ಲಕ್ನೋ: ಟಿವಿ ಧಾರವಾಹಿ ರಾಮಾಯಣದ (Ramayana) ಡಬ್ಬಿಂಗ್ ವೀಡಿಯೋವನ್ನು ಬಾರ್‌ನ (Bar) ದೊಡ್ಡ ಪರದೆಯಲ್ಲಿ ಪ್ಲೇ ಮಾಡಿದ ವ್ಯಕ್ತಿಯನ್ನು ಬಂಧಿಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ.
ಉತ್ತರ ಪ್ರದೇಶದ ನೋಯ್ಡಾದ (Noida) ಗಾರ್ಡನ್ಸ್ ಗ್ಯಾಲೇರಿಯಾ ಮಾಲ್‍ನಲ್ಲಿರುವ ಲಾರ್ಡ್ ಆಫ್ ದಿ ಡ್ರಿಂಕ್ಸ್ ರೆಸ್ಟೊ-ಬಾರ್‍ನಲ್ಲಿ ಈ ಘಟನೆ ನಡೆದಿದೆ. ಶ್ರೀರಾಮ ಹಾಗೂ ರಾವಣನ ಪಾತ್ರಗಳಿಗೆ ಆಧುನಿಕ ಸಂಗೀತವನ್ನು ನೀಡುವ ಮೂಲಕ ಪ್ಲೇ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮೀನು ಹಿಡಿಯಲು ಹೋಗಿ ಬಾಲಕರಿಬ್ಬರ ದಾರುಣ ಸಾವು
Advertisement
गार्डन गैलेरिया मॉल के बार में धारावाहिक रामायण के संवाद को डब कर चलाने के प्रकरण में थाना सेक्टर-39 नोएडा पर सुसंगत धाराओं में FIR पंजीकृत की गई है तथा 01 अभियुक्त को गिरफ्तार किया गया है, अग्रिम आवश्यक कार्रवाई की जा रही है।
उक्त संबंध में @ADCPNoida द्वारा दी गई बाइट। pic.twitter.com/nO84Hpj4PH
— POLICE COMMISSIONERATE GAUTAM BUDDH NAGAR (@noidapolice) April 10, 2023
Advertisement
ಈ ಬಗ್ಗೆ ಪೊಲೀಸ್ (Police) ಅಧಿಕಾರಿಯೊಬ್ಬರು ಮಾತನಾಡಿ, ವಿಷಯ ತಿಳಿದ ತಕ್ಷಣ ಸೆಕ್ಟರ್ 39 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ರೆಸ್ಟೋರೆಂಟ್‍ನ ಮ್ಯಾನೇಜರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಗುವುದಿಲ್ಲ: ಹೆಚ್.ಡಿ.ಕುಮಾರಸ್ವಾಮಿ