ನವದೆಹಲಿ: ನಾನು ಸೇನಾ ವೈದ್ಯ, ನರಶಸ್ತ್ರಚಿಕಿತ್ಸಕ, ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿ ಎಂದೆಲ್ಲ ಸುಳ್ಳು ಹೇಳಿಕೊಂಡು ಮಹಿಳೆಯರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಒರಿಸ್ಸಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಜನರನ್ನು ವಂಚಿಸಿದ ಆರೋಪದ ಮೇಲೆ ಕಾಶ್ಮೀರದ ಕುಪ್ವಾರದ ವ್ಯಕ್ತಿಯನ್ನು ಒಡಿಶಾದಲ್ಲಿ ಬಂಧಿಸಲಾಗಿದೆ. ಕಾಲಕಾಲಕ್ಕೆ ತಮ್ಮ ಗುರುತನ್ನು ಬದಲಾಯಿಸುತ್ತಿದ್ದ. ನರಶಸ್ತ್ರಚಿಕಿತ್ಸಕ, ಸೇನಾ ವೈದ್ಯ, ಪ್ರಧಾನ ಮಂತ್ರಿ ಕಚೇರಿಯ (PMO) ಅಧಿಕಾರಿ ಮತ್ತು ಉನ್ನತ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳ ನಿಕಟ ಸಹವರ್ತಿ ಎಂದೆಲ್ಲ ಹೇಳಿಕೊಂಡು ಓಡಾಡುತ್ತಿದ್ದ. ಇದನ್ನೂ ಓದಿ: ರಾಗಾಗೆ ಮತ್ತೆ ಸಂಕಷ್ಟ – ಜ.6ರಂದು ವಿಚಾರಣೆಗೆ ಹಾಜರಾಗುವಂತೆ UP ಕೋರ್ಟ್‌ನಿಂದ ಸಮನ್ಸ್
ಒಡಿಶಾ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್), ಜನರನ್ನು ವಂಚಿಸಿದ್ದಕ್ಕಾಗಿ 37 ವಯಸ್ಸಿನ ಸೈಯದ್ ಇಶಾನ್ ಬುಖಾರಿ ಅಲಿಯಾಸ್ ಇಶಾನ್ ಬುಖಾರಿ ಅಲಿಯಾಸ್ ಡಾ ಇಶಾನ್ ಬುಖಾರಿಯನ್ನು ಒಡಿಶಾದ ಜೈಪುರ ಜಿಲ್ಲೆಯ ನ್ಯೂಲ್‌ಪುರ ಗ್ರಾಮದಲ್ಲಿ ಶನಿವಾರ ಬಂಧಿಸಿದೆ.
ಹಲವಾರು ನಕಲಿ ಗುರುತುಗಳನ್ನು ಹೊಂದಿರುವ ವ್ಯಕ್ತಿ ಪಾಕಿಸ್ತಾನದ ಹಲವಾರು ಜನರೊಂದಿಗೆ ಮತ್ತು ಕೇರಳದ ಕೆಲವು ಅನುಮಾನಾಸ್ಪದ ಅಂಶಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಎಸ್‌ಟಿಎಫ್ ಇನ್ಸ್‌ಪೆಕ್ಟರ್ ಜನರಲ್ ಜೆ.ಎನ್.ಪಂಕಜ್ ಹೇಳಿದ್ದಾರೆ. ಇದನ್ನೂ ಓದಿ: ಆತ್ಮಾಹುತಿಗೂ ಪ್ಲಾನ್ ಮಾಡಿದ್ದ ಸಂಸತ್ ದಾಳಿಕೋರರು – ಶೀಘ್ರವೇ ಪ್ರತಾಪ್ ಸಿಂಹ ವಿಚಾರಣೆ
ಯುಎಸ್‌ನ ಉನ್ನತ ಐವಿ ಲೀಗ್ ಕಾಲೇಜಾಗಿರುವ ಕಾರ್ನೆಲ್ ವಿಶ್ವವಿದ್ಯಾಲಯದ ನಕಲಿ ವೈದ್ಯಕೀಯ ಪದವಿ ಪ್ರಮಾಣಪತ್ರ ಹೊಂದಿದ್ದ. ಕೆನಡಿಯನ್ ಹೆಲ್ತ್ ಸರ್ವಿಸಸ್ ಇನ್‌ಸ್ಟಿಟ್ಯೂಟ್ ಮತ್ತು ತಮಿಳಿನಲ್ಲಿ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್‌ನಿಂದ ವೈದ್ಯಕೀಯ ಪ್ರಮಾಣಪತ್ರವನ್ನು ನಕಲಿ ಮಾಡಿದ್ದ.
ಅಂತಾರಾಷ್ಟ್ರೀಯ ಪದವಿಗಳು, ಅಫಿಡವಿಟ್‌ಗಳು, ಬಾಂಡ್‌ಗಳು, ಎಟಿಎಂ ಕಾರ್ಡ್‌ಗಳು, ಖಾಲಿ ಚೆಕ್‌ಗಳು, ಆಧಾರ್ ಕಾರ್ಡ್‌ಗಳು ಮತ್ತು ವಿಸಿಟಿಂಗ್ ಕಾರ್ಡ್‌ಗಳನ್ನು ಇಟ್ಟುಕೊಂಡು ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದ್ದ. ಎಸ್‌ಟಿಎಫ್ ತಂಡಕ್ಕೆ ದೊರೆತ ಸುಳಿವು ಆಧರಿಸಿ ಪೊಲೀಸರು ನಡೆಸಿದ ದಾಳಿಯಲ್ಲಿ 100 ಕ್ಕೂ ಹೆಚ್ಚು ದಾಖಲೆಗಳು ಮತ್ತು ಹಲವಾರು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಪೆಂಟಗನ್ ಮೀರಿಸುವ ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣ ʻಸೂರತ್ ಡೈಮಂಡ್ ಬೋರ್ಸ್ʼ – ಭಾನುವಾರ ಪ್ರಧಾನಿ ಮೋದಿಯಿಂದ ಉದ್ಘಾಟನೆ