ನವದೆಹಲಿ: ‘ಹೆಣ್ಣುಮಕ್ಕಳನ್ನು ರಕ್ಷಿಸಿ’ ಎಂದು ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi) ಅವರು ಹೇಳುತ್ತಾರೆ ಆದರೆ ಅವರ ಪಕ್ಷ ‘ಅತ್ಯಾಚಾರಿಗಳನ್ನು ಉಳಿಸುವ’ ಕೆಲಸ ಮಾಡುತ್ತಿದೆ ಎಂದು ರಾಹುಲ್ ಗಾಂಧಿ (Rahul Gandhi) ಅವರು ಕಿಡಿಕಾರಿದ್ದಾರೆ.
ಉತ್ತರಾಖಂಡದಲ್ಲಿ 19 ವರ್ಷದ ಅಂಕಿತಾ ಭಂಡಾರಿ (Ankita Bhandari) ಹತ್ಯೆ ಮತ್ತು ಬಿಲ್ಕಿಸ್ (Bilkis Bano) ಅತ್ಯಾಚಾರಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧ ಟ್ವೀಟ್ ಮಾಡುವ ಮೂಲಕ ರಾಹುಲ್ ಗಾಂಧಿ ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: AAP ಉರುಳಿಸಲು ಬಿಜೆಪಿ, ಕಾಂಗ್ರೆಸ್ ಒಟ್ಟಾಗಿ ಕುತಂತ್ರ ನಡೆಸುತ್ತಿವೆ – ಭಗವಂತ್ ಮಾನ್
ನರೇಂದ್ರ ಮೋದಿ ಅವರು ‘ಬೇಟಿ ಬಚಾವೋ’ (Beti bachao) ಎಂದು ಹೇಳಿದರೆ, ಬಿಜೆಪಿ ಕಾರ್ಯಕರ್ತರು ರೇಪಿಸ್ಟ್ ಬಚಾವೋ (Rapists bachao) ಎಂದು ಹೇಳುತ್ತಿದ್ದಾರೆ. ಇವರು ಸುಳ್ಳು ಮತ್ತು ಪೊಳ್ಳು ಭಾಷಣಗಳನ್ನು ಮಾಡುತ್ತಿರುವ ದೇಶದ ಮೊದಲ ಪ್ರಧಾನಿಯಾಗಿದ್ದಾರೆ. ಅವರ ಆಡಳಿತ ಅಪರಾಧಿಗಳಿಗೆ ಮೀಸಲಾಗಿದೆ. ಆದರೆ ಭಾರತ ಈಗ ಮೌನವಾಗಿ ಕುಳಿತುಕೊಳ್ಳುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
प्रधानमंत्री का नारा – बेटी बचाओ
भाजपा के कर्म – बलात्कारी बचाओ
ये भारत के पहले प्रधानमंत्री हैं जिनकी विरासत होगी- सिर्फ़ भाषण, झूठे और खोखले भाषण। इनका शासन तो अपराधियों को समर्पित है।
अब भारत चुप नहीं बैठेगा। pic.twitter.com/YEYPjZWowp
— Rahul Gandhi (@RahulGandhi) September 27, 2022
ಉತ್ತರಾಖಂಡದ ಕಾಲುವೆಯೊಂದರಲ್ಲಿ ಅಂಕಿತಾ ಭಂಡಾರಿ ಮೃತದೇಹ ಪತ್ತೆಯಾಗಿದ್ದು, ಇದಾದ ಒಂದು ದಿನದ ನಂತರ ಭಾನುವಾರ ಅಂಕಿತಾ ಭಂಡಾರಿ ಅಂತಿಮ ವಿಧಿವಿಧಾನವನ್ನು ನೆರವೇರಿಸಲಾಗಿತ್ತು. ಉತ್ತರಾಖಂಡದ ರಿಷಿಕೇಶದಲ್ಲಿರುವ ಬಿಜೆಪಿ ಮುಖಂಡನ ಮಗಪುಲ್ಕಿತ್ ಆರ್ಯ ಮಾಲೀಕತ್ವದ ರೆಸಾರ್ಟ್‍ನಲ್ಲಿ ರಿಸೆಪ್ಷನಿಸ್ಟ್ ಆಗಿ ಅಂಕಿತಾ ಭಂಡಾರಿ ಕೆಲಸ ಮಾಡುತ್ತಿದ್ದಳು. ಆದರೆ ಬಲವಂತವಾಗಿ ವೇಶ್ಯಾವಾಟಿಕೆಗೆ ನೂಕಲು ಪ್ರಯತ್ನಿಸಿದಾಗ ಅದನ್ನು ನಿರಾಕರಿಸಿದ್ದಕ್ಕೆ ಅಂಕಿತಾ ಭಂಡಾರಿಯನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಈ ಸಂಬಂಧ ಉಚ್ಚಾಟಿತ ಬಿಜೆಪಿ ನಾಯಕನ ಮಗ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್‌ನಲ್ಲಿ ಗುಜರಾತ್ ಸರ್ಕಾರವು ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಿತು, ಈ ವಿಚಾರವಾಗಿ ರಾಜ್ಯದಲ್ಲಿ ಭಾರೀ ಪ್ರತಿಭಟನೆ ನಡೆಸಲಾಗಿತ್ತು. ಇದನ್ನೂ ಓದಿ: ಮಠದ ಹಣಕಾಸಿನ ವ್ಯವಹಾರಗಳಿಗೆ ಸಹಿ ಹಾಕಲು ಅವಕಾಶ ಕೊಡಿ – ಹೈಕೋರ್ಟ್‌ಗೆ ಮುರುಘಾ ಶ್ರೀ ಅರ್ಜಿ