ಬೆಂಗಳೂರು: ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕೇಕ್ ತರಿಸಿ ಕೇಕ್ ಕಟ್ ಮಾಡಿಸಿ ಪೊಲೀಸರು ಆರೋಪಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ವಿದ್ಯಾರಣ್ಯಪುರ ಪೊಲೀಸರು ವಂಚನೆ ಪ್ರಕರಣದಲ್ಲಿ ಬಂಧನವಾಗಿದ್ದ, ಅಭಿಷೇಕ್(25) ನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಆರೋಪಿ ಪೊಲೀಸ್ ಠಾಣೆಯಲ್ಲಿದ್ದಾಗ ಬರ್ತ್‌ಡೇ ಎಂದು ತಿಳಿದಿದೆ. ನಂತರ ಪೊಲೀಸರು ಆತನಿಂದ ಕೇಕ್ ಕಟ್ ಮಾಡಿಸಿ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಇದರಿಂದ ಪೊಲೀಸರ ವರ್ತನೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
Advertisement
ಆರೋಪಿ ಅಭೀಷೇಕ್ ವಿದ್ಯಾರಣ್ಯಪುರ ಕ್ರೈಂ ಪಿಸಿ ಎಂದುಕೊಂಡು ವಂಚಿಸುತ್ತಿದ್ದನು. ಅಷ್ಟೇ ಅಲ್ಲದೇ ಬಂಧಿತ ಅಭಿಷೇಕ್ ಕಾರು ಮಾಲೀಕರೊಬ್ಬರಿಂದ 10 ಸಾವಿರ ಸುಲಿಗೆ ಮಾಡಿದ್ದನು. ಇಂತಹ ಆರೋಪಿಯನ್ನ ಬಂಧಿಸಿ ಪೊಲೀಸ್ ಠಾಣೆಯಲ್ಲಿ ಬರ್ತ್‌ಡೇ ಪಾರ್ಟಿಯನ್ನು ಪೊಲೀಸರು ಮಾಡಿದ್ದಾರೆ. ಇದರಿಂದ ದರೋಡೆಕೊರರಿಗೆ, ಕೊಲೆ ಪಾತಕರಿಗೆ ಭಯ ಹುಟ್ಟಿಸುವಂತ ಕೆಲಸ ಮಾಡಬೇಕಿರುವ ಖಾಕಿ ಪೊಲೀಸ್ ಠಾಣೆಯನ್ನ ವಂಚಕರ ಬರ್ತ್‌ಡೇ ವೇದಿಕೆಯನ್ನಾಗಿ ಮಾಡಿಕೊಟ್ಟಿದ್ದು ಎಷ್ಟು ಸರಿ ಎಂದು ಪ್ರಶ್ನೆ ಎದ್ದಿದೆ.