ಲಕ್ನೋ: ಉತ್ತರ ಪ್ರದೇಶದಲ್ಲಿ ವಿವಿಧ ಯೋಜನೆಗಳನ್ನು ಲೋಕಾರ್ಪಣೆ ಮಾಡಿ ಪ್ರಧಾನಿ ನರೇಂದ್ರ ಮೋದಿ, ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಹುತಾತ್ಮ ಯೋಧರನ್ನು ಸ್ಮರಿಸಿದ್ದಾರೆ. ಬಿಪಿನ್ ರಾವತ್ ಎಂದಿಗೂ ನಮ್ಮ ಮನಸ್ಸಿನಲ್ಲಿ ಇರುತ್ತಾರೆ. ಬದುಕುಳಿದಿರುವ ವರುಣ್ ಸಿಂಗ್ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಭಾರತ ನೋವಲ್ಲಿದೆ ಆದರೆ ಅಭಿವೃದ್ಧಿ ಕಾರ್ಯಗಳು ನಿಲ್ಲಲ್ಲ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
Advertisement
ಉತ್ತರ ಪ್ರದೇಶ ಚುನಾವಣೆ ಸನಿಹದಲ್ಲಿ ಮೋದಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡೋದನ್ನು ಮುಂದುವರೆಸಿದ್ದಾರೆ. 4 ದಶಕಗಳಿಂದ ಆಮೆ ಗತಿಯಲ್ಲಿ ಸಾಗುತ್ತಿದ್ದ ಅತಿದೊಡ್ಡ ಸರಯೂ ನಹರ್ ರಾಷ್ಟ್ರೀಯ ಯೋಜನೆಗೆ ಪ್ರಧಾನಿ ಚಾಲನೆ ನೀಡಿದ್ದಾರೆ. ಬಲರಾಮ್‍ಪುರದಲ್ಲಿ ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ಅತಿ ದೊಡ್ಡ ನಾಲಾ ಯೋಜನೆಯನ್ನು ಮೋದಿ ಲೋಕಾರ್ಪಣೆ ಮಾಡಿದರು.
ಸುಮಾರು 9,802 ಕೋಟಿ ವೆಚ್ಚದ ಈ ಯೋಜನೆಯಿಂದ ಉತ್ತರ ಪ್ರದೇಶದ 20-30 ಲಕ್ಷ ಮಂದಿ ರೈತರಿಗೆ ಅನುಕೂಲವಾಗಲಿದೆ. ಘಾರ್ಗ, ಸರಯೂ, ರಾಫ್ತಿ, ಬಗಂಗಾ ಸೇರಿ 5 ನದಿಗಳ ಜೋಡಣೆ ಯೋಜನೆ ಇದಾಗಿದೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕೇರಳದ ಖ್ಯಾತ ಸಿನಿಮಾ ನಿರ್ದೇಶಕ ಅಲಿ ಅಕ್ಬರ್
Advertisement
Advertisement
ಉತ್ತರ ಪ್ರದೇಶದ ಬಲರಾಮ್ ಪುರದಲ್ಲಿಂದು ಸರಯೂ ನಹರ್ ರಾಷ್ಟ್ರೀಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮೋದಿ, ವರುಣ್ ಸಿಂಗ್ ಅವರ ಜೀವ ಉಳಿಸಲು ಪತೇಶ್ವರಿ ದೇವಿಯಲ್ಲಿ ಪ್ರಾರ್ಥಿಸುತ್ತೇನೆ. ಇಡೀ ದೇಶ ವರುಣ್ ಸಿಂಗ್ ಕುಟುಂಬ ಮತ್ತು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ವೀರ ಯೋಧರ ಕುಟುಂಬದೊಂದಿಗೆ ಇದೆ. ದೇಶವನ್ನು ಮತ್ತಷ್ಟು ಬಲಿಷ್ಠವನ್ನಾಗಿಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲೆ ಇದೆ. ದೇಶ ದುಃಖದಲ್ಲಿದೆ ಆದರೆ ಈ ನೋವಿನ ನಡುವೆ ನಮ್ಮ ಅಭಿವೃದ್ಧಿ ಕಾರ್ಯ ನಿಲ್ಲಲ್ಲ. ಭಾರತೀಯರಾದ ನಾವು ದಕ್ಷತೆಯಿಂದ ಕೆಲಸ ಮಾಡಬೇಕು ಮತ್ತು ದೇಶದ ಒಳಗೆ ಹಾಗೂ ಹೊರಗಿನ ಪ್ರತಿಯೊಂದು ಸವಾಲನ್ನು ಮೆಟ್ಟಿನಿಲ್ಲಬೇಕು. ಸಿಡಿಎಸ್ ಬಿಪಿನ್ ರಾವತ್ ಮುಂದಿನ ಜನ್ಮದಲ್ಲಿ ಬಂದರೆ, ಹೊಸ ಸುಧಾರಣೆಯೊಂದಿಗೆ ದೇಶ ಮುನ್ನಡೆಯುತ್ತಿರುವುದನ್ನು ಅವರು ನೋಡಬೇಕು ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಪತಿಗೆ ಡೈವೋರ್ಸ್ ಕೊಡು, ಮುಸ್ಲಿಂ ಯುವಕನ ಜೊತೆ ಮದುವೆ ಮಾಡಿಸ್ತೀನಿ – ನೂರ್ ಜಹಾನ್ ಅರೆಸ್ಟ್
Advertisement