– ನಾವು ಭಯೋತ್ಪಾನೆಯ ಎದೆಗೆ ಹೊಡೆದಿದ್ದೇವೆ: ಪ್ರಧಾನಿ
ಜೈಪುರ: ಪಹಲ್ಗಾಮ್‌ನಲ್ಲಿ (Pahalgam) ನಡೆದ ಭೀಕರ ಭಯೋತ್ಪಾದಕ ದಾಳಿಗೆ ಭಾರತವು 22 ನಿಮಿಷಗಳಲ್ಲಿ ಸೇಡು ತೀರಿಸಿಕೊಂಡಿದೆ. ಸಿಂಧೂರ ಅಳಿಸಲು ಹೊರಟವರನ್ನು ಮಣ್ಣಿನಲ್ಲಿ ಹೂತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಭಾಷಣ ಮಾಡಿದ್ದಾರೆ.
ರಾಜಸ್ಥಾನದ ಬಿಕಾನೇರ್‌ನಲ್ಲಿ ಇಂದು ನಡೆದ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಏಪ್ರಿಲ್ 22 ರ ದಾಳಿಗೆ ಪ್ರತಿಕ್ರಿಯೆಯಾಗಿ ನಾವು ಭಯೋತ್ಪಾದಕರ ಒಂಬತ್ತು ದೊಡ್ಡ ಅಡಗುತಾಣಗಳನ್ನು 22 ನಿಮಿಷಗಳಲ್ಲಿ ನಾಶಪಡಿಸಿದ್ದೇವೆ. ಸಿಂಧೂರವು ಬಂದೂಕಿನ ಪುಡಿಯಾಗಿ ಬದಲಾದಾಗ ಏನಾಗುತ್ತದೆ ಎಂಬುದನ್ನು ವಿಶ್ವದ ಮತ್ತು ದೇಶದ ಶತ್ರುಗಳು ನೋಡಿದ್ದಾರೆ. ರಕ್ತವಲ್ಲ, ನನ್ನ ರಕ್ತನಾಳಗಳಲ್ಲಿ ಸಿಂಧೂರ ಕುದಿಯುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಇದನ್ನೂ ಓದಿ: ಜ್ಯೋತಿಗೆ ಒಡಿಶಾ ಲಿಂಕ್ – ‘ಪಾಕ್‌ನಲ್ಲಿ ಒಡಿಶಾ ಹುಡುಗಿ’ ವೀಡಿಯೋ ಮಾಡಿದ್ದ ಯೂಟ್ಯೂಬರ್ ವಿಚಾರಣೆ
ಭಯೋತ್ಪಾದನೆಯ ವಿರುದ್ಧ ಹೋರಾಡಲು ಭಾರತ ಒಗ್ಗಟ್ಟಾಗಿದೆ. ಗುಂಡೇಟುಗಳು (ಪಹಲ್ಗಾಮ್ ಭಯೋತ್ಪಾದಕ ದಾಳಿ) 140 ಕೋಟಿ ಭಾರತೀಯರ ಎದೆಗೆ ನಾಟಿದಂತಿತ್ತು. ನಾವು ಭಯೋತ್ಪಾದನೆಯ ಎದೆಗೆ ಗುಂಡೇಟು ನೀಡಿದ್ದೇವೆ. ಸರ್ಕಾರವು ಮಿಲಿಟರಿಗೆ ಮುಕ್ತ ಹಸ್ತ ನೀಡಿತು. ಸಶಸ್ತ್ರ ಪಡೆಗಳು ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿದವು ಎಂದಿದ್ದಾರೆ.
ಬಾಲಕೋಟ್ ವೈಮಾನಿಕ ದಾಳಿಯ ನಂತರ ರಾಜಸ್ಥಾನಕ್ಕೆ ನೀಡಿದ ಭೇಟಿಯನ್ನು ನೆನಪಿಸಿಕೊಂಡ ಮೋದಿ, ರಾಜಸ್ಥಾನದ ಈ ಧೈರ್ಯಶಾಲಿ ಭೂಮಿಯು ದೇಶ ಮತ್ತು ಅದರ ನಾಗರಿಕರಿಗಿಂತ ದೊಡ್ಡದಲ್ಲ ಎಂದು ನಮಗೆ ಕಲಿಸುತ್ತದೆ. ಏಪ್ರಿಲ್ 22 ರಂದು ಭಯೋತ್ಪಾದಕರು ಧರ್ಮವನ್ನು ಕೇಳುವ ಮೂಲಕ ನಮ್ಮ ಸಹೋದರಿಯರ ಹಣೆಯ ಮೇಲಿನ ಸಿಂಧೂರ ಅಳಿಸಿದ್ದರು. ಆ ಗುಂಡುಗಳು 140 ಕೋಟಿ ದೇಶವಾಸಿಗಳ ಹೃದಯಗಳನ್ನು ಚುಚ್ಚಿದವು. ಇದರ ನಂತರ, ದೇಶದ ಪ್ರತಿಯೊಬ್ಬ ನಾಗರಿಕರು ಒಗ್ಗೂಡಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ನಿರ್ಧರಿಸಿದರು. ದೇಶದ ಜನತೆ ಊಹಿಸುವುದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ನಾವು ವಿಧಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೇ 22ಕ್ಕೆ ಬಿಕನೇರ್ ವಾಯುನೆಲೆಗೆ ಪ್ರಧಾನಿ ಮೋದಿ ಭೇಟಿ
5 ವರ್ಷಗಳ ಹಿಂದೆ ಬಾಲಾಕೋಟ್‌ನಲ್ಲಿ ದೇಶವು ವಾಯುದಾಳಿ ನಡೆಸಿದ ನಂತರ, ನನ್ನ ಮೊದಲ ಸಾರ್ವಜನಿಕ ಸಭೆ ರಾಜಸ್ಥಾನದ ಗಡಿಯಲ್ಲಿಯೇ ನಡೆದಿರುವುದು ಕಾಕತಾಳೀಯ. ವೀರಭೂಮಿಯ ತಪಸ್ಸಿನಿಂದಾಗಿ ಇಂತಹ ಕಾಕತಾಳೀಯ ಸಂಭವಿಸಿದೆ. ಈಗ ಆಪರೇಷನ್ ಸಿಂಧೂರ ನಡೆದಾಗ, ನನ್ನ ಮೊದಲ ಸಾರ್ವಜನಿಕ ಸಭೆ ಮತ್ತೆ ರಾಜಸ್ಥಾನದ ವೀರಭೂಮಿಯ ಗಡಿಯಲ್ಲಿರುವ ಬಿಕಾನೇರ್‌ನಲ್ಲಿ ನಿಮ್ಮೆಲ್ಲರ ನಡುವೆ ನಡೆಯುತ್ತಿದೆ ಎಂದು ಮೋದಿ ಸ್ಮರಿಸಿದ್ದಾರೆ.