ಉಡುಪಿ: ಜಿಲ್ಲೆಯ ಪೆರ್ಡೂರರಲ್ಲಿ ದನಗಳ ಕಳ್ಳಸಾಗಾಣಿಕೆ ಆರೋಪ ಮತ್ತು ಹಸನಬ್ಬ ಕೊಲೆ ಕೇಸಲ್ಲಿ ಎಸ್‍ಐ ಸೇರಿದಂತೆ ಮೂವರು ಪೊಲೀಸರನ್ನೇ ಬಂಧಿಸಲಾಗಿದೆ.
ಹಿರಿಯಡ್ಕ ಎಸ್‍ಐ ಡಿ ಎನ್ ಕುಮಾರ್, ಪೊಲೀಸ್ ಜೀಪ್ ಚಾಲಕ ಗೋಪಾಲ್ ಮತ್ತು ಹೆಡ್ ಕಾನ್ಸ್ ಸ್ಟೇಬಲ್ ಮೋಹನ್ ಕೋತ್ವಾಲ್ ಬಂಧಿತ ಆರೋಪಿಗಳು.
Advertisement
ಮೇ 30ರಂದು ಮಧ್ಯರಾತ್ರಿ 1 ಗಂಟೆಗೆ ಪೆರ್ಡೂರರಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷದ್ (ವಿಹೆಚ್‍ಪಿ) ಗುಂಪೊಂದು ದನ ಸಾಗಾಟ ಮಾಡುತ್ತಿದ್ದ ಟೆಂಪೂ ತಡೆದು ನಿಲ್ಲಿಸಿತ್ತು. ಈ ವೇಳೆ ಜೊತೆಗಿದ್ದವರು ಓಡಿಹೋಗಿದ್ದರು. ಆದರೆ 61 ವರ್ಷದ ಹಸನಬ್ಬ ಎರಡೂ ಸಂಘಟನೆಯವರ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡು ಪೊಲೀಸ್ ಜೀಪಿನಲ್ಲಿ ಮೃತಪಟ್ಟಿದ್ದರು. ಇದನ್ನು ಓದಿ: ದನದ ವ್ಯಾಪಾರಿ ಅನುಮಾನಾಸ್ಪದ ಸಾವು – ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು!
Advertisement
ಮೃತದೇಹವನ್ನು ಪೊಲೀಸ್ ಠಾಣೆಗೆ ತಂದ ನಂತರ ಪೊಲೀಸರ ಸಹಾಯದಿಂದಲೇ ಅಜ್ಞಾತ ಸ್ಥಳದಲ್ಲಿ ಎಸೆದು ಹೋಗಲಾಗಿತ್ತು. ಓಡಿಹೋಗುವ ವೇಳೆ ಹಾರ್ಟ್ ಅಟ್ಯಾಕ್ ಆಗಿ ಹಸನಬ್ಬ ಅಸಹಜವಾಗಿ ಸಾವನ್ನಪ್ಪಿದ್ದಾರೆ ಅಂತ ಕೇಸ್ ದಾಖಲಿಸಿ ಪ್ರಕರಣವನ್ನೇ ಮುಚ್ಚಿಹಾಕುವ ಯತ್ನ ನಡೆಸಿದ್ದರು.
Advertisement
ಅಲ್ಲದೇ ಘಟನಾ ಸ್ಥಳದಿಂದ ಒಂದು ಕಿಮೀ ದೂರ ಶವ ಇರಿಸಿದ್ದರು. ಈ ಕಾರಣಕ್ಕೆ ಈ ಪ್ರಕರಣದಲ್ಲಿ ಕೇಸ್‍ನಲ್ಲಿ ಭಾಗಿಯಾಗಿದ್ದ ಸೂರಿ, ಪ್ರಸಾದ್, ಉಮೇಶ್, ರತನ್, ಬಜರಂಗದಳ, ವಿಹೆಚ್‍ಪಿ ಕಾರ್ಯಕರ್ತರು ಸೇರಿ ಇಲ್ಲಿವರೆಗೆ 10 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.
Advertisement