ಬೆಂಗಳೂರು: ಪ್ರಯಾಣಿಕರನ್ನು ಹತ್ತಿಸಿಕೊಳ್ಳೊದಕ್ಕೆ ಆಟೋ ನಿಲ್ಲಿಸಿದ್ದ ಚಾಲಕನನ್ನ ಸಿವಿಲ್ ಪೊಲೀಸ್ ಅವಾಚ್ಯ ಪದಗಳಿಂದ ನಿಂದಿಸಿ ಕೀ ಕಿತ್ತುಕೊಂಡಿರುವ ಘಟನೆ ಬೆಂಗಳೂರಿನ ಆನಂದ್ ರಾವ್ ಸರ್ಕಲ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ.
Advertisement
ಪ್ಯಾಸೆಂಜರ್ ಗಳು ಆಟೋಗೆ ಹತ್ತೋ ವೇಳೆಯಲ್ಲಿ ಅಲ್ಲೇ ಕೆಲಸದಲ್ಲಿದ್ದ ಉಪ್ಪಾರಪೇಟೆಯ ಸೀವಿಲ್ ಪೇದೆ ಆಟೋ ಚಾಲಕನಿಗೆ ಕೆಟ್ಟ ಕೆಟ್ಟ ಪದಗಳಿಂದ ಬೈದಿದ್ದಾರೆ. ಜೊತೆಗೆ ಆಟೋ ಕೀ ಕಸಿದುಕೊಂಡಿದ್ದಾರೆ. ಆಟೋ ಚಾಲಕ ಪೊಲೀಸರ ವರ್ತನೆಯನ್ನ ವಿರೋಧಿಸುತ್ತಿದ್ದಂತೆ ಅಲ್ಲೇ ಸಂಚಾರ ಮಾಡುತ್ತಿದ್ದ ಆಟೋ ಚಾಲಕರು ಈ ಚಾಲಕನ ನೆರವಿಗೆ ನಿಂತು ಪೊಲೀಸರ ಜೊತೆ ಮಾತಿನ ಸಮರ ನಡೆಸಿದ್ದಾರೆ. ಇದನ್ನೂ ಓದಿ: ಬೃಹತ್ ರಾಷ್ಟ್ರ ಧ್ವಜ ರ‍್ಯಾಲಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗರಿ
Advertisement
Advertisement
ಪೊಲೀಸರು ಅಂದರೆ ಹೇಗೆ ಬೇಕು ಹಾಗೆ ಕೆಟ್ಟದಾಗಿ ಬೈಯಬಹುದಾ ಎಂದು ಆಟೋ ಚಾಲಕರು ಪೊಲೀಸ್ ಪೇದೆಗೆ ತರಾಟೆ ತೆಗೆದುಕೊಂಡಿದ್ದಾರೆ. ಬಾಡಿಗೆಗೆ ಪ್ರಯಾಣಿಕರು ಕೈ ತೋರಿಸಿದಾಗ ನಿಲ್ಲಿಸದೇ ಹೋದ್ರೇ ಮುಂದೆ ಟ್ರಾಫಿಕ್ ಪೊಲೀಸರು ನಿಲ್ಲಿಸಿ ಫೈನ್ ಹಾಕ್ತರೆ. ಗಾಡಿ ನಿಲ್ಲಿಸಿ ಜನರನ್ನು ಹತ್ತಿಸಿಕೊಳ್ಳೊದಕ್ಕೆ ಹೋದ್ರೆ ಸಿವಿಲ್ ಪೊಲೀಸರು ಬಾಯಿಗೆ ಬಂದಂತೆ ಬೈಯುತ್ತಾರೆ ಎಂದು ಆರೋಪಿಸಿದ್ದಾರೆ.
Advertisement
ಈ ರೀತಿ ದೌರ್ಜನ್ಯ ಮಾಡುತ್ತಿದ್ದರೆ, ನಾವು ಹೇಗೆ ಜೀವನ ಮಾಡೋದು ಎಂದು ಆಟೋ ಚಾಲಕರು ಆಕ್ರೋಶವನ್ನ ಹೊರಹಾಕಿದ್ದು, ಆನಂದ್ ರಾವ್ ಸರ್ಕಲ್ ನಲ್ಲಿ ಆಟೋ ಚಾಲಕರು ಪೊಲೀಸರ ವರ್ತನೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ: ಸಣ್ಣ ಪ್ರಮಾಣದ ಡ್ರಗ್ಸ್ ಸೇವಿಸಿದವರಿಗೆ ಜೈಲು ಶಿಕ್ಷೆ ಬೇಡ!