-ರವಿ ಚನ್ನಣ್ಣನವರ್ ನಿಂದ ರಿವಾರ್ಡ್ ಪಡೆದಿದ್ದ ಪೇದೆಯಿಂದ ಕೃತ್ಯ
ಬೆಂಗಳೂರು: ಖಡಕ್ ಪೊಲೀಸ್ ಅಧಿಕಾರಿ ರವಿ ಚನ್ನಣ್ಣನವರ್ ಅವರಿಂದ ರಿವಾರ್ಡ್ ಪಡೆದಿದ್ದ ಮುಖ್ಯಪೇದೆಯೊಬ್ಬ ಮಹಿಳಾ ಹೋಮ್ ಗಾರ್ಡ್ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ನಗರದ ನಂದಿನಿ ಲೇಔಟ್ ಠಾಣೆಯಲ್ಲಿ ನಡೆದಿದೆ.
ಜ್ಞಾನ ಭಾರತಿ ಪೊಲೀಸ್ ಠಾಣೆಯ ಚಂದ್ರಶೇಖರ್ ಅತ್ಯಾಚಾರ ಎಸಗಿದ ಮುಖ್ಯಪೇದೆ. ಅತ್ಯಾಚಾರಕ್ಕೆ ಒಳಗಾದ ಮಹಿಳೆಯು ಜ್ಞಾನ ಭಾರತಿ ವಿಶ್ವವಿದ್ಯಾಲಯಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಳು. ಆರೋಪಿ ಚಂದ್ರಶೇಖರ್ ಸೋಮವಾರ ಮನೆಗೆ ನುಗ್ಗಿ ಮಹಿಳೆಯ ಅತ್ಯಾಚಾರ ಎಸಗಿದ್ದಾನೆ. ಹಳೇ ವೈಷಮ್ಯಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
Advertisement
ಏನಿದು ಪ್ರಕರಣ?:
ಕುಖ್ಯಾತ ಸರಗಳ್ಳ ಅಚ್ಯುತ್ ಗಣಿಯನ್ನು ಮುಖ್ಯಪೇದೆ ಚಂದ್ರಶೇಖರ್ ಹಿಡಿದಿದ್ದನು. ಹೀಗಾಗಿ ಡಿಸಿಪಿ ರವಿ ಚನ್ನಣ್ಣನವರ ಅವರಿಂದ ರಿವಾರ್ಡ್ ಪಡೆದಿದ್ದ. ಆದರೆ ನಾನು ಕಾರ್ಯನಿರ್ವಹಿಸುತ್ತಿದ್ದ ಠಾಣೆ ವ್ಯಾಪ್ತಿಯ ಜ್ಞಾನ ಭಾರತಿ ವಿಶ್ವವಿದ್ಯಾಲಯದ ಮಹಿಳಾ ಹೋಮ್ ಗಾರ್ಡ್ ಗೆ ಡ್ರಾಪ್ ಕೊಡುವ ನೆಪದಲ್ಲಿ ಚಂದ್ರಶೇಖರ್ ಪರಿಚಯವಾಗಿದ್ದ. ಕೆಲ ದಿನಗಳ ನಂತರ ಕೆಲಸದ ನೆಪದಲ್ಲಿ ಆಕೆಗೆ ಅನೇಕ ಬಾರಿ ಲೈಂಗಿಕ ಕಿರುಕಳ ನೀಡಿದ್ದನು.
Advertisement
ಅಷ್ಟಕ್ಕೆ ಸುಮ್ಮನಾಗದ ಚಂದ್ರಶೇಖರ್ ಡ್ಯೂಟಿ ಮೇಲಿದ್ದ ಮಹಿಳೆಯನ್ನು ನವೆಂಬರ್ 16ರಂದು ತಬ್ಬಿಕೊಂಡು, ಸೊಂಟದ ಮೇಲೆ ಕೈ ಹಾಕಿದ್ದನು. ಚಂದ್ರಶೇಖರ್ ವರ್ತನೆಯಿಂದ ಎಚ್ಚೆತ್ತುಕೊಂಡ ಮಹಿಳೆ, ಉಸ್ತುವಾರಿ ಅಧಿಕಾರಿ ಹರೀಶ್ ಎಂಬವರ ಗಮನಕ್ಕೆ ತಂದಿದ್ದದು. ಈ ಕರಿತು ಮಾಹಿತಿ ತಿಳಿಯುತ್ತಿದ್ದಂತೆ ಜ್ಞಾನ ಭಾರತಿ ಪೊಲೀಸ್ ಠಾಣಾ ಅಧಿಕಾರಿಗಳು ಚಂದ್ರಶೇಖರ್ ನನ್ನು ಕರೆಸಿಕೊಂಡು, ಫುಲ್ ಕ್ಲಾಸ್ ತೆಗೆದುಕೊಂಡಿದ್ದರು.
Advertisement
ಇದಾದ ಬಳಿಕ ಮಹಿಳೆಯ ವಿರುದ್ಧ ವೈಷಮ್ಯ ಸಾಧಿಸುತ್ತಿದ್ದ ಚಂದ್ರಶೇಖರ್ ಆಕೆಯ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ನುಗ್ಗಿದ್ದಾನೆ. ಈ ವೇಳೆ ಮಹಿಳೆ ಸ್ನಾನ ಮಾಡುತ್ತಿದ್ದು, ಬಾಗಿಲು ಬಡಿದ ಶಬ್ಧ ಕೇಳಿ ಪತಿ ಬಂದಿದ್ದಾನೆ ಎಂದು ಭಾವಿಸಿ ಬಾಗಿಲು ತೆರೆದಿದ್ದಾಳೆ. ಆಕೆಯನ್ನು ಒಳಗೆ ದೂಡಿದ ಚಂದ್ರಶೇಖರ್ ಬಾಗಿಲು ಹಾಕಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸಂತ್ರಸ್ತ ಮಹಿಳೆ ದೂರು ನೀಡುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿ ಕೋರ್ಟ್‍ಗೆ ಹಾಜರುಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews