ತುಮಕೂರು: ಹುಳಿಯಾರು ಠಾಣೆಯ ಮಹಿಳಾ ಕಾನ್ಸ್‌ಟೇಬಲ್ (Constable) ಸುಧಾ ಕಿಡ್ನ್ಯಾಪ್ & ಮರ್ಡರ್ (Kidnap And Murder) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
Advertisement
ಪ್ರಕರಣ ಸಂಬಂಧ ಹುಳಿಯಾರು ಠಾಣೆಯ ಮತ್ತೊಬ್ಬ ಲೇಡಿ ಕಾನ್ಸ್‌ಟೇಬಲ್ ಎಸ್.ರಾಣಿ ಹಾಗೂ ಆರೋಪಿ ನಿಖೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ. ನಿಖೇಶ್ ಹಾಗೂ ಮಂಜುನಾಥ್ ಎಂಬುವವರು ರಾಣಿ ಸೂಚನೆ ಮೇರೆಗೆ ಸುಧಾ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಸುಧಾಳನ್ನು ಕೊಲೆ ಮಾಡಲೇಬೇಕು ಅಂತ ರಾಣಿ ತಾಕೀತು ಮಾಡಿದ್ದಳು. ರಾಣಿಯ ಆಜ್ಞೆ ಮೇರೆಗೆ ಮಂಜುನಾಥ್ ಮತ್ತು ನಿಖೇಶ್ ಒಂದು ತಿಂಗಳಿಂದ ಕೊಲೆಗೆ ಸಂಚು ರೂಪಿಸಿದ್ದರು. ಹಾಗೂ ಒಮ್ಮೆ ಕೊಲೆಗೆ ಯತ್ನ ಕೂಡ ಮಾಡಿದ್ದರು. ಸುಧಾಳ ಮಗನನ್ನು ನೋಡಿಕೊಂಡು ಬರುವ ನೆಪದಲ್ಲಿ ಒಮ್ಮೆ ಸಾಗರಕ್ಕೆ ಕರೆದುಕೊಂಡು ಹೋಗಿದ್ದ ಮಂಜುನಾಥ್ ಮತ್ತು ನಿಖೇಶ್, ಸುಧಾಳ ಕೊಲೆಗೆ ಯತ್ನಿಸಿದ್ದರು. ಆದ್ರೆ ಅಂದು ಜೊತೆಯಲ್ಲಿ ಮಕ್ಕಳು ಇದ್ದಿದ್ರಿಂದ ಕೊಲೆ ಮಾಡೋಕೆ ಆಗಿರಲಿಲ್ಲ. ಕೊನೆಗೆ ಇದೇ ತಿಂಗಳು 13 ರಂದು ಮರ್ಡರ್ ಮಾಡೋಕೆ ಡೇಟ್ ಫಿಕ್ಸ್ ಮಾಡಿ ನಾಲ್ಕೈದು ಬಾರಿ ಕರೆ ಮಾಡಿ ಸುಧಾರನ್ನು ಚಿಕ್ಕನಾಯಕನಹಳ್ಳಿ ಶೆಟ್ಟಿಕೆರೆ ಗೇಟ್ ಬಳಿ ಕರೆಸಿಕೊಂಡಿದ್ದಾರೆ. ಬಳಿಕ ಕಾರಿನಲ್ಲಿ ಕೂರಿಸಿಕೊಂಡು ತಿಪಟೂರಿಗೆ ತೆರಳಿದ್ದಾರೆ. ಇದನ್ನೂ ಓದಿ: ಖಾಸಗಿ ಬಸ್ಸಿನ ನಿರ್ಲಕ್ಷ್ಯಕ್ಕೆ ಮುಗ್ಧ ವಿದ್ಯಾರ್ಥಿ ಬಲಿ- ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬಸ್ಥರು
Advertisement
Advertisement
ತಿಪಟೂರು ನಗರಕ್ಕೆ ಬರುತ್ತಿದ್ದಂತೆ ಮಂಜುನಾಥನೂ ಕೂಡ ಅದೇ ಕಾರ್ ಹತ್ತಿಕೊಂಡಿದ್ದಾನೆ. ಹತ್ತುತ್ತಿದ್ದಂತೆ ಸುಧಾಳ ಕಣ್ಣಿಗೆ ಮೂವ್ ಹಚ್ಚಿದ್ದಾನೆ. ಸುಧಾ ಕಣ್ಣು ಉಜ್ಜುತ್ತಿದ್ದಂತೆ ಮನಸೋ ಇಚ್ಛೆ ಚಾಕುವಿನಿಂದ ಇರಿದಿದ್ದಾನೆ. ಎದೆ, ಹೊಟ್ಟೆ, ಬೆನ್ನು, ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ರಸ್ತೆ ಬದಿಯಲ್ಲಿನ ಪೊದೆವೊಂದಕ್ಕೆ ಸುಧಾಳ ಮೃತ ದೇಹ ಎಸೆದು ಪರಾರಿ ಆಗಿದ್ದಾರೆ. ಸುಧಾ ಮತ್ತು ರಾಣಿ ಮಧ್ಯೆ ಕೆಲಸದ ವಿಚಾರವಾಗಿ ಜಗಳ ಇತ್ತು ಎನ್ನಲಾಗಿದೆ. ಈ ಹಿಂದೆ ರಾಣಿ ಕೋರ್ಟ್ ಬೀಟ್ ಮಾಡುತ್ತಿದ್ದಳು. ಆದ್ರೆ ಇತ್ತೀಚೆಗೆ ಸುಧಾ ಕೋರ್ಟ್ ಡ್ಯೂಟಿಯನ್ನು ತನಗೆ ಹಾಕಿಸಿಕೊಂಡಿದ್ದಳು. ಇದೇ ವಿಚಾರವಾಗಿ ದ್ವೇಷ ಹುಟ್ಟಿಕೊಂಡಿತ್ತು ಎನ್ನಲಾಗಿದೆ. ಇದನ್ನೂ ಓದಿ: ಯುವ ನಟಿ ದೀಪಾ ಆತ್ಮಹತ್ಯೆಗೆ ಆ ಹುಡುಗನೆ ಕಾರಣ ?: ಅವನು ಇನ್ನೂ ನಿಗೂಢ
Advertisement
Live Tv
[brid partner=56869869 player=32851 video=960834 autoplay=true]