ಗಾಂಧಿನಗರ: ಆಹಾರದ ಬದಲು ಬ್ಯಾಗಿನಲ್ಲಿ ಬಿಯರ್ ಕೊಂಡೊಯ್ಯುತ್ತಿದ್ದ ಡೆಲಿವರಿ ಬಾಯ್‍ಯೋರ್ವನನ್ನು ಪೊಲೀಸರು ಸೆರೆಹಿಡಿದಿರುವ ಘಟನೆ ಗುಜರಾತ್‍ನ ವಡೋದರದಲ್ಲಿ ನಡೆದಿದೆ.
ಇತ್ತೀಚಿಗೆ ಆಹಾರ ಪದಾರ್ಥಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ, ಝೊಮ್ಯಾಟೋ ರೀತಿಯ ಅನೇಕ ಫುಡ್ ಆ್ಯಪ್‍ಗಳು ಜನರನ್ನು ಆಕರ್ಷಿಸುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ಝೊಮ್ಯಾಟೋ ಡೆಲಿವರಿ ಬಾಯ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಇದೇ ಬೆನ್ನಲ್ಲೇ ಈಗ ಸ್ವಿಗ್ಗಿ ಆ್ಯಪ್ ಕೂಡ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
Advertisement
ಆರೋಪಿಗಳನ್ನು ಸ್ವಿಗ್ಗಿ ಸಿಬ್ಬಂದಿ ವೀರೇಂದ್ರ ಸಿನ್ಹಾ ಮಹೀದಾ ಹಾಗೂ ಮದ್ಯ ನೀಡುತ್ತಿದ್ದ ವಿಜೇಂದ್ರ ಸಿನ್ಹಾ ಎಂದು ಗುರುತಿಸಲಾಗಿದೆ. ವಡೋದರದಲ್ಲಿ ಗ್ರಾಹಕನಿಗೆ ಡೆಲಿವರಿ ನೀಡಲು ಹೋಗಿದ್ದ ಡೆಲಿವರಿ ಬಾಯ್ ಆಹಾರ ಪದಾರ್ಥದ ಬದಲು ಬಿಯರ್ ಕ್ಯಾನ್‌ಗಳನ್ನು ಕೊಂಡೊಯ್ಯುತ್ತಿದ್ದನು. ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಡೆಲಿವರಿ ಬಾಯ್ ಬ್ಯಾಗ್‍ನಲ್ಲಿದ್ದ 6 ಬಿಯರ್ ಕ್ಯಾನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
Advertisement
ರಾಹುಲ್ ಮದ್ಯವನ್ನು ಕದ್ದುಮುಚ್ಚಿ ಗ್ರಾಹಕರಿಗೆ ಡೆಲಿವರಿ ಮಾಡುತ್ತಿದ್ದನು. ಆತನಿಗೆ ವೀರೇಂದ್ರ ಸಿನ್ಹಾ ಮದ್ಯ ನೀಡಿ ಈ ಕೆಲಸದಲ್ಲಿ ಸಾಥ್ ನೀಡುತ್ತಿದ್ದನು.
Advertisement
ರಾಹುಲ್ ಕಳೆದ 7 ತಿಂಗಳ ಹಿಂದೆಯಷ್ಟೆ ಸ್ವಿಗ್ಗಿ ಆನ್‍ಲೈನ್ ಡೆಲಿವರಿ ಸಂಸ್ಥೆಯನ್ನು ಸೇರಿಕೊಂಡಿದ್ದನು. ಇದಕ್ಕೂ ಮುಂಚೆ ಕೂಡ ಆತ ಕೆಲವು ಬಾರಿ ಗ್ರಾಹಕರಿಗೆ ಮದ್ಯದ ಬಾಟಲಿಗಳನ್ನು ಡೆಲಿವರಿ ನೀಡಿದ್ದನು. ಆದರೆ ಸಿಕ್ಕಿಹಾಕಿಕೊಂಡಿರಲಿಲ್ಲ, ಈ ಬಗ್ಗೆ ಸ್ವಿಗ್ಗಿ ಕಂಪನಿಗೆ ಗೊತ್ತಿರಲಿಲ್ಲ. ಅದೇ ಧೈರ್ಯದಿಂದ ಭಾನುವಾರವು ಗ್ರಾಹಕನಿಗೆ ಮದ್ಯ ಸಾಗಿಸುತ್ತಿದ್ದನು. ಅದನ್ನು ಡೆಲಿವರಿ ನೀಡುವ ಮೊದಲೇ ರಾಹುಲ್‍ನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಹಾಗೆಯೇ ಆತನ ಬಳಿ ಇದ್ದ ಬೈಕ್, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ. ಆದರೆ ಇನ್ನೋರ್ವ ಆರೋಪಿ ವೀರೇಂದ್ರ ಪೊಲೀಸರ ಕೈಗೆ ಸಿಗದೇ ಪರಾರಿಯಾಗಿದ್ದಾನೆ.
ಇಷ್ಟು ದಿನ ಎಲ್ಲೆಡೆ ಬರೀ ಝೊಮ್ಯಾಟೋ ವಿಚಾರ ಚರ್ಚೆಯಾಗುತಿತ್ತು. ಈಗ ಸ್ವೀಗ್ಗಿ ಕೂಡ ಅದರ ಸಾಲಿಗೆ ಸೇರಿಕೊಂಡಿದೆ. ಸದ್ಯ ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪರಾರಿಯಾಗಿರುವ ಆರೋಪಿಯನ್ನು ಬಂಧಿಸಲು ಬಲೆ ಬೀಸಿದ್ದಾರೆ.