– ಟ್ರಂಪ್, ಪುಟಿನ್, ಜಿನ್‌ಪಿಂಗ್ ಗೈರು; ಮೆಲೊನಿ ಜೊತೆ ಮಾತುಕತೆಯ ವೀಡಿಯೋ ವೈರಲ್
ಕೇಪ್‌ಟೌನ್: ದಕ್ಷಿಣ ಆಫ್ರಿಕಾದಲ್ಲಿ (South Africa) ಇದೇ ಮೊದಲ ಬಾರಿಗೆ ನಡೆಯುತ್ತಿರುವ ಜಿ-20 ಶೃಂಗಸಭೆಯ ಮೊದಲ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದು ಪಾಲ್ಗೊಂಡು ಮಾತನಾಡಿದರು. ಜೋಹಾನ್ಸ್‌ಬರ್ಗ್ ಶೃಂಗದಲ್ಲಿ ಜಾಗತಿಕ ಅಭಿವೃದ್ಧಿಯನ್ನ ದೃಷ್ಟಿಯಲ್ಲಿಟ್ಟುಕೊಂಡು ನಾಲ್ಕು ಹೊಸ ಸೂತ್ರಗಳನ್ನ ಮೋದಿ (Narendra Modi) ಪ್ರಸ್ತಾಪಿಸಿದ್ದಾರೆ.
It was wonderful meeting Prime Minister Keir Starmer in Johannesburg. This year has brought new energy to the India–UK partnership and we will keep driving it forward across many domains.@10DowningStreet @Keir_Starmer pic.twitter.com/LzQk7QPnaS
— Narendra Modi (@narendramodi) November 22, 2025
ಜ್ಞಾನ ಭಂಡಾರ, ಆಫ್ರಿಕಾ ಕೌಶಲ್ಯ ವೃದ್ಧಿ, ಜಾಗತಿಕ ಆರೋಗ್ಯ ಪ್ರತಿಕ್ರಿಯೆ ಮತ್ತು ಮಾದಕ ದ್ರವ್ಯ- ಭಯೋತ್ಪಾದನೆ ನಿಗ್ರಹ – ಈ ವಿಷಯಗಳಿಗೆ ಸಂಬಂಧಿಸಿದಂತೆ ಜಿ20ಯ ಎಲ್ಲಾ ರಾಷ್ಟ್ರಗಳು ಹೊಸ ಹೆಜ್ಜೆ ಇಡಬೇಕಿದೆ ಎಂದು ಮೋದಿ ಕರೆ ನೀಡಿದರಲ್ಲದೇ ಭಾರತೀಯ ಮೌಲ್ಯಗಳು ಜಗತ್ತಿನ ಪ್ರಗತಿಗೆ ದಾರಿದೀಪವಾಗಿದೆ. ಸಾಂಪ್ರದಾಯಿಕ ಜ್ಞಾನ ಭಂಡಾರವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಭಾರತವು ಶ್ರೀಮಂತ ಇತಿಹಾಸ ಹೊಂದಿದೆ. ಜೊತೆಗೆ ಉತ್ತಮ ಆರೋಗ್ಯ, ಯೋಗಕ್ಷೇಮ ರಕ್ಷಣೆಗೆ ಸಹಾಯ ಮಾಡುತ್ತದೆ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ದುಬೈ ಏರ್‌ಶೋನಲ್ಲಿ ತೇಜಸ್ ಫೈಟರ್ ಜೆಟ್ ಪತನ – ಪೈಲಟ್ ದುರ್ಮರಣ; ತನಿಖೆಗೆ ಆದೇಶ
ಇದೇ ವೇಳೆ ಭಾರತದ ನಾಗರಿಕತೆಯ ಮೌಲ್ಯಗಳ ಬಗ್ಗೆ ಜಿ20 ಸಮ್ಮೇಳನಕ್ಕೆ ತಿಳಿಸಿದ ಪ್ರಧಾನಿ ಮೋದಿ, ಜಾಗತಿಕ ಪ್ರಗತಿಗೆ ದಾರಿ ತೋರಿಸಬಲ್ಲವು ಎಂದು ಹೇಳಿದರು.
A very productive conversation with the Secretary General of the United Nations, Mr. António Guterres on the sidelines of the G20 Johannesburg Summit.@UN @antonioguterres pic.twitter.com/aPtCzWGXDJ
— Narendra Modi (@narendramodi) November 22, 2025
ಇದು ಸುಸ್ಥಿರ ಜೀವನಶೈಲಿಯ ಕಾಲ ಹಾಗೂ ಪರೀಕ್ಷಿತ ಮಾದರಿಗಳನ್ನ ದಾಖಲಿಸುತ್ತದೆ. ಈ ಜ್ಞಾನವನ್ನ ಮುಂದಿನ ಪೀಳಿಗೆಗೆ ತಲುಪಿಸುವುದು ಇದರ ಉದ್ದೇಶ. “ಈ ನಿಟ್ಟಿನಲ್ಲಿ ಭಾರತಕ್ಕೆ ಶ್ರೀಮಂತ ಇತಿಹಾಸವಿದೆ. ಇದು ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಮ್ಮ ಸಾಮೂಹಿಕ ಜ್ಞಾನವನ್ನ ಹಂಚಿಕೊಳ್ಳಲು ಸಹಾಯ ಮಾಡುತ್ತದೆ, ಎಂದು ಪ್ರಧಾನಿ ಶೃಂಗಸಭೆಯಲ್ಲಿ ಹೇಳಿದರು. ಈ ಭಂಡಾರವು ನಮ್ಮ ಪೂರ್ವಜರ ಜ್ಞಾನವನ್ನು ಸಂರಕ್ಷಿಸಿ, ಅದನ್ನು ಆಧುನಿಕ ಜಗತ್ತಿಗೆ ಪರಿಚಯಿಸಲು ಸಹಾಯಕವಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು. ಇದನ್ನೂ ಓದಿ: Explainer | 24 ವರ್ಷಗಳ ಇತಿಹಾಸದಲ್ಲಿ 2ನೇ ದುರಂತ – ಒಂದು ʻತೇಜಸ್ʼಗೆ ತಗುಲುವ ವೆಚ್ಚ ಎಷ್ಟು?

ಈ ನಾಲ್ಕು ಕ್ಷೇತ್ರಗಳಲ್ಲಿ ಭಾರತಕ್ಕೆ ನಮ್ಮ ಸಂಗ್ರಹಿತ ಜ್ಞಾನವನ್ನ ಮುಂದಕ್ಕೆ ಕೊಂಡೊಯ್ಯಲು ನಾವು ಸಹಕಾರ ನೀಡುತ್ತೇವೆ. ಮುಂದಿನ ಹತ್ತು ವರ್ಷಗಳಲ್ಲಿ ಆಫ್ರಿಕಾದಲ್ಲಿ 10 ಲಕ್ಷ ಜನರಿಗೆ ನಾವೀನ್ಯತೆ, ಕೌಶಲ್ಯದ ಪ್ರಮಾಣಿತ ತರಬೇತಿ ರೂಪಿಸುವ ಗುರಿ ಹೊಂದಲಾಗಿದೆ. ಈ ಉಪಕ್ರಮಗಳು ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸಲು ಸಹಾಯ ಮಾಡುತ್ತವೆ ಎಂದು ಹೇಳಿದರು. ಇದನ್ನೂ ಓದಿ: ನೈಜೀರಿಯಾದಲ್ಲಿ 300 ವಿದ್ಯಾರ್ಥಿಗಳು, ಶಿಕ್ಷಕರ ಕಿಡ್ನ್ಯಾಪ್ – ಶಾಲೆಗಳನ್ನೇ ಮುಚ್ಚಿಸಿದ ನೆರೆ ರಾಜ್ಯಗಳು
ಬ್ರಿಟನ್ ಪ್ರಧಾನಿಯೊಂದಿಗೆ ಮಾತುಕತೆ
ಸಮಾವೇಶಕ್ಕೂ ಮುನ್ನ ಜೋಹಾನ್ಸ್‌ಬರ್ಗ್‌ನಲ್ಲಿ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದರು. ಕೀರ್ ಸ್ಟಾಮರ್ ಅವರೊಂದಿಗಿನ ತಮ್ಮ ಸಭೆ ಅತ್ಯುತ್ತಮವಾಗಿತ್ತು. ನವೀಕರಿಸಬಹುದಾದ ಇಂಧನವು ಈ ವರ್ಷ ಭಾರತ-ಯುಕೆ ಪಾಲುದಾರಿಕೆಯ ಪ್ರಮುಖ ಅಂಶವಾಗಿದೆ. ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನ ಮುಂದುವರಿಸುತ್ತವೆ ಎಂದು ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಟ್ರಂಪ್, ಪುಟಿನ್, ಜಿನ್‌ಪಿಂಗ್ ಗೈರು
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ G-20 ಶೃಂಗಸಭೆಯಲ್ಲಿ ಅಮೆರಿಕದ ಯಾವುದೇ ಅಧಿಕಾರಿಗಳು ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಫ್ರಿಕಾನರ್‌ಗಳ ಹತ್ಯೆ ಮತ್ತು ಭೂಮಿ ವಶಪಡಿಸಿಕೊಳ್ಳುವಿಕೆಯಂತಹ ಮಾನವ ಹಕ್ಕುಗಳ ಉಲ್ಲಂಘನೆಗಳು ನಿಲ್ಲುವವರೆಗೆ ಅಮೆರಿಕದ ಈ ನಿರ್ಧಾರ ಜಾರಿಯಲ್ಲಿರುತ್ತದೆ ಎಂದು ಅವರು ಘೋಷಿಸಿದ್ದಾರೆ. ಆದರೆ, ದಕ್ಷಿಣ ಆಫ್ರಿಕಾ ಸರ್ಕಾರವು ಟ್ರಂಪ್ ಅವರ ಈ ಎಲ್ಲ ಆರೋಪಗಳನ್ನು ತೀವ್ರವಾಗಿ ತಳ್ಳಿಹಾಕಿದೆ. ಇದರೊಂದಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೈರಾಗಿದ್ದಾರೆ. ಈ ನಡುವೆ ಪ್ರಧಾನಿ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರೊಂದಿಗೆ ಮಾತುಕತೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.
