ಬೀದರ್: ಅಕ್ರಮವಾಗಿ ಗಾಂಜಾ (Drugs) ಸಾಗಾಟ ಮಾಡುತ್ತಿದ್ದ ನಾಲ್ವರು ಗಾಂಜಾ ಖದೀಮರನ್ನು ಬಂಧಿಸಿ ಬೀದರ್ (Bidar) ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ.
ತೆಲಂಗಾಣದಿಂದ (Telangana) ಮಹಾರಾಷ್ಟ್ರಕ್ಕೆ (Maharashtra) ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಅಲ್ಲದೇ 2 ಕೆಜಿ ತೂಕದ 50 ಗಾಂಜಾ ಪ್ಯಾಕೆಟ್‌ಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 100 ಕೆಜಿ ಗಾಂಜಾವನ್ನು ಜಪ್ತಿ (Confiscation) ಮಾಡಿದ್ದು, ಸುಮಾರು 1 ಕೋಟಿ ರೂ. ಮೌಲ್ಯದ ಗಾಂಜಾವನ್ನು ಬೀದರ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿ ಘರ್ಷಣೆ – 4 ಎಫ್‌ಐಆರ್, 18 ಜನರ ವಶಕ್ಕೆ ಪಡೆದ ಖಾಕಿ ಪಡೆ
ಅಕ್ರಮ ಗಾಂಜಾ ಸಾಗಾಟಕ್ಕೆ ಬಳಸಿದ ಒಂದು ಕಾರು ಹಾಗೂ ನಾಲ್ಕು ಮೊಬೈಲ್‌ಗಳನ್ನು ಬೀದರ್ ಜಿಲ್ಲೆಯ ಹುಮ್ನಾಬಾದ್ (Humnabad) ಬಳಿ ಜಪ್ತಿಪಡಿಸಲಾಗಿದೆ. ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಪೊಲೀಸರು ಅಪಾರ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: 8 ಕ್ವಿಂಟಾಲ್ ಗೋಮಾಂಸವಿದ್ದ ಮೀನಿನ ವಾಹನ ಪಲ್ಟಿ
ಈ ಕುರಿತು ಮನ್ನಏಖೇಳ್ಳಿ (Mannaekhelli) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ ಎಸ್ಪಿ ಚನ್ನಬಸವಣ್ಣ ಲಂಗೋಟಿ ಪ್ರೋತ್ಸಾಹಧನ ನೀಡಿ ಗೌರವಿಸಿದರು. ಇದನ್ನೂ ಓದಿ: ಸಹೋದರನ ಜೊತೆ ಜಗಳವಾಡಿ ಮೊಬೈಲನ್ನೇ ನುಂಗಿದ್ಳು!