ಟೊಕಿಯೊ: ಜಪಾನ್‌ನ (Japan) ಮಾಜಿ ಪ್ರಧಾನಿ ಶಿಂಜೋ ಅಬೆ (Shinzo Abe) ಅವರ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ನೇರಳೆ ಬಣ್ಣದ ಬಟ್ಟೆಯಿಂದ ಸುತ್ತಿಡಲಾಗಿದ್ದ ಮರದ ಪೆಟ್ಟಿಗೆಯಲ್ಲಿ ಅಬೆ ಅವರ ಚಿತಾಭಸ್ಮವನ್ನು ಇಡಲಾಗಿತ್ತು. ಇದನ್ನು ಇಂದು ಟೋಕಿಯೊದ ಬುಡೋಕನ್ ಸಭಾಂಗಣಕ್ಕೆ ಪತ್ನಿ ಅಕಿ ಅಬೆ ತಂದರು. ಶಿಂಜೋ ಅಬೆ ಅವರ ಅಂತ್ಯಕ್ರಿಯೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಆಸ್ಟ್ರೆಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸೇರಿದಂತೆ ಹಲವಾರು ಜಾಗತಿಕ ನಾಯಕರು ಸೇರಿದ್ದರು. ಈ ಸಂದರ್ಭದಲ್ಲಿ ಅವರೆಲ್ಲರೂ ಶಿಂಜೋ ಅಬೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
Advertisement
Advertisement
ಜಪಾನ್ ಪ್ರಧಾನಿಯಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಶಿಂಜೋ ಅಬೆ ಅವರನ್ನು ಜುಲೈ 8ರಂದು ಪಶ್ಚಿಮ ಜಪಾನಿನ ನಾರಾ ನಗರದ ಸ್ಟ್ರೀಟ್‌ವೊಂದರಲ್ಲಿ ಭಾಷಣ ಮಾಡುವಾಗ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಜುಲೈನಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿತ್ತು. ಇದನ್ನೂ ಓದಿ: ಕಟೀಲ್ ಒಬ್ಬ ವಿದೂಷಕ, ಪಾಪ ಇನ್ನೂ ಮೆಚ್ಯೂರಿಟಿ ಇಲ್ಲ: ಸಿದ್ದರಾಮಯ್ಯ
Advertisement
Advertisement
ಪ್ರಧಾನಿ ಮೋದಿ ಅವರು ನಿನ್ನೆ ಟ್ವೀಟ್ ಮಾಡಿ, ಆತ್ಮೀಯ ಸ್ನೇಹಿತ ಹಾಗೂ ಭಾರತ-ಜಪಾನ್ ಸ್ನೇಹದ ಶ್ರೇಷ್ಠ ಚಾಂಪಿಯನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ನಾನು ಇಂದು ರಾತ್ರಿ ಟೋಕಿಯೊಗೆ ಪ್ರಯಾಣಿಸುತ್ತಿದ್ದೇನೆ. ಎಲ್ಲಾ ಭಾರತೀಯರ ಪರವಾಗಿ ಸಂತಾಪ ಸೂಚಿಸಲು ಜಪಾನ್ ಪ್ರಧಾನಿ ಕಿಶಿದಾ ಅವರನ್ನು ಭೇಟಿ ಮಾಡಲಿದ್ದೇನೆ ಎಂದಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಧಾರ್ಮಿಕ ಗುರುಗಳು, ಉಲೇಮಾಗಳು ದಾಳಿ ಬಗ್ಗೆ ಅಪಸ್ವರ ಎತ್ತಿಲ್ಲ: ಖಾದರ್