಾ ಮೆಚ್ಚುಗೆ