ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಾಮಪತ್ರ ಸಲ್ಲಿಸುವಾಗ ಸಹಿ ಮಾಡಲು ಬಳಸುವ ಪೆನ್ನಿನ (Pen) ವಿಶೇಷತೆ ಹಾಗೂ ಅದನ್ನು ಯಾರು ನೀಡಿದ್ದಾರೆ ಎಂಬ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
ಹೌದು. ಗುಜರಾತ್‍ನ (Gujarat) ಅಹಮದಾಬಾದ್‍ನಲ್ಲಿ ನಡೆದ ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವದ (Pramukh Swami Maharaj Shatabdi Mahotsav) ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಸ್ವಾಮಿ ಮಹಾರಾಜ್ ಅವರೊಂಗಿನ ಕೆಲವು ನೆನಪುಗಳನ್ನು ಹಂಚಿಕೊಂಡರು. ಈ ವೇಳೆ ತಾವು ಚುನಾವಣೆಯಲ್ಲಿ ಸಹಿ ಹಾಕುತ್ತಿರುವ ಪೆನ್‍ನ್ನು ನೀಡಿದವರು ಅವರೇ ಎಂದು ತಿಳಿಸಿದ್ದಾರೆ.
Advertisement
Advertisement
ಸ್ವಾಮಿ ಮಹಾರಾಜ್ ಅವರನ್ನು ಸ್ಮರಿಸುತ್ತಾ ಮಾತನಾಡಿದ ಅವರು, 2002ರ ಚುನಾವಣೆಯಲ್ಲಿ ರಾಜ್‍ಕೋಟ್‍ನಿಂದ ಸ್ಪರ್ಧಿಸಿದ್ದೆ. ಆ ಸಂದರ್ಭದಲ್ಲಿ ನನಗೆ ಇಬ್ಬರು ಸಂತರು ಪೆನ್ನುಗಳನ್ನು ನೀಡಿದ್ದರು. ಆ ಪೆನ್ನಿನ ಜೊತೆಗೆ ಒಂದು ಕಾಗದವು ಇತ್ತು. ಆ ಕಾಗದದಲ್ಲಿ ಸ್ವಾಮಿ ಮಹಾರಾಜ್ ಅವರು ಈ ಪೆನ್ನನ್ನು ನೀಡಿರುವುದಾಗಿ ಬರೆದಿತ್ತು. ಅಷ್ಟೇ ಅಲ್ಲದೇ ನಾಮಪತ್ರ ಸಲ್ಲಿಸುವಾಗ ಈ ಪೆನ್‍ನಿಂದಲೇ ಸಹಿ ಮಾಡಿ ಎಂದು ಬರೆದಿತ್ತು ಎಂದು ನೆನಪಿಸಿಕೊಂಡರು.
Advertisement
Advertisement
ಅದಾದ ಬಳಿಕ ರಾಜ್‍ಕೋಟ್‍ನಲ್ಲಿ ನಾಮಪತ್ರ ಸಲ್ಲಿಸುವಾಗ ಅದೇ ಪೆನ್‍ನ್ನು ಬಳಸಿದ್ದೆ. ಆ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದೆ. ಅಂದಿನಿಂದ ಇಲ್ಲಿಯವರೆಗೆ ಸಹಿ ಮಾಡುವಾಗ ಅದೇ ಪೆನ್‍ಬಳಸುತ್ತಿದ್ದೇನೆ ಎಂದು ತಾವು ಬಳಸುವ ಪೆನ್ನಿನ ಕುರಿತು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮರಾಠಿ ಭಾಷಿಕ ಪುಂಡರ ಪುಂಡಾಟ- ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ
2002ರಲ್ಲಿ ಗುಜರಾತ್‍ನ ರಾಜ್‍ಕೋಟ್‍ನಿಂದ ಗೆದ್ದು ವಿಧಾನ ಸಭೆಯನ್ನು ಪ್ರವೇಶಿಸಿದರು. ಅದಾದ ಬಳಿಕ 2014ರಂದು ಉತ್ತರ ಪ್ರದೇಶದ ವಾರಣಾಸಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಪ್ರಧಾನಿ ಆದರು. 2ನೇ ಬಾರಿಗೆ 2019ರಲ್ಲಿಯೂ ವಾರಣಾಸಿಯಿಂದ ಗೆಲುವು ಸಾಧಿಸಿ 2ನೇ ಬಾರಿಗೆ ಪ್ರಧಾನಮಂತ್ರಿ ಆಗಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ 66-70 ಸ್ಥಾನ ಸಿಗುತ್ತೆ, ನಾವು ಗೆಲ್ತೀವಿ – ಡಿಕೆಶಿಯಿಂದ ಕಾಂಗ್ರೆಸ್ ಸಮೀಕ್ಷೆ ರಿಸಲ್ಟ್ ಔಟ್