ಮೈಸೂರು: ನಗರದಲ್ಲಿ ಇನ್ಮುಂದೆ ಬೇಕಾಬಿಟ್ಟಿಯಾಗಿ ಮನೆ, ರೂಂ ಗಳನ್ನು ಬಾಡಿಗೆ (House For Rent) ನೀಡುವಂತಿಲ್ಲ. ರೂಂ, ಮನೆ ಬಾಡಿಗೆ ಕೊಡುವ ಮುನ್ನಾ ಸ್ಥಳೀಯ ಪೊಲೀಸರಿಂದ ಕ್ಲಿಯರೆನ್ಸ್ (Police Clearance) ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯವಾಗಿದೆ.
ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ (Mangaluru Bomb Blast) ಮಾಡಿದ ಶಾರೀಕ್ (Shariq) ಮೈಸೂರಿನಲ್ಲಿ (Mysuru) ಮನೆ ಬಾಡಿಗೆ ಪಡೆದು ವಾಸವಿದ್ದ. ಈ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಪೊಲೀಸರು ಮನೆ ಬಾಡಿಗೆ ಪಡೆಯಲು ಕ್ಲಿಯರೆನ್ಸ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಮನೆ ಮಾಲೀಕರಿಗೂ ಅರಿವು ಮೂಡಿಸುವ ಕೆಲಸವನ್ನು ಪೊಲೀಸರು ಆರಂಭಿಸಿದ್ದಾರೆ. ಇದನ್ನೂ ಓದಿ: ಬಾಣಂತಿ ಡಿಸ್ಚಾರ್ಜ್ ಮಾಡಲು ಲಂಚಕ್ಕೆ ಬೇಡಿಕೆ – ಇಬ್ಬರು ವೈದ್ಯ ಸಿಬ್ಬಂದಿ ಅಮಾನತು
Advertisement
Advertisement
ಶಾರೀಕ್ ಆರೋಗ್ಯದಲ್ಲಿ ಚೇತರಿಕೆ:
ಶಂಕಿತ ಉಗ್ರ ಶಾರೀಕ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ಈ ನಡುವೆ ಉಗ್ರನ ಲಿಂಕ್ ರಹಸ್ಯ ಮತ್ತಷ್ಟು ಭೇದಿಸಿರುವ ಪೊಲೀಸರಿಗೆ ಆತಂಕಕಾರಿ ಮಾಹಿತಿಗಳು ಲಭ್ಯವಾಗಿವೆ. 26/11 ಮುಂಬೈನ ದಾಳಿಯಂತೆಯೇ ಅದೇ ದಿನವಾದ ಇಂದು ಕೂಡಾ ಮಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಇದನ್ನೂ ಓದಿ: ಭದ್ರತಾ ಪಡೆಗಳಿಂದ ಎನ್‌ಕೌಂಟರ್ – ನಾಲ್ವರು ಮಾವೋವಾದಿಗಳ ಹತ್ಯೆ
Advertisement
Advertisement
ಆಸ್ಪತ್ರೆ ಸುತ್ತಲೂ ಬಿಗಿ ಭದ್ರತೆ:
ವೆಂಟಿಲೇಟರ್‌ನಲ್ಲಿದ್ದ ಶಾರೀಕ್ ಇಂದು ಸ್ವಲ್ಪಮಟ್ಟಿಗೆ ಚೇತರಿಕೆ ಕಂಡಿದ್ದಾನೆ. ಈ ನಡುವೆ ಪೊಲೀಸರು ಭದ್ರತೆ ಹೆಚ್ಚಿಸಿದ್ದು, ಆತ ಇರುವ 5ನೇ ಮಹಡಿ ಹಾಗೂ ಐಸಿಯುನಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು, ಮೂರು ಪಾಳಿಯಲ್ಲಿ ಪೊಲೀಸರು ಆತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ. ಸ್ಫೋಟಕ ಹ್ಯಾಂಡ್ಲರ್‌ಗಳು, ಸ್ಲೀಪರ್ ಸೆಲ್‌ಗಳನ್ನು ಆಕ್ವೀವ್ ಮಾಡಿ ಆತನನ್ನು ಮುಗಿಸುವ ಯತ್ನ ನಡೆಸಿರುವ ಶಂಕೆ ಇದ್ದು ಈ ಹಿನ್ನಲೆಯಲ್ಲೂ ಪೊಲೀಸರು ಆಕ್ಟೀವ್ ಆಗಿದ್ದಾರೆ. ಸ್ವತಃ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ನಿಯೋಜಿಸಿದ್ದು, ಹಿರಿಯ ಅಧಿಕಾರಿಗಳು ಆಸ್ಪತ್ತೆಯಲ್ಲೇ ಬೀಡು ಬಿಟ್ಟಿದ್ದಾರೆ.
ಮುಂಬೈ ಸ್ಫೋಟದಂತೆ ಪ್ಲ್ಯಾನ್
ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾತನಾಡಿದ್ದು, ಉಗ್ರ ಶಾರೀಕ್ ತನಿಖಾಧಿಕಾರಿಗಳ ಜೊತೆ ಮಾತನಾಡದೇ ಇದ್ರೂ ಸಾಕಷ್ಟು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿದೆ. ಶಾರೀಕ್ 26/11ರ ಮುಂಬೈ ಸ್ಫೋಟದಂತೆಯೇ (Mumbai BombBlast) ಮಂಗಳೂರಿನಲ್ಲೂ ಅದೇ ದಿನ ಅಂದರೆ ಇಂದು ನವೆಂಬರ್ 26 ಆಗಿರೋದ್ರಿಂದ ಇಂದೇ ಮತ್ತೊಮ್ಮೆ ಸರಣಿ ಸ್ಫೋಟ ನಡೆಸಲು ತಯಾರಿ ನಡೆಸಿದ್ದನಂತೆ. ಮುಂಬೈ ಸ್ಫೋಟದ ಉಗ್ರ ಕಸಬ್‌ನಂತೆಯೇ ಹಿಂದೂ ಸೋಗಿನಲ್ಲೇ ಮಂಗಳೂರಿಗೆ ಬಂದಿದ್ದ ಶಾರೀಕ್ ಕಳೆದ ನ.19ರ ಶನಿವಾರ ಕುಕ್ಕರ್ ಬಾಂಬ್ ಸ್ಫೋಟ ಮಾಡಲು ಬಂದು ವಿಫಲನಾಗಿ ಸಿಕ್ಕಿಬಿದ್ದಿದ್ದಾನೆ. ಒಂದು ವೇಳೆ ಆತನ ಪ್ಲ್ಯಾನ್ ನಂತೆಯೇ ಸ್ಫೋಟಗೊಂಡಿದ್ದರೆ ಮತ್ತೆ ಮೈಸೂರಿಗೆ ತೆರಳಿ ಬಾಂಬ್ ತಯಾರಿಸಿ ಶನಿವಾರ (ನವೆಂಬರ್ 26) ಮಂಗಳೂರಿನಲ್ಲಿ ಸರಣಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಎಂದು ಹೇಳಿದ್ದಾರೆ.
ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಮಾತನಾಡಿ, ಉಗ್ರ ಶಾರೀಕ್‌ಗೆ ಐಸಿಸ್ ಸೇರಿ ಹಲವು ಉಗ್ರರ ಸಂಪರ್ಕವಿತ್ತು ಅನ್ನೋದು ಬೆಳಕಿಗೆ ಬಂದಿದೆ. ಈತ ಮುಸ್ಲಿಂ ಭಾಷಣಕಾರ ಝಾಕೀರ್ ನಾಯ್ಕ್ನಿಂದ ಪ್ರೇರೇಪಿತನಾಗಿದ್ದ ಅನ್ನೋದು ಮತ್ತೆ ಸಾಬೀತಾಗಿದೆ. ಸ್ಫೋಟಗೊಂಡ ಒಂದೂವರೆ ಗಂಟೆಯಲ್ಲೇ ಮಲೇಶಿಯಾದಲ್ಲಿರೋ ಝಾಕೀರ್ ನಾಯ್ಕ್ ಆತನ ಟ್ವೀಟರ್‌ನಲ್ಲಿ ಇಸ್ಲಾಂನಲ್ಲಿ ಆತ್ಮಾಹುತಿ ಬಾಂಬ್‌ಗೆ ಅವಕಾಶ ಇದ್ಯಾ ಎಂದು ಟ್ವೀಟ್ ಮಾಡಿದ್ದ. ಆತ್ಮಾಹುತಿ ಬಾಂಬ್‌ನ ಬಗೆಗಿನ ತನ್ನ ವಿಡಿಯೋವನ್ನೂ ಪೋಸ್ಟ್ ಮಾಡಿದ್ದ. ಇದೆಲ್ಲವನ್ನೂ ನೋಡುವಾಗ ಉಗ್ರ ಶಾರೀಕ್‌ನ ಲಿಂಕ್ ದೊಡ್ಡ ಮಟ್ಟದಲ್ಲೇ ಇತ್ತು ಅನ್ನೋದು ಸಾಬೀತಾಗಿದೆ ಎಂದು ತಿಳಿಸಿದ್ದಾರೆ.