ನವದೆಹಲಿ: ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಬಾಲಕಿ ವಯಸ್ಕಳಾದರೂ ಆಕೆಯ ಮೇಲಿನ ದೌರ್ಜನ್ಯ ತಡೆಯಲು ಪೋಕ್ಸೋ ಅನ್ವಯವಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ತಾನು ಲೈಂಗಿಕ ಸಂಬಂಧ ಹೊಂದಿದ್ದೆ ಎಂದು ಆರೋಪಿಸಲಾಗಿರುವ ಬಾಲಕಿಯು ಮೈನೆರೆದಿದ್ದು, ಆಕೆಯು ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ ವಯಸ್ಕಳಾಗಿದ್ದಾಳೆ. ಹೀಗಾಗಿ ಪೋಕ್ಸೊ ಕಾಯ್ದೆ ತನಗೆ ಅನ್ವಯಿಸದು ಎಂದು ವಾದಿಸಿದ್ದ ಆರೋಪಿಯ ವಾದವನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ. ಇದನ್ನೂ ಓದಿ: `ಪವಿತ್ರ’ಪ್ರೇಮ ವಿಫಲ – ಯುವಕ ಕೈಕೊಟ್ಟನೆಂದು ಕಾಲೇಜಿನಲ್ಲೇ ವಿದ್ಯಾರ್ಥಿನಿ ನೇಣಿಗೆ ಶರಣು
Advertisement
Advertisement
ಪೋಕ್ಸೊ ಕಾಯ್ದೆಗೆ ಸಂಪ್ರದಾಯದ ಕಾನೂನು ಅನ್ವಯಿಸುವುದಿಲ್ಲ. ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸಲು ಈ ಕಾನೂನನ್ನು ಜಾರಿಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ
Advertisement
ಮಕ್ಕಳ ಎಳೆಯ ಪ್ರಾಯ ರಕ್ಷಿಸಿ, ಅವರ ಮೇಲಿನ ದೌರ್ಜನ್ಯ ಹಾಗೂ ದುರ್ಬಳಕೆ ತಪ್ಪಿಸಲು ಮತ್ತು ಅವರ ಯೌವ್ವನವನ್ನು ಶೋಷಣೆಯಿಂದ ಪಾರು ಮಾಡುವುದು ಕಾನೂನಿನ ಉದ್ದೇಶ. ಹೀಗಾಗಿ ಸಂತ್ರಸ್ತೆಯು ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ ವಯಸ್ಕಳಾಗಿದ್ದು ಕಠಿಣವಾದ ಪೋಕ್ಸೊ ಕಾಯ್ದೆ ಅನ್ವಯಿಸದು ಎಂಬ ಅರ್ಜಿದಾರರ ವಾದವನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರಿದ್ದ ಪೀಠ ಹೇಳಿದೆ.
Advertisement
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376 (ಅತ್ಯಾಚಾರ), 377 (ಅಸ್ವಾಭಾವಿಕ ಅಪರಾಧ), 506 (ಕ್ರಿಮಿನಲ್ ಬೆದರಿಕೆ), 406 (ನಂಬಿಕೆ ದ್ರೋಹ) ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್ 6ರ ಅಡಿ ಎಫ್ಐಆರ್ ದಾಖಲಿಸಿರುವುದನ್ನು ವಜಾ ಮಾಡುವಂತೆ ಕೋರಿ ಆರೋಪಿ ಸಲ್ಲಿಸಿದ್ದ ಮನವಿಯ ವಿಚಾರಣೆಯ ನ್ಯಾಯಾಲಯ ಈಚೆಗೆ ನಡೆಸಿತು. ಇದನ್ನೂ ಓದಿ: ಫಸ್ಟ್ ನೈಟ್ ಅನ್ನೋದೇ ಇಲ್ಲ ಎಂದು ಹೇಳಿ ಪತಿಯನ್ನೇ ಬೆಚ್ಚಿ ಬೀಳಿಸಿದ ನಟಿ ಆಲಿಯಾ ಭಟ್
ಏನಿದು ಘಟನೆ?
ಈಚೆಗೆ ಬಾಲಕಿಯ ಮನೆಗೆ ತೆರೆಳಿದ್ದ ಆರೋಪಿಯು ಆಕೆಯನ್ನು ವಿವಾಹ ಮಾಡಿಕೊಡುವಂತೆ ಬಾಲಕಿಯ ಪೋಷಕರನ್ನು ಕೋರಿದ್ದ. ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ಬಳಿಕ ಆಕೆಯನ್ನು ವಿವಾಹ ಮಾಡಿಕೊಡುವ ಷರತ್ತಿನೊಂದಿಗೆ ಪೋಷಕರು ಒಪ್ಪಿಕೊಂಡಿದ್ದರು. ಅದಕ್ಕಾಗಿ ಬಾಲಕಿ ಕುಟುಂಬಸ್ಥರು ಹಲವು ಉಡುಗೊರೆಯ ಜೊತೆಗೆ 10 ಲಕ್ಷ ರೂಪಾಯಿಯನ್ನೂ ವರದಕ್ಷಿಣೆಗೆಂದು ನೀಡಿದ್ದರು. ಈನಡುವೆ ಆರೋಪಿಯು 16 ವರ್ಷದ ಬಾಲಕಿಯ ಜೊತೆ ಲೈಂಗಿಕ ಸಂಪರ್ಕ ಸಾಧಿಸಿದ್ದ ನಂತರ ಆಕೆಯನ್ನು ವಿವಾಹವಾಗಲು ನಿರಾಕರಿಸಿದ್ದ. ಇದರಿಂದಾಗಿ ಆತನ ವಿರುದ್ಧ ಎಫ್ಐಆರ್ ದಾಖಲಾಗಿತ್ತು.