ನವದೆಹಲಿ: ನೂತನವಾಗಿ ನಿರ್ಮಿಸಲಾಗಿರುವ ಸಂಸತ್ ಭವನವನ್ನು (Parliament Building) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೇ 28ರಂದು ಉದ್ಘಾಟಿಸಲಿದ್ದಾರೆ ಎಂದು ಲೋಕಸಭೆಯ ಸಚಿವಾಲಯ ತಿಳಿಸಿದೆ.
Advertisement
ಪ್ರಸ್ತುತ ಲೋಕಸಭೆಯ ಕಟ್ಟಡ ಸುಮಾರು 543 ಸದಸ್ಯರಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಿದರೆ ರಾಜ್ಯಸಭಾ ಕಟ್ಟಡದಲ್ಲಿ 250 ಸದಸ್ಯರು ಕುಳಿತುಕೊಳ್ಳಬಹುದು. ಇದೇ ತಿಂಗಳಿನಲ್ಲಿ ಲೋಕಾರ್ಪಣೆಗೊಳ್ಳಲಿರುವ ಸಂಸತ್ ಭವನದಲ್ಲಿ 888 ಸದಸ್ಯರು ಕುಳಿತುಕೊಳ್ಳಬಹುದಾಗಿದೆ.
Advertisement
Advertisement
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ನೂತನ ಸಂಸತ್ ಭವನವನ್ನು ಉದ್ಘಾಟಿಸುವಂತೆ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ: ಇಂದು ಮತ್ತೆ ದೆಹಲಿಯತ್ತ ಸಿದ್ದರಾಮಯ್ಯ, ಡಿಕೆಶಿ- ಸಚಿವರ ಪಟ್ಟಿ ಅಂತಿಮಕ್ಕೆ ಸರ್ಕಸ್
Advertisement
ಪ್ರಸ್ತುತ ಸಂಸತ್ತಿನ ಕಟ್ಟಡ 1927ರಲ್ಲಿ ನಿರ್ಮಿಸಲಾಗಿದ್ದು, ಸುಮಾರು 100 ವರ್ಷಗಳಷ್ಟು ಹಳೆಯದಾಗಿದೆ. ಉಭಯ ಸದನಗಳಲ್ಲಿ ಸಂಸದರಿಗೆ ಕುಳಿತುಕೊಳ್ಳಲು ಅನುಕೂಲಕರವಾದ ವ್ಯವಸ್ಥೆಯೂ ಇಲ್ಲದಿರುವ ಕಾರಣ ಇದೀಗ ಪ್ರಸ್ತುತ ಅಗತ್ಯತೆಗಳ ಪ್ರಕಾರ ಹೊಸ ಸಂಸತ್ ಭವನವನ್ನು ನಿರ್ಮಿಸಲಾಗಿದೆ.
ಡಿಸೆಂಬರ್ 2020 ರಲ್ಲಿ ಹೊಸ ಸಂಸತ್ ಕಟ್ಟಡ ನಿರ್ಮಾಣ ಕಾಮಗಾರಿಗೆ ನರೇಂದ್ರ ಮೋದಿ ಶಂಕುಸ್ಥಾಪನೆ ನಡೆಸಿದ್ದರು. ಸರ್ಕಾರ ಕಳೆದ ವರ್ಷದ ನವೆಂಬರ್ ಒಳಗಡೆ ಕಾಮಗಾರಿ ಮುಕ್ತಾಯಗೊಳಿಸುವ ಗುರಿಯನ್ನು ನಿಗದಿ ಪಡಿಸಿತ್ತು. ಆದರೆ ಕೋವಿಡ್ ಮತ್ತು ಇತರೆ ಕೆಲ ಸಮಸ್ಯೆಗಳಿಂದಾಗಿ ಡೆಡ್ಲೈನ್ ವಿಸ್ತರಣೆಯಾಗಿ ಈಗ ಉದ್ಘಾಟನೆಯ ಹಂತಕ್ಕೆ ಬಂದಿದೆ. ಇದನ್ನೂ ಓದಿ: ಗ್ಯಾಸ್ ಏಜೆನ್ಸಿ ಸಮೀಪದ ಸ್ಕ್ರಾಪ್ ಗೋಡೌನಲ್ಲಿ ಅಗ್ನಿ ಅವಘಡ