ಬೆಂಗಳೂರು: ಕುಖ್ಯಾತ ರೌಡಿ ಬಲರಾಮನ ಸಹಚರ ಮುಲಾಮ ಅಲಿಯಾಸ್ ಲೋಕೇಶ್ ನನ್ನು ಮತ್ತೆ ಬಂಧಿಸಲಾಗಿದೆ.
ಇಂದು ನಸುಕಿನ ಜಾವ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸ್, ದೇವನಹಳ್ಳಿ ಏರ್‌ಪೋರ್ಟ್ ಬಳಿ ಕುಖ್ಯಾತ ರೌಡಿ ಮುಲಾಮನನ್ನ ಅರೆಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಮುಲಾಮನ ವಿರುದ್ಧ ಎರಡು ಜೀವ ಬೆದರಿಕೆ ಕೇಸ್ ದಾಖಲಾಗಿತ್ತು. ಮುಲಾಮ ಭೂಮಿ ಕಬಳಿಸಲು ಹೋಗಿ ಕೊಲೆ ಬೆದರಿಕೆ ಹಾಕಿದ್ದನು.
Advertisement
18ನೇ ವಯಸ್ಸಿಗೆ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದ ಮುಲಾಮನ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ರಾಜರಾಜೇಶ್ವರಿ ನಗರದಲ್ಲಿ ಕೋಟ್ಯಾಂತರ ರೂ. ಬೆಲೆ ಬಾಳುವ ಬಹುಮಹಡಿಯ ಬಂಗಲೆ ಕಟ್ಟಿಕೊಂಡು ಅಲ್ಲಿ ಮುಲಾಮ ವಾಸಿಸುತ್ತಿದ್ದಾನೆ. 18ನೇ ವಯಸ್ಸಿಗೆ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ಮುಲಾಮ ಹೆಸರಲ್ಲಿ, 1985ರಲ್ಲಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಮೊದಲ ಬಾರಿಗೆ ರೌಡಿಪಟ್ಟಿ ತೆರೆಯಲಾಗಿತ್ತು.
Advertisement
Advertisement
ರಾಜಗೋಪಾಲನಗರ, ಕಾಮಾಕ್ಷಿಪಾಳ್ಯ, ರಾಜಾರಾಜೇಶ್ವರಿನಗರ ಪೊಲೀಸ್ ಠಾಣೆ ರೌಡಿ ಶೀಟರ್ ಪಟ್ಟಿಯಲ್ಲಿ ಈತನ ಹೆಸರಿದೆ. ಮುಲಾಮ 7ನೇ ತರಗತಿ ತನಕ ವ್ಯಾಸಂಗ ಮಾಡಿದ್ದು, ಓದನ್ನು ಅರ್ಧಕ್ಕೆ ಬಿಟ್ಟಿದ್ದನು. ಈತ ವೆಲ್ಡರ್ ಕೆಲಸ ಮಾಡಿಕೊಂಡಿದ್ದನು. ಸಹಚರರೊಂದಿಗೆ ಸೇರಿಕೊಂಡು ಕೊಲೆ, ಕೊಲೆಯತ್ನ, ದೊಂಬಿ, ಹೊಡೆದಾಟ, ಅಪಹರಣ ಮುಂತಾದ ಪ್ರಕರಣದಲ್ಲಿ ಭಾಗಿಯಾಗಿದ್ದನು.
Advertisement
ಮೊದಲು ಕುಖ್ಯಾತ ರೌಡಿ ಬಲರಾಮನ ಸಹಚರನಾಗಿದ್ದ ಈತ, ಬಲರಾಮನ ಮರಣದ ನಂತರ ತನ್ನದೇ ಗುಂಪು ಕಟ್ಟಿಕೊಂಡಿದ್ದನು. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಕೈ ಹಾಕಿದ್ದ ಈತ ಅಪಾರ ಹಣಗಳಿಸಿದ್ದ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv