ತಿರುವನಂತಪುರಂ: ಕೇರಳದ ಎರ್ನಾಕುಳಂನ ಕಲಮಶ್ಯೇರಿಯಲ್ಲಿ (Kalamassery) ನಡೆದಿರುವುದು ಐಇಡಿ ಬ್ಲಾಸ್ಟ್ (IED Blast) ಎಂದು ಪೊಲೀಸರು ದೃಢಪಡಿಸಿದ್ದಾರೆ. ಸದ್ಯ ಈ ಸ್ಫೋಟದಲ್ಲಿ ಭಯೋತ್ಪಾದಕರ ಕೈವಾಡ ಇದೆಯಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
Advertisement
ಘಟನೆಯ ಬಳಿಕ ತನಿಖೆಯ ನೇತೃತ್ವ ವಹಿಸಲು ಒಟ್ಟು 8 ವಿಶೇಷ ತಂಡಗಳನ್ನು ನೇಮಿಸಲಾಗಿದೆ. ಸ್ಫೋಟದಲ್ಲಿ ಭಯೋತ್ಪಾದಕರ ಕೈವಾಡ ಇರುವ ಶಂಕೆ ದಟ್ಟವಾಗಿದೆ. ಕೇರಳ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಲು ಕಲಮಶ್ಶೇರಿಗೆ ತೆರಳಿದ್ದಾರೆ. ಎಲ್ಲಾ ಆಯಾಮಗಳಿಂದಲೂ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತದೆ ಎಂದು ಎಡಿಜಿಪಿ ತಿಳಿಸಿದ್ದಾರೆ. ಜೊತೆಗೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೂ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ.
Advertisement
Advertisement
ಶಂಕಿತರ ಸಾಮಾಜಿಕ ಜಾಲತಾಣಗಳ ಚಟುವಟಿಕೆ ಆಧರಿಸಿ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಜೊತೆಗೆ ಈ ಸ್ಫೋಟ ಪೂರ್ವ ನಿಯೋಜಿತ ಕೃತ್ಯವೇ ಎಂಬುದನ್ನು ಖಚಿತಪಡಿಸಲು ರಾಜ್ಯ ಅಥವಾ ಕೇಂದ್ರ ಸಂಸ್ಥೆಗಳಿಗೆ ಯಾವುದೇ ವರದಿಗಳು ಬಂದಿಲ್ಲ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಪ್ರಾರ್ಥನಾ ಮಂದಿರಲ್ಲಿ ಬಾಂಬ್ ಬ್ಲಾಸ್ಟ್- ಕೇರಳ ಸಿಎಂಗೆ ಅಮಿತ್ ಶಾ ಕರೆ
Advertisement
ಇತ್ತ ಗಾಯಾಳುಗಳ ಆರೋಗ್ಯ ವಿಚಾರಿದ ಬಳಿಕ ಜಿಲ್ಲಾಧಿಕಾರಿ ಎನ್‍ಎಸ್‍ಕೆ ಉಮೇಶ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, 10 ಜನರನ್ನು ಕಲಮಶ್ಶೇರಿ ವೈದ್ಯಕೀಯ ಕಾಲೇಜಿನ ಸುಟ್ಟಗಾಯಗಳ ಘಟಕಕ್ಕೆ ದಾಖಲಿಸಲಾಗಿದೆ. ಅವರಲ್ಲಿ 50 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿರುವ ಇಬ್ಬರನ್ನು ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇನ್ನು 8 ಜನರನ್ನು ವೈದ್ಯಕೀಯ ಕಾಲೇಜಿನ ಸಾಮಾನ್ಯ ವಾರ್ಡ್‍ನಲ್ಲಿ ದಾಖಲಿಸಲಾಗಿದ್ದು, ಉಳಿದ 18 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.
ಘಟನೆಯಲ್ಲಿ ಮೃತಪಟ್ಟ ಮಹಿಳೆಯ ಗುರುತು ಪತ್ತೆಯಾಗಿಲ್ಲ ಎಂದು ಉಮೇಶ್ ಇದೇ ವೇಳೆ ತಿಳಿಸಿದರು.
Web Stories