ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕರ್ಗಳು ಹ್ಯಾಕ್ ಮಾಡಿ ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ ಎಂದು ಟ್ವೀಟ್ ಮಾಡಿದ್ದಾರೆ.
Advertisement
ನರೇಂದ್ರ ಮೋದಿ ಅವರ ಹೆಸರಿನಲ್ಲಿ ಎರಡು ಖಾತೆ ಇದೆ. @narendramodi ಖಾತೆ ವೈಯಕ್ತಿಕ ಖಾತೆ ಆಗಿದ್ದರೆ @PMOIndia ಪ್ರಧಾನಿ ಸಚಿವಾಲಯ ಖಾತೆಯಾಗಿದೆ. ಭಾನುವಾರ ನಸುಕಿನ ಜಾವ 2:14ರ ವೇಳೆಗೆ @narendramodi ಖಾತೆಯಿಂದ ಬಿಟ್ ಕಾಯಿನ್ ಬಗ್ಗೆ ಟ್ವೀಟ್ ಮಾಡಲಾಗಿದೆ. ಇದನ್ನೂ ಓದಿ: ಭಾರತ ನೋವಲ್ಲಿದೆ ಆದರೆ ಅಭಿವೃದ್ಧಿ ಕಾರ್ಯಗಳು ನಿಲ್ಲಲ್ಲ: ಮೋದಿ
Advertisement
Was @narendramodi ji's Twitter handle got #hacked for almost 10 mins. #PMTwitterHandle@TwitterSupport @Twitter @paraga pic.twitter.com/ZZ2HYjFoKI
— Rahul Mridha (@TheRahulMridha) December 11, 2021
Advertisement
ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧವಾಗಿದೆ. ಸರ್ಕಾರ 500 ಬಿಟ್ ಕಾಯಿನ್ ಖರೀದಿಸಿದ್ದು ಪ್ರಜೆಗಳಿಗೆ ಹಂಚಲಾಗುವುದು ಎಂದು ಟ್ವೀಟ್ ಮಾಡಲಾಗಿತ್ತು. ಈ ವಿಚಾರ ತಕ್ಷಣವೇ ಗೊತ್ತಾಗಿ ಟ್ವೀಟರ್ ಸಂಸ್ಥೆಗೆ ಮಾಹಿತಿ ನೀಡಿ ಖಾತೆಯನ್ನು ಸರಿಪಡಿಸಲಾಗಿದೆ. ಈ ಹಿಂದಿನ ಟ್ವೀಟ್ ಪರಿಗಣಿಸದಂತೆ @PMOIndia ಖಾತೆಯ ಮನವಿ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ಮೋದಿ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿರುವುದು ಟ್ರೆಂಡಿಂಗ್ ಟಾಪಿಕ್ ಆಗಿದೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕೇರಳದ ಖ್ಯಾತ ಸಿನಿಮಾ ನಿರ್ದೇಶಕ ಅಲಿ ಅಕ್ಬರ್
Advertisement
The Twitter handle of PM @narendramodi was very briefly compromised. The matter was escalated to Twitter and the account has been immediately secured.
In the brief period that the account was compromised, any Tweet shared must be ignored.
— PMO India (@PMOIndia) December 11, 2021
ಕರ್ನಾಟಕದಲ್ಲಿ ಶ್ರೀಕಿ ಪ್ರಕರಣದ ಬಳಿಕ ಬಿಟ್ ಕಾಯಿನ್ ವಿಚಾರ ದೇಶವ್ಯಾಪಿ ಸದ್ದು ಮಾಡಿದೆ. ಸಮಾಜ ವಿರೋಧಿ ಚಟುವಟಿಕೆಗಳಿಗೆ ವೇದಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಬಿಟ್ ಕಾಯಿನ್ ನಿಯಂತ್ರಿಸಲು ಈ ಚಳಿಗಾಲದ ಅಧಿವೇಶನದಲ್ಲೇ ಮಸೂದೆ ಮಂಡನೆ ಮಾಡಲು ಕೇಂದ್ರ ಸರ್ಕಾರ ತಯಾರಿ ನಡೆದಿದೆ. ಈ ವಿಚಾರ ಚರ್ಚೆ ಆಗುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.