ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ನಾಲ್ಕು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದು, ಗುರುವಾರ ಭಾರತ ಮೂಲದ ಹಾಗೂ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದೊಂದು ರಾಜತಾಂತ್ರಿಕ ಭೇಟಿಯಾದರೂ ಪ್ರಧಾನಿ ಮೋದಿ, ಕಮಲಾ ಹ್ಯಾರಿಸ್ ಅವರೊಂದಿಗೆ ಭಾವನಾತ್ಮಕ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಅಪರೂಪದ ಗಿಫ್ಟ್ ನೀಡಿ ಹ್ಯಾರಿಸ್ ಅವರನ್ನು ಬೆರಗುಗೊಳಿಸಿದ್ದಾರೆ.
Glimpses from the meeting between PM @narendramodi and @VP @KamalaHarris. pic.twitter.com/cc6wFTGe5s
— PMO India (@PMOIndia) September 23, 2021
Advertisement
ಭಾವನಾತ್ಮಕ ಗಿಫ್ಟ್
ಸಭೆ ಫಲಪ್ರದವಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಕಮಲಾ ಹ್ಯಾರಿಸ್ ಅವರಿಗೆ ಐದು ದಶಕಗಳ ಹಳೆಯ ಸರ್ಕಾರಿ ಅಧಿಸೂಚನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಲ್ಲಿ ಕಮಲಾ ಹ್ಯಾರಿಸ್ ಅವರ ಅಜ್ಜ ಪಿ.ವಿ.ಗೋಪಾಲನ್ ಅವರ ಹೆಸರಿದೆ. ಸರ್ಕಾರಿ ಅಧಿಕಾರಿಯಾಗಿ ಗೋಪಾಲನ್ ಅವರು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. 1966ರ ಸರ್ಕಾರದ ನೋಟಿಫಿಕೇಷನ್ ಗೆ ಕಟ್ಟಿಗೆಯ ಫ್ರೇಮ್ ಹಾಕಿಸಿ ಕಮಲಾ ಹ್ಯಾರಿಸ್ ಅವರಿಗೆ ನೀಡಿದ್ದಾರೆ. ಈ ವೇಳೆ ಭಾವನಾತ್ಮಕ ಚರ್ಚೆ ನಡೆಸಿದ್ದಾರೆ. ಇದನ್ನೂ ಓದಿ: ಭಾರತದ ಲಸಿಕಾಕರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕಮಲಾ ಹ್ಯಾರಿಸ್
Advertisement
PM @narendramodi and @VP @KamalaHarris meet in Washington DC. pic.twitter.com/t8sYNA2ZGv
— PMO India (@PMOIndia) September 23, 2021
Advertisement
ಈ ನೋಟಿಫಿಕೇಷನ್ ಪ್ರತಿ ಜೊತೆಗೆ ವಿಶೇಷವಾಗಿ ತಯಾರಿಸಲಾದ ಚಸ್ ಬೋರ್ಡ್ ನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಇದನ್ನು ತಮ್ಮ ಕ್ಷೇತ್ರ ಉತ್ತರ ಪ್ರದೇಶದ ವಾರಾಣಸಿಯಲ್ಲಿ ತಯಾರಿಸಲಾಗಿದೆ. ಅಲ್ಲದೆ ಈ ಚೆಸ್ ಸೆಟ್ ನ್ನು ಅತ್ಯಾಕರ್ಷಕ ಕರಕುಶಲತೆಯಿಂದ ತಯಾರಿಸಲಾಗಿದ್ದು, ಗುಲಾಬಿ ಮೀನಕರಿ ಪೇಂಟಿಂಗ್ ಒಳಗೊಂಡಿದೆ. ಇದರ ಕರಕುಶಲತೆ ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾದ ಕಾಶಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಈ ಚೆಸ್ ಸೆಟ್‍ನ ಪ್ರಕಾಶಮಾನವಾದ ಬಣ್ಣಗಳು ಕಾಶಿಯ ಚೈತನ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಸರ್ಕಾರಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಭಾರತ ಕೋವಿಡ್ 19 ನಿರ್ವಹಣೆ ಮಾಡಿದಂತೆ ಬೇರೆ ಯಾವ ದೇಶ ಮಾಡಿಲ್ಲ – ಸುಪ್ರೀಂ ಮೆಚ್ಚುಗೆ
Advertisement
ಭೇಟಿ ವೇಳೆ ಕೊರೊನಾ ವೈರಸ್, ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಇನ್ನೂ ವಿಶೇಷ ಎಂಬಂತೆ ಪ್ರಥಮ ಬಾರಿಗೆ ಭಾರತೀಯ ಮೂಲದವರೊಬ್ಬರು ಯುಎಸ್ ಉಪಾಧ್ಯಕ್ಷರಾಗಿದ್ದು, ಜನವರಿಯಲ್ಲಿ ಕಮಲಾ ಹ್ಯಾರಿಸ್ ಅವರು ಯುಎಸ್ ಉಪಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಮೊದಲ ಭೇಟಿಯಾಗಿದೆ.