ಬೆಂಗಳೂರು: ಯಾವುದೋ ಸ್ಫೋಟಕ ವಸ್ತು ಎಂದು ಭಿಕ್ಷುಕ (Beggar) ಮಾಡಿದ ಯಡವಟ್ಟಿಗೆ ಪೊಲೀಸರು (Police) ಮತ್ತು ಬಾಂಬ್ ಸ್ಕ್ವಾಡ್ (Bomb Squad) ಕಲಾಸಿಪಾಳ್ಯಕ್ಕೆ (Kalasipalya) ಆಗಮಿಸಿದ ಪ್ರಸಂಗ ಇಂದು ನಡೆದಿದೆ.
ಕಲಾಸಿಪಾಳ್ಯದ ಖಾಸಗಿ ಬ್ಯಾಂಕ್ ಬಳಿ ಎಟಿಎಂಗೆ ಹಣ ತುಂಬುವ ಮೂರು ಬಾಕ್ಸ್‌ಗಳು ಪತ್ತೆಯಾಗಿವೆ. ಬಾಕ್ಸ್‌ಗಳನ್ನು ನೋಡಿದ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಹತ್ತಿರ ಹೋಗದೇ ಬಾಂಬ್ ಸ್ಕ್ವಾಡ್‌ಗೆ ಮಾಹಿತಿ ನೀಡಿದ್ದಾರೆ. ಒಂದು ಹಣವಿರಬೇಕು, ಇಲ್ಲವಾದರೆ ಏನಾದರೂ ಸ್ಫೋಟಕವಿರಬಹುದು ಎಂಬ ಶಂಕೆ ಇತ್ತು. ಇದನ್ನೂ ಓದಿ: ದೇವಾಲಯಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ: ರಾಮಲಿಂಗಾ ರೆಡ್ಡಿ
Advertisement
Advertisement
ನಂತರ ಸ್ಥಳಕ್ಕೆ ಆಗಮಿಸಿದ ಬಾಂಬ್ ಸ್ಕ್ವಾಡ್ ಮತ್ತು ಪೊಲೀಸರು ಸೇರಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ವೇಳೆ ಅವು ಖಾಲಿ ಬಾಕ್ಸ್‌ಗಳು ಎಂದು ಪತ್ತೆಯಾಗಿದೆ. ಬಳಿಕ ಸ್ಥಳೀಯ ಸಿಸಿಟಿವಿಯನ್ನು ನೋಡಿದ್ದಾಗ ಭಿಕ್ಷುಕನೊಬ್ಬ ಮೂರು ಬಾಕ್ಸ್‌ಗಳನ್ನು ತಂದಿಟ್ಟಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗಳೂರಿಗೆ ಬಂತು ಡ್ರೈವರ್‌ಲೆಸ್ ಮೆಟ್ರೋ
Advertisement
Advertisement
ಎಟಿಎಂಗೆ ಹಣ ತುಂಬಲು ಬಳಸುವ ಬಾಕ್ಸ್‌ಗಳು ಭಿಕ್ಷುಕನ ಬಳಿ ಹೇಗೆ ಬಂತು ಎನ್ನುವುದರ ಬಗ್ಗೆ ಕಲಾಸಿಪಾಳ್ಯ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದನ್ನೂ ಓದಿ: 89 ವರ್ಷ ವಯಸ್ಸಿನ ಅಜ್ಜನಿಗೆ ಡಾಕ್ಟರೇಟ್