ಕೊಪ್ಪಳ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಗುವುದಿಲ್ಲ. ಜೆಡಿಎಸ್ (JDS) ಸ್ಪಷ್ಟ ಬಹುಮತದ ಸರ್ಕಾರ ಸ್ಥಾಪನೆ ಆಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಭರವಸೆ ವ್ಯಕ್ತಪಡಿಸಿದ್ದಾರೆ.
ಗಂಗಾವತಿಯಲ್ಲಿ ಮಾತನಾಡಿದರುವ ಹೆಚ್‌ಡಿಕೆ, ರಾಜ್ಯದಲ್ಲಿ 123 ಸ್ಥಾನ ಗೆಲ್ಲಲು ಕೆಲಸ ಮಾಡುತ್ತಿದ್ದೇವೆ. ವಾತಾವರಣ ಸಹ ಅದೇ ರೀತಿಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಆರ್‌ಪಿಎಫ್ ನೇಮಕಾತಿ ಪರೀಕ್ಷೆ ಕನ್ನಡದಲ್ಲಿಯೂ ನಡೆಸುವಂತೆ ಸಿದ್ದರಾಮಯ್ಯ ಒತ್ತಾಯ
Advertisement
Advertisement
ಕರಡಿ ಸಂಗಣ್ಣ ಜೆಡಿಎಸ್‌ನಿಂದ ಸ್ಪರ್ಧಿಸುವ ಕುರಿತು ಮಾತನಾಡಿ, ಕರಡಿ ಸಂಗಣ್ಣ ನನ್ನ ಜೊತೆಗೆ ಮಾತನಾಡಿಲ್ಲ. ಸಮಯ ಬಂದಾಗ, ದೇವರು ಯಾರ‍್ಯಾರಿಗೆ ಏನೇನು ಆಟ ಆಡಿಸುತ್ತಾನೋ ನೋಡೋಣ ಎಂದು ಕರಡಿ ಸಂಗಣ್ಣ ಜೆಡಿಎಸ್‌ಗೆ ಬರಬಹುದೆಂದು ಪರೋಕ್ಷವಾಗಿ ನುಡಿದಿದ್ದಾರೆ.
Advertisement
ಗಂಗಾವತಿಯಲ್ಲಿ ಜನಾರ್ದನರೆಡ್ಡಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿ, ಅದು ಅವರ ತೀರ್ಮಾನ. ಅದರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ಅವರ ಬಗ್ಗೆ ನಾವು ಸಣ್ಣದಾಗಿ, ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 40 ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟು – ಏಪ್ರಿಲ್ 11ರಂದು ಬಿಜೆಪಿ ಫಸ್ಟ್ ಲಿಸ್ಟ್ ರಿಲೀಸ್..?
Advertisement
ರಾಜ್ಯದಲ್ಲಿ ಅಮುಲ್ ಉತ್ಪನ್ನಗಳ ಮಾರಾಟ ವಿಚಾರವಾಗಿ ಮಾತನಾಡಿ, ಅಮುಲ್‌ಗೆ ನಂದಿನಿ ಸರಿಸಾಟಿಯಾಗಿ ಬೆಳೆಯುತ್ತಿದೆ. ನಂದಿನಿಯನ್ನು ಮುಗಿಸುವ ಸಂಚು ನಡೆಯುತ್ತಿದೆ. ಈ ಸರ್ಕಾರ ಹುಡುಗಾಟಿಕೆ ಆಡ್ತಾ ಇದೆ. ಇವರಲ್ಲಿ ಹಲವರು ಇದಕ್ಕೆ ಕುಮ್ಮಕ್ಕು ಕೋಡ್ತಾ ಇದ್ದಾರೆ. ಅವರಿಗೆ ಎಚ್ಚರಿಕೆ ಕೊಡ್ತೀನಿ. ಇನ್ನು 15-20 ದಿನದಲ್ಲಿ ಈ ಸರ್ಕಾರ ಉಳಿಯುವುದಿಲ್ಲ. ಆಮೇಲೆ ನಮ್ಮ ಸಂಪತ್ತು, ಆಸ್ತಿ ಉಳಿಸೋದು ಹೇಗೆ ಅಂತ ನೋಡುತ್ತೇವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.