ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ.
Advertisement
ಪ್ರಧಾನಿ ನರೇಂದ್ರ ಮೋದಿ ಪುಟಿನ್ ಅವರನ್ನು ಸ್ವಾಗತಿಸಲಿದ್ದು, ಈ ವೇಳೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಹಿಂದೆ ನವೆಂಬರ್ 2019 ರಲ್ಲಿ ಬ್ರೆಸಿಲಿಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ, ಪುಟಿನ್ ಅವರನ್ನು ಭೇಟಿಯಾಗಿದ್ದರು. ನಂತರ ಇದೇ ಮೊದಲು ಮೊದಲ ಬಾರಿಗೆ ಮುಖಾಮುಖಿ ಸಭೆ ಇದಾಗಿದೆ.
Advertisement
Advertisement
ಈ ವೇಳೆ ಇವರಿಬ್ಬರು ವ್ಯಾಪಾರ, ಇಂಧನ, ಸಾಂಸ್ಕøತಿಕ, ಭದ್ರತೆ, ಬಾಹ್ಯಾಕಾಶ ತಂತ್ರಜ್ಞಾನದ ಮಾತುಕತೆ ನಡೆಯಲಿದೆ. ಇದರ ಜೊತೆಗೆ ಎಕೆ.200 ರೈಫಲ್ ಉತ್ಪಾದನೆ ಸಂಬಂಧ ಉಭಯ ದೇಶಗಳು ಒಪ್ಪಂದ ಮಾಡಿಕೊಳ್ಳಲಿದೆ. ಇದನ್ನೂ ಓದಿ: ಪ್ರಬಲ ಎಡಪಂಥೀಯರಿಂದಾಗಿ ಕೇರಳದಲ್ಲಿ ಸಂಘಪರಿವಾರದ ಅಜೆಂಡಾ ವಿಫಲ: ಪಿಣರಾಯಿ ವಿಜಯನ್
Advertisement
ವಿದೇಶಾಂಗ ಮತ್ತು ರಕ್ಷಣಾ ಮಂತ್ರಿಗಳ ಮಟ್ಟದಲ್ಲಿ 2 + 2 ಸಂವಾದ ಕಾರ್ಯವಿಧಾನದ ಉದ್ಘಾಟನಾ ಸಭೆಗೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಭಾನುವಾರ ನವದೆಹಲಿಗೆ ಆಗಮಿಸಿದರು. ಇಂದು ಅಧ್ಯಕ್ಷರು ಆಗಮಿಸುತ್ತಿದ್ದು, ಭಾರೀ ಸಿದ್ಧತೆ ನೆಡೆಯುತ್ತಿದೆ.