ಬೆಂಗಳೂರು: ಒಂದೆಡೆ ಬಾಕಿ ಕೇಸ್‌ಗಳ ಇತ್ಯರ್ಥಕ್ಕೆ ರಾಜ್ಯಪಾಲರಿಗೆ ಸಲಹೆ ಕೊಟ್ಟಿರೋ ಸರ್ಕಾರ ಇನ್ನೊಂದೆಡೆ, ಪೋಕ್ಸೋ ಕೇಸಲ್ಲಿ ಯಡಿಯೂರಪ್ಪ (BS Yediyurappa) ಬಂಧಿಸಿದಂತೆ ನೀಡಿರೋ ಮಧ್ಯಂತರ ರಕ್ಷಣೆ ತೆರವು ಕೋರಿ ಹೈಕೋರ್ಟ್ ಮೆಟ್ಟಿಲೇರಿದೆ.
ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಬಂಧಿಸದಂತೆ ನೀಡಿದ್ದ ಆದೇಶ ತೆರವು ಕೋರಿ ಸಿಐಡಿ ಎಸ್‌ಪಿಪಿ ಎಸ್‌ಪಿಪಿ ಅಶೋಕ್ ನಾಯ್ಕ್ ಅವರಿಂದ ಹೈಕೋರ್ಟ್ಗೆ (Karnataka Highcourt) ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿಯನ್ನು ಇಂದು (ಆಗಸ್ಟ್ 22) ಕೈಗೆತ್ತಿಕೊಂಡ ನ್ಯಾ.ನಾಗಪ್ರಸನ್ನ ಅವರಿದ್ದ ಪೀಠ ಬಿಎಸ್‌ವೈ ಪರ ವಕೀಲರ (BSY Advocate) ಮನವಿ ಮೇರೆಗೆ ವಿಚಾರಣೆಯನ್ನು ಆಗಸ್ಟ್ 30ಕ್ಕೆ ಮುಂದೂಡಿದೆ. ಇದರಿಂದ ಯಡಿಯೂರಪ್ಪ ಮತ್ತೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಇದನ್ನೂ ಓದಿ: ಗಾಳಿಯೊಂದಕ್ಕೆ ಟ್ಯಾಕ್ಸ್ ಹಾಕಿಬಿಟ್ರೆ ಔರಂಗಜೇಬನ ಅಪ್ಪಂದಿರು ಅಂತ ತೋರ್ಸಕ್ಕೆ ಬೇರೇನೂ ಬೇಡ: ಸಿ.ಟಿ ರವಿ ಲೇವಡಿ
ಜಡ್ಜ್ ಹೇಳಿದ್ದೇನು?
ಈ ಅರ್ಜಿ ಲಿಸ್ಟ್ ಆಗಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಇಂದು ಲಿಸ್ಟ್ ಆಗಿಲ್ಲ. ಮಧ್ಯಾಹ್ನ 2.30ಕ್ಕೆ ವಕೀಲರು ಮನವಿ ಮಾಡಿದ್ರು. ಎಫ್‌ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ಇದೆ. ಅದಕ್ಕೆ ನೀವು ಚಾರ್ಜ್ ಶೀಟ್ ವಜಾಕ್ಕೆ ಕೇಳಲು ಆಗಲ್ಲ. FIR ಅರ್ಜಿ ರದ್ದು ಮಾಡುವ ಅರ್ಜಿ ವಾಪಸ್ ತೆಗೆದುಕೊಂಡು, ಚಾರ್ಜ್ ಶೀಟ್ ವಜಾಗೊಳಿಸಸಲು 482ಎ ಅಡಿ ಬೇರೆ ಅರ್ಜಿ ಸಲ್ಲಿಸಿ ಎಂದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ಅದ್ದೂರಿಯಾಗಿ ನಡೆದ ಮಹಾರಥೋತ್ಸವ: ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭಾಗಿ
ಈ ಮಧ್ಯೆ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಚುರುಕುಗೊಳಿಸಿದೆ. ಸಮನ್ಸ್ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಗುರುವಾರ ಲೋಕಾಯುಕ್ತ ಕಚೇರಿಗೆ ತೆರಳಿ 2ಗಂಟೆ ವಿಚಾರಣೆ ಎದುರಿಸಿದ್ದಾರೆ. ಲೋಕಾಯುಕ್ತ ಮಧ್ಯಾಹ್ನ 2 ಗಂಟೆಗೆ ಶುರುವಾದ ವಿಚಾರಣೆ ಸಂಜೆ ನಾಲ್ಕು ಗಂಟೆಯವರೆಗೂ ನಡೀತು. ಬಳಿಕ ಮಾತಾಡಿದ ಡಿಸಿಎಂ, ಇವರಿಗಿಂತ ಸಿಬಿಐನವರೇ ಪರವಾಗಿಲ್ಲ. ಒಂದು ದಿನವೂ ಕರೆದಿರಲಿಲ್ಲ. ಏನನ್ನೂ ಕೇಳಿರಲಿಲ್ಲ, ಆದ್ರೆ, ಇವರು ಈಗಲೇ ಹಿಂಸೆ ಕೊಡೋಕೆ ಶುರು ಮಾಡಿದ್ದಾರೆ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ರು. ಅಂದ ಹಾಗೇ, ಈ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಕಳೆದ ವರ್ಷ ಹಿಂಪಡೆದು, ಲೋಕಾಯುಕ್ತಕ್ಕೆ ವಹಿಸಿತ್ತು. ನಂತ್ರ ಡಿಕೆ ಶಿವಕುಮಾರ್ ವಿರುದ್ಧ ಲೋಕಾಯುಕ್ತ ಸಂಸ್ಥೆ ಎಫ್‌ಐಆರ್ ದಾಖಲಿಸಿತ್ತು. ಇದನ್ನೂ ಓದಿ: ನಿಮ್ಮೊಂದಿಗೆ ನಾವಿದ್ದೇವೆ.. ಸಿಎಂಗೆ ಶಾಸಕರ ಬಲ; ರಾಷ್ಟ್ರಪತಿಗಳ ಮುಂದೆ 135 ಶಾಸಕರಿಂದ ಪೆರೇಡ್‌ಗೆ ಸಂಪುಟ ನಿರ್ಧಾರ
ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ:
ರಾಜ್ಯಪಾಲರ ವಿರುದ್ಧ ಕೈ ನಾಯಕರ ನಿಂದನೆ ಖಂಡಿಸಿ ಹಾಗೂ ಸಿಎಂ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು, ಮಂಡ್ಯ, ಮೈಸೂರು, ಮಂಗಳೂರು, ಹೀಗೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೀತು. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ವಿರುದ್ಧ ಕೇಸರಿ ಪಡೆ ಧಿಕ್ಕಾರ ಸ್ವರ ಮೊಳಗಿಸಿತು. ಅಶಾಂತಿ ಸೃಷ್ಟಿಸ್ತೀವಿ, ಬಾಂಗ್ಲಾ ಪರಿಸ್ಥಿತಿ ಸೃಷ್ಟಿಸ್ತೀವಿ ಅನ್ನೋರ ಮೇಲೆ ಕ್ರಮ ಏಕಿಲ್ಲ? ಎಂದು ಬಿಜೆಪಿಗರು ಪ್ರಶ್ನೆ ಮಾಡಿದ್ರು. ರಾಜ್ಯಪಾಲರನ್ನು ನಿಂದಿಸೋರನ್ನು ಗಡಿಪಾರು ಮಾಡ್ಬೇಕು ಎಂದು ಆಗ್ರಹಿಸಿದ್ರು. ನಿಮಗೆ ತಾಕತ್ ಇದ್ರೆ ರಾಜಭವನಕ್ಕೆ ನುಗ್ಗಿ, ನಿಮಗೆ ತಾಕತ್ ಇದ್ರೆ ಮುಡಾ ಪ್ರಕರಣವನ್ನ ಸಿಬಿಐಗೆ ನೀಡಿ ಎಂದು ಸವಾಲ್ ಮೇಲೆ ಸವಾಲ್ ಹಾಕಿದ್ರು. ಸಿಎಂ ಸಿದ್ದರಾಮಯ್ಯ ಕ್ಷಣ ಕ್ಷಣಕ್ಕೂ ಸುಳ್ಳು ಹೇಳ್ತಾರೆ. ಮೊದಲು ನಾನು ಸೈಟ್ ಕೇಳಿಲ್ಲ ಅಂದ್ರು. ಈಗ ವೈಟ್ನರ್ ವಿಚಾರ ಕೇಳಿದ್ರೆ ಗೊತ್ತಿಲ್ಲ ಅಂತಾರೆ. ಯಾರನ್ನು ಜೈಲಿಗೆ ಹಾಕಬೇಕು ಅಂತಲೂ ಪ್ರಶ್ನೆ ಮಾಡಿದರು.