Belgaum

ಬೆಳಗಾವಿಯಲ್ಲಿ ಬೈಕ್ ಕಳ್ಳನ ಹೆಡೆಮುರಿ ಕಟ್ಟಿದ ಪೊಲೀಸರು – 11 ಬೈಕ್ ಜಪ್ತಿ

Published

on

Share this

ಬೆಳಗಾವಿ: ಬೆಳಗಾವಿಯ ಟಿಳಕವಾಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಓರ್ವ ಬೈಕ್ ಕಳ್ಳನಿಗೆ ಹೆಡೆಮುರಿ ಕಟ್ಟಿ ವಿವಿಧ ಕಂಪನಿಯ 11 ಬೈಕ್ ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ನಗರ ಹಾಗೂ ಸುತ್ತಮುತ್ತ ಬೈಕ್ ಕಳ್ಳತನ ಮಾಡುತ್ತಿದ್ದ. ಖಡೆ ಬಜಾರ್ ಎಸಿಪಿ ಚಂದ್ರಪ್ಪ, ಟಿಳಕವಾಡಿ ಸಿಪಿಐ ರಾಘವೇಂದ್ರ ಹವಾಲಾದ್ದರ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 9 ಲಕ್ಷ ಮೌಲ್ಯದ 11 ಬೈಕ್‍ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಆಯುಧ ಪೂಜೆ ಪ್ರಯುಕ್ತ ರಾಜಭವನದಲ್ಲಿ ರಾಜ್ಯಪಾಲರಿಂದ ವಿಶೇಷ ಪೂಜೆ

ಈ ದಾಳಿಯಲ್ಲಿ ಪಿಎಸ್ ಎಂ.ವೈ. ಕಾರಿಮಣಿ, ಸಿಬ್ಬಂದಿ ಕೆ.ಕೆ. ಸವದತ್ತಿ, ಎಂ.ಆರ್. ಗಡಕ್ಕರಿ, ಮಲ್ಲಿಕಾರ್ಜುನ ಪಾತ್ರುಟ ಉಪಸ್ಥಿತರಿದ್ದರು. ಟಿಳಕವಾಡಿ ಪೊಲೀಸರ ಕಾರ್ಯಚರಣೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನ್ಯೂಜಿಲೆಂಡ್ ಸರಣಿಗೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್?

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications