ಮಂಡ್ಯ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಾನುವಾರ ಒಂದು ಮುಕ್ಕಾಲು ಕಿ.ಮೀ ರೋಡ್ ಶೋ (Road Show) ನಡೆಸಲಿದ್ದಾರೆ ಎಂದು ಸಚಿವ ಎಸ್. ಟಿ.ಸೋಮಶೇಖರ್ ಮತ್ತು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಎಸ್. ಟಿ.ಸೋಮಶೇಖರ್ (ST Somashekar), ಪ್ರತಾಪ್ ಸಿಂಹ (Pratap Simha) ಸುದ್ದಿಗೋಷ್ಠಿ ನಡೆಸಿ ಮೋದಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ದಶಪಥ ರಸ್ತೆಯಲ್ಲಿ ಅತಿಯಾದ ವೇಗ – 6 ತಿಂಗಳಿನಲ್ಲಿ 84 ಮಂದಿ ಬಲಿ
ಅಂದು ಏನೇನು ಕಾರ್ಯಕ್ರಮ?
ಮಾರ್ಚ್ 12ರಂದು ಬೆಳಿಗ್ಗೆ ಮೈಸೂರು ವಿಮಾನನಿಲ್ದಾಣಕ್ಕೆ ಬರುವ ಪ್ರಧಾನಿಯವರು ಬಳಿಕ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಪಿಇಎಸ್ ಕಾಲೇಜು ಆವರಣಕ್ಕೆ ಆಗಮಿಸಲಿದ್ದಾರೆ. ಐಬಿ ಸರ್ಕಲ್‍ನಿಂದ ನಂದಾ ಥಿಯೇಟರ್‌ವರೆಗೆ ಒಂದೂ ಮುಕ್ಕಾಲು ಕಿಮೀ ರೋಡ್ ಶೋ ಇರಲಿದೆ. ಬೆಂಗಳೂರು- ಮೈಸೂರು ಹೈವೇ ವೀಕ್ಷಣೆ ಬಳಿಕ ಉದ್ಘಾಟನೆಯಾಗಲಿದೆ.
ಗೆಜ್ಜಲಗೆರೆಯಲ್ಲಿ ಮಧ್ಯಾಹ್ನ 12:05ಕ್ಕೆ ಸಾರ್ವಜನಿಕ ಸಭೆ ನಡೆಯಲಿದೆ. ಫಲಾನುಭವಿಗಳ ಸಭೆಯನ್ನೂ ಆಯೋಜಿಸಲಾಗಿದೆ. ಇದೇ ವೇದಿಕೆಯಲ್ಲಿ ದಶಪಥ ಹೆದ್ದಾರಿ ಲೋಕಾರ್ಪಣೆ ನಡೆಯಲಿದೆ. ಮೈಸೂರು- ಕುಶಾಲನಗರದವರೆಗಿನ (Mysuru Kushalnagar) 3,530 ಕೋಟಿ ರೂ. ಕಾಮಗಾರಿ ವೆಚ್ಚದ 4 ಪಥದ ರಾಷ್ಟ್ರೀಯ ಹೆದ್ದಾರಿಯ ಭೂಮಿಪೂಜೆಯೂ ಇಲ್ಲಿ ನಡೆಯಲಿದೆ. ಇದನ್ನೂ ಓದಿ: ದಶಪಥ ಹೆದ್ದಾರಿಯ ಕ್ರೆಡಿಟ್ ರೇವಣ್ಣಗೆ ಸಲ್ಲಬೇಕು: ಸಿ.ಎಂ ಇಬ್ರಾಹಿಂ
ಮಂಡ್ಯ (Mandya) ನಗರಕ್ಕೆ ಕಾವೇರಿ ನೀರು ಪೂರೈಕೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಂಡ್ಯಕ್ಕೆ ತಾಯಿ ಮಗುವಿನ ಆಸ್ಪತ್ರೆಯನ್ನೂ ಕೊಟ್ಟಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿ ಉದ್ಘಾಟನೆ ನೆರವೇರಿಸುತ್ತಾರೆ. ಅಲ್ಲಿಂದ ಮೈಸೂರು, ಬಳಿಕ ಹುಬ್ಬಳ್ಳಿಗೆ ತೆರಳುವರು ಎಸ್. ಟಿ.ಸೋಮಶೇಖರ್ ಮತ್ತು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್, ಜಿಲ್ಲಾ ಅಧ್ಯಕ್ಷ ಸಿ.ಕೆ.ಉಮೇಶ್, ಮುಖಂಡರಾದ ಸಿದ್ದರಾಮಯ್ಯ, ಚಂದಗಾಲ ಶಿವಣ್ಣ ಮುಂತಾದವರು ಇದ್ದರು.