ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪರೀಕ್ಷಾ ಪೇ ಚರ್ಚಾದ ಐದನೇ ಆವೃತ್ತಿಯನ್ನು ನಡೆಸಿಕೊಟ್ಟರು. ದೇಶಾದ್ಯಂತ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಮೋದಿ ಸಂವಾದ ನಡೆಸಿದರು.
ಪರೀಕ್ಷೆಗಳಿಗೆ ಸಿದ್ಧತೆ, ಓದು ಕುರಿತು ವಿದ್ಯಾರ್ಥಿಗಳು ಪ್ರಧಾನಿ ಮೋದಿ ಅವರಿಗೆ ಪ್ರಶ್ನೆಗಳನ್ನು ಕೇಳಿದರು. ಪರೀಕ್ಷೆ ಸಂದರ್ಭದಲ್ಲಿ ಒತ್ತಡಗಳನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಧಾನಿ ಹಲವು ಟಿಪ್ಸ್‌ಗಳನ್ನು ನೀಡಿದರು. ಇದನ್ನೂ ಓದಿ: 2 ವರ್ಷದಿಂದ ಜಾರಿಯಲ್ಲಿದ್ದ ಕಡ್ಡಾಯ ಮಾಸ್ಕ್ ನಿಯಮವನ್ನ ತೆಗೆದು ಹಾಕಿದ ತೆಲಂಗಾಣ ಸರ್ಕಾರ
Advertisement
Advertisement
ಪರೀಕ್ಷೆಗೆ ಮೋದಿ ಸಲಹೆ
* ಪರೀಕ್ಷೆಯ ಸಮಯದಲ್ಲಿ ನಾವು ಹಬ್ಬಗಳನ್ನು ಸಂಭ್ರಮಿಸಲು ಸಾಧ್ಯವಿಲ್ಲ. ಆದರೆ ನಾವು ಪರೀಕ್ಷೆಗಳನ್ನೇ ಹಬ್ಬವನ್ನಾಗಿ ಮಾಡಿದರೆ, ನಾವು ಅವುಗಳನ್ನು ಆನಂದಿಸಬಹುದು.
Advertisement
* ನೀವು ಪರೀಕ್ಷೆ ದೃಷ್ಟಿಯಿಂದ ಪಠ್ಯದ ಕೆಲವು ವಿಷಯಗಳ ಅಧ್ಯಯನ ಮಾಡಲು ಸಾಧ್ಯವಾಗದಿರಬಹುದು. ಆದರೆ ನೀವು ಅಧ್ಯಯನ ಮಾಡಿದ್ದರಲ್ಲಿ ನಂಬಿಕೆಯನ್ನು ಇಟ್ಟುಕೊಳ್ಳಿ. ಇದು ನಿಮಗೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಉಕ್ರೇನ್ ನಿರಾಶ್ರಿತರಿಗಾಗಿ ಅಪ್ಲಿಕೇಶನ್ ರೆಡಿ ಮಾಡಿದ 15ರ ಭಾರತೀಯ ಬಾಲಕ
Advertisement
* ಹೆದರಬೇಡಿ ಮತ್ತು ಅತಿಯಾಗಿ ಯೋಚಿಸಬೇಡಿ. ಅದು ನಿಮ್ಮನ್ನು ಇನ್ನಷ್ಟು ಗಾಬರಿಗೊಳಿಸುವಂತೆ ಮಾಡುತ್ತದೆ.
* ಆನ್‌ಲೈನ್‌ನಲ್ಲಿ ಮಾಹಿತಿಯನ್ನು ಹುಡುಕಬಹುದು ಮತ್ತು ಅದನ್ನು ಆಫ್‌ಲೈನ್‌ಗೆ ತಾಳೆಹಾಕಿ ನೋಡಬಹುದು.
* ನಿಮ್ಮ ಗಮನವನ್ನು ಕೇಂದ್ರೀಕರಿಸಲು ಸಮಯ ಗೊತ್ತುಪಡಿಸಿಕೊಳ್ಳಿ. ಈ ಸಮಯದಲ್ಲಿ ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಲ್ಲ, ಅದರ ಒಳಗಿನ ಸಾಲಿನಲ್ಲಿರುತ್ತೀರಿ. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಮೋದಿಗೆ ಸ್ಟಾಲಿನ್ ಮನವಿ