ಬೆಂಗಳೂರು: ಮಕ್ಕಳೆದುರೇ ಪ್ರಿಯಕರನ (Lover) ಜೊತೆ ಸೇರಿ ಗಂಡನನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಹೆಂಡತಿ ಹಾಗೂ ಪ್ರಿಯಕರನನ್ನ ನಂದಿನಿ ಲೇಔಟ್ ಪೊಲೀಸರು (Police) ಬಂಧಿಸಿದ್ದಾರೆ.
ಕೊಲೆ ಮಾಡಿರುವ ವಿಚಾರ ಯಾರಿಗೂ ಹೇಳದಂತೆ ಮಕ್ಕಳಿಗೆ ಬಾಯಿ ಮುಚ್ಚಿಸಿದ್ದ ಅನಿತಾ ಹೃದಯಾಘಾತ (Heart Attack) ಎಂದು ಕಥೆ ಕಟ್ಟಿದ್ದಳು. ತಮ್ಮ ಪೋಷಕರೂ ಅನಿತಾ ಮಾತನ್ನು ನಂಬಿದ್ದರು. ಇದನ್ನೂ ಓದಿ: ಸ್ತಬ್ಧ ಚಿತ್ರಕ್ಕೆ ಅವಕಾಶ ಕೊಡದಿದ್ರೆ ಕೇಂದ್ರ ಸಚಿವರಿಗೆ ಘೇರಾವ್ ಹಾಕ್ತೇವೆ: ಡಿಕೆ ಸುರೇಶ್ ಎಚ್ಚರಿಕೆ
ಅನಿತಾ 6 ತಿಂಗಳ ಬಳಿ ಮಕ್ಕಳನ್ನ ಬಿಟ್ಟು ಪ್ರಿಯಕರ ರಾಕೇಶ್ ಜೊತೆ ಎಸ್ಕೇಪ್ ಆಗಿದ್ದಳು. ಇದರಿಂದ ಮಕ್ಕಳು ಅಜ್ಜಿ ಮನೆಯಲ್ಲೇ ಉಳಿದುಕೊಂಡಿದ್ದರು. ಈ ವೇಳೆ ಮೊಮ್ಮಕ್ಕಳು ಅಜ್ಜಿಯೊಂದಿಗೆ ಅನಿತಾ ಕೊಲೆ ಮಾಡಿರುವ ವಿಚಾರ ಹೇಳಿದ್ದರು. ಇದು ಗೊತ್ತಾದ ಕೂಡಲೇ ಅನಿತಾ ಪೋಷಕರು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಇದನ್ನೂ ಓದಿ: ಜಸ್ಟ್ ಫನ್‍ಗಾಗಿ ಬಾಂಬ್ ಬೆದರಿಕೆ ಹಾಕಿದ್ದೆ – ಪೊಲೀಸರ ಮುಂದೆ ಅಪ್ರಾಪ್ತ ಬಾಲಕ ಹೇಳಿಕೆ
ಮಕ್ಕಳ ಹೇಳಿಕೆ ಆಧಾರದ ಮೇಲೆ ಕೊಲೆ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು (Nandini Layout Police) ಅನಿತಾ ಹಾಗೂ ಪ್ರಿಯಕರ ರಾಕೇಶ್‌ನನ್ನ ಬಂಧಿಸಿದ್ದಾರೆ. ಆರೋಪಿಗಳು (Accused) ವಿಚಾರಣೆ ವೇಳೆ ಮಲಗಿದ್ದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k