ಚಿತ್ರದುರ್ಗ: ಪೋಕ್ಸೋ ಪ್ರಕರಣದಿಂದಾಗಿ ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಾಕ್ಷ್ಯ ನಾಶ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ.
ಹೌದು. ಡಿವೈಎಸ್ ಪಿ ಅನಿಲ್ ಕುಮಾರ್ ನೇತೃತ್ವದ ತನಿಖಾ ತಂಡ ಮಠ ಮತ್ತು ವಿದ್ಯಾರ್ಥಿ ನಿಲಯದಲ್ಲಿ ಸ್ಥಳ ಮಹಜರು ನಡೆಸಿದೆ. ಈ ಮಹಜರು ವೇಳೆ ಸ್ಫೋಟಕ ವಿಷಯ ಬಯಲಾಗಿದೆ. ಇದನ್ನೂ ಓದಿ: ತನಿಖೆಗೆ ಸಹಕರಿಸದೇ ಮುರುಘಾ ಶ್ರೀ ಮತ್ತೆ ಆಸ್ಪತ್ರೆ ಸುತ್ತಾಟ
Advertisement
Advertisement
ಇಬ್ಬರು ವಿದ್ಯಾರ್ಥಿನಿಯರನ್ನು ಮುರುಘಾ ಶ್ರೀಗಳಿದ್ದ ಕೋಣೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಶ್ರೀಗಳು ಬಳಸುತ್ತಿದ್ದ ಕೋಣೆಯ ಸಂಪೂರ್ಣ ಬದಲಾಗಿದೆ. ಮಂಚ, ದಿಂಬು, ಕಾರ್ಪೆಟ್ ಎಲ್ಲವೂ ಬದಲಾಗಿದೆ ಎಂದು ತಿಳಿಸಿದ್ದಾರೆ. ಇಬ್ಬರ ಹೇಳಿಕೆಯಿಂದ ಶ್ರೀಗಳ ವಿರುದ್ಧವೇ ಪೊಲೀಸರಿಗೆ ಈಗ ಶಂಕೆ ಶುರುವಾಗಿದೆ.
Advertisement
ಇಂದು ಬೆಳಗ್ಗೆ 10 ಗಂಟೆಗೆ ಮಠಕ್ಕೆ ಕರೆದೊಯ್ಯಲಿರುವ ಪೊಲೀಸರು ಸ್ಥಳ ಮಹಜರು ಮಾಡುವ ಸಾಧ್ಯತೆಯಿದೆ. ಇಂದಿಗೆ 5 ದಿನ ಕಸ್ಟಡಿ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಸೋಮವಾರ ಶ್ರೀಗಳನ್ನು ಕೋರ್ಟ್‌ಗೆ ಹಾಜರು ಪಡಿಸಲಾಗುತ್ತದೆ.