ಯಾದಗಿರಿ: ರಜೆಯಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್ (Police Constable) ಹೃದಯಾಘಾತದಿಂದ (Heart Attack) ಮೃತಪಟ್ಟಿರುವ ಘಟನೆ ಯಾದಗಿರಿ (Yadgiri) ಜಿಲ್ಲೆಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಶಹಾಪುರ (Shahapura) ತಾಲೂಕಿನ ಗೋಗಿ ಠಾಣೆಯ ಕಾನ್ಸ್‌ಟೇಬಲ್ ದೇವೇಂದ್ರಪ್ಪ (40) ಮೃತ ದುರ್ದೈವಿ. ದೇವೇಂದ್ರಪ್ಪಗೆ ಕಳೆದ ಮೂರು ತಿಂಗಳುಗಳಿಂದ ಜ್ವರ ಬಾಧಿಸುತ್ತಿದ್ದ ಕಾರಣ ಜೂನ್‌ನಿಂದ ರಜೆಯಲ್ಲಿದ್ದರು. ಹೀಗಾಗಿ ಬುಧವಾರ ಬೆಂಗಳೂರಿನ (Bengaluru) ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗುವ ಸಂದರ್ಭ ಮಾರ್ಗಮಧ್ಯೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯ ಆರೋಪ- 5 ವರ್ಷದ ಬಾಲಕಿ ಸಾವು
Advertisement
Advertisement
ಮೂಲತಃ ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ ತಾಲೂಕಿನ ಬಿರಾಳ ಗ್ರಾಮದ ದೇವೇಂದ್ರಪ್ಪ ಕಳೆದ 16 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಅಗಲಿಕೆಗೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಸೇರಿದಂತೆ ಪೊಲೀಸ್ ಇಲಾಖೆಯಿಂದ ಸಂತಾಪ ಸೂಚಿಸಲಾಗಿದೆ. ಇದನ್ನೂ ಓದಿ: ಕುಡಿದು ಬಂದು ಮದುವೆ ಮಾಡಿಸುವಂತೆ ಕಿರಿಕ್ – ತಂದೆಯಿಂದಲೇ ಮಗನ ಹತ್ಯೆ
Advertisement
Web Stories