ಬೆಂಗಳೂರು: ಇತ್ತೀಚಿಗಷ್ಟೇ ಪಬ್‍ಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಹೈಕೋರ್ಟ್ ಚಾಟಿ ಬೀಸಿತ್ತು. ಇದಾದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಲೇಟ್‍ನೈಟ್ ಪಬ್‍ಗಳನ್ನು ಕ್ಲೋಸ್ ಮಾಡಿಸಿ ಕ್ರಮಕ್ಕೆ ಮುಂದಾಗಿದ್ದಾರೆ.
ಇತ್ತೀಚೆಗೆ ಇಂದಿರಾನಗರದಲ್ಲಿ ಸ್ಥಳೀಯರಿಗೆ ಪಬ್‍ಗಳಿಂದ ಶಬ್ದ ಮಾಲಿನ್ಯ ಆಗುತ್ತಿದೆ ಎಂದು ಸ್ಥಳೀಯರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ಅರ್ಜಿ ಕೈಗೆತ್ತಿಕೊಂಡ ಕೋರ್ಟ್ ಸರ್ಕಾರಕ್ಕೆ ಜಾಡಿಸಿತ್ತು. ಇದಾದ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರು ಪಬ್‍ಗಳ ಮೇಲೆ ನಿಗಾ ವಹಿಸಿದ್ದರು. ನಿಗದಿತ ಸಮಯಕ್ಕೆ ಪಬ್‍ಗಳು ಕ್ಲೋಸ್ ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದ್ದರು.
ಹೈಕೋರ್ಟ್ ಚಾಟಿ ಏಟಿನಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಎಲ್ಲ ಏರಿಯಾಗಳನ್ನು ಕಂಟ್ರೋಲ್‍ಗೆ ತೆಗೆದುಕೊಂಡಿದೆ. ಪಬ್‍ಗಳ ಮೇಲೆ ಖಾಕಿ ನಿಗಾವಿಟ್ಟಿದ್ದು ಎಂ.ಜಿ ರಸ್ತೆ, ಬ್ರಿಗೇಡ್ ರೋಡ್, ಇಂದಿರಾನಗರ, ಜಯನಗರ, ಕೋರಮಂಗಲ, ಎಚ್‍ಎಸ್‍ಆರ್ ಲೇಔಟ್ ಸೇರಿದಂತೆ ಹಲವೆಡೆ ಪೊಲೀಸರು ಗಸ್ತು ತಿರುಗುತ್ತಿದ್ದು ನಿಗದಿತ ಸಮಯಕ್ಕೆ ಪಬ್‍ಗಳು, ಬಾರ್ ಅಂಡ್ ರೆಸ್ಟೋರೆಂಟ್‍ಗಳು ಬಂದ್ ಆಗುವಂತೆ ನೋಡಿಕೊಂಡಿದ್ದಾರೆ. ಲೇಟ್‍ನೈಟ್ ಪಬ್‍ಗಳಿಗೆ ಖಾಕಿ ಕಡಿವಾಣ ಬಿದ್ದಿದ್ದು ಗುಂಪು-ಗಲಾಟೆ ಎಲ್ಲದಕ್ಕೂ ಕಡಿವಾಣ ಬಿದ್ದಿದೆ.
ಪಬ್ ಆಗಲಿ ಅಥವಾ ಬಾರ್ ಅಂಡ್ ರೆಸ್ಟೋರೆಂಟ್ ಆಗಲಿ ಸಾರ್ವಜನಿಕರು ಸೇರುವ ಕಡೆ ಪೊಲೀಸರು ಗಸ್ತು ಇದ್ದರೆ ಕಾನೂನು ಸುವ್ಯವಸ್ಥೆ ಎಲ್ಲವೂ ಸರಿಯಾಗಿರುತ್ತೆ. ಹಾಗೆ ಪ್ರಭಾವಿಗಳು, ರಾಜಕಾರಣಿಗಳು ನಡೆಸುವ ಪಬ್, ಬಾರ್ ಅಂಡ್ ರೆಸ್ಟೋರೆಂಟ್‍ಗೆ ಒಂದು ನಿಯಮ, ಬೇರೆಯವರಿಗೆ ಒಂದು ನಿಯಮ ಮಾಡದೇ ಎಲ್ಲರಿಗೂ ಒಂದೇ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಹೇಳಿದ್ದಾರೆ.