ನವದೆಹಲಿ: ಕೇರಳದ ವಯನಾಡಿನಲ್ಲಿ ಚುನಾವಣೆ ಬಳಿಕ ರಾಹುಲ್ ಗಾಂಧಿ (Rahul Gandhi) ಬೇರೇಡೆ ಮುಖ ಮಾಡಲಿದ್ದಾರೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ಅಮೇಥಿಯಲ್ಲೂ ಸೋಲಿನ ಭಯ ಕಂಡಿರುವ ಅವರು ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ವ್ಯಂಗ್ಯ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಬರ್ಧಮಾನ್-ದುರ್ಗಾಪುರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ವಯನಾಡಿನಲ್ಲಿ ಸೋಲಿನ ಬಗ್ಗೆ ತಿಳಿದಿರುವ ರಾಹುಲ್ ಗಾಂಧಿ ಮತ್ತೊಂದು ಕ್ಷೇತ್ರಕ್ಕೆ ಹೋಗಿದ್ದಾರೆ. ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಅವರ ಬೆಂಬಲಿಗರು ಹೇಳಿದ್ದರು. ಆದರೆ ಅವರು ಆಯ್ಕೆ ಮಾಡಿಕೊಂಡಿರುವುದು ಯಾವ ಕ್ಷೇತ್ರ? ರಾಯ್‌ಬರೇಲಿ (Raebareli), ಅಮೇಥಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೊಕೆ ರಾಹುಲ್‌ಗೆ ಭಯ ಹೀಗಿದ್ದರೂ ಸಹ ರಾಹುಲ್ ಗಾಂಧಿ ಹೇಳೋದು ಹೆದರಬೇಡಿ ಅಂತಾ, ನಾನು ರಾಹುಲ್ ಗಾಂಧಿಗೆ ಹೇಳುತ್ತೇನೆ ಹೆದರಬೇಡಿ, ಓಡಿ ಹೋಗಬೇಡಿ ಎಂದು ಕುಟುಕಿದ್ದಾರೆ.
Advertisement
Advertisement
ಗಾಂಧಿ ಕುಟುಂಬದ ನಡೆಯಿಂದ ಚುನಾವಣಾ ಫಲಿತಾಂಶ ಸ್ಪಷ್ಟವಾಗಿದೆ, ಯಾವುದೇ ಸಮೀಕ್ಷೆ ನಡೆಸುವ ಅಗತ್ಯ ಇಲ್ಲ. ಕಾಂಗ್ರೆಸ್ ಮೊದಲೇ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಿದೆ, ಕಳೆದ ಬಾರಿಯಷ್ಟೂ ಸ್ಥಾನಗಳು ಈ ಬಾರಿ ʻಕೈʼಗೆ ಸಿಗಲ್ಲ ಎಂದಿದ್ದಾರೆ. ಇದನ್ನೂ ಓದಿ: ನೇಹಾ ಹತ್ಯೆ ನಿಜವಾಗಿಯೂ ಲವ್ ಜಿಹಾದ್ ಕೇಸ್, ನಾವು ಬಣ್ಣ ಕಟ್ಟಿಲ್ಲ: ಅಮಿತ್ ಶಾ
Advertisement
ಸಂವಿಧಾನವನ್ನು ಬದಲಾಯಿಸಿ ದಲಿತ ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾಗಳನ್ನು ಕಸಿದುಕೊಂಡು ‘ಜಿಹಾದಿ’ ವೋಟ್ ಬ್ಯಾಂಕ್‌ಗೆ ಮೀಸಲಾತಿ ನೀಡಲು ಕಾಂಗ್ರೆಸ್ ಬಯಸಿದೆ. ಅವರಿಗೆ (ವಿರೋಧ ಪಕ್ಷಗಳಿಗೆ) ಅಭಿವೃದ್ಧಿಯನ್ನು ತರಲು ಸಾಧ್ಯವಿಲ್ಲ. ಅವರು ಮತಕ್ಕಾಗಿ ಸಮಾಜವನ್ನು ವಿಭಜಿಸುವುದು ಹೇಗೆಂಬುದು ತಿಳಿದಿರುವುದಾಗಿ ವಾಗ್ದಾಳಿ ನಡೆಸಿದ್ದಾರೆ.
Advertisement
ತೃಣಮೂಲ ಶಾಸಕ ಹುಮಾಯೂನ್ ಕಬೀರ್ ಅವರನ್ನು ಉಲ್ಲೇಖಿಸಿದ ಪ್ರಧಾನಿ, ಟಿಎಂಸಿ ಶಾಸಕರೊಬ್ಬರು ಬಹಿರಂಗ ಬೆದರಿಕೆ ಹಾಕಿದರು. ಅವರು ಕೇವಲ ಎರಡು ಗಂಟೆಗಳಲ್ಲಿ ಭಾಗೀರಥಿಯಲ್ಲಿ ಹಿಂದೂಗಳನ್ನು ಮುಳುಗಿಸುತ್ತಾರೆ ಎಂದು ಹೇಳಿದರು. ಇದು ಏನು ಭಾಷೆ? ಇದು ಯಾವ ರಾಜಕೀಯ ಸಂಸ್ಕೃತಿ? ಬಂಗಾಳದಲ್ಲಿ ಹಿಂದೂಗಳಿಗೆ ಏನಾಗುತ್ತಿದೆ? ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಹಿಂದೂಗಳನ್ನು 2ನೇ ಪ್ರಜೆಯನ್ನಾಗಿ ಮಾಡಿದೆ ಎಂದು ತೋರುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ತಿಂಡಿ ಮಾಡಲ್ಲ ಎಂದಿದ್ದಕ್ಕೆ ಹಲ್ಲೆಗೈದು ಅತ್ತೆ ಕೊಲೆ – ಕುಸಿದು ಸತ್ತರೆಂದು ಕಥೆ ಕಟ್ಟಿದ್ದ ಸೊಸೆ ಅರೆಸ್ಟ್
ಎಡಪಕ್ಷಗಳು, ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಭಿವೃದ್ಧಿಯ ದೃಷ್ಟಿ ಇಲ್ಲ, ಎಡಪಕ್ಷಗಳು ತ್ರಿಪುರಾವನ್ನು ಸಂಪೂರ್ಣವಾಗಿ ನಾಶಪಡಿಸಿದರು ಅವರು 35 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಕಳೆದ 5 ವರ್ಷಗಳಲ್ಲಿ ಬಿಜೆಪಿ ತ್ರಿಪುರವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ನಿಮ್ಮ ಕನಸುಗಳನ್ನು ನನಸಾಗಿಸುವುದು ನನ್ನ ಕನಸು, ನಿಮ್ಮೆಲ್ಲರಿಗೂ ಮತ್ತು ದೇಶಕ್ಕೂ ಸೇವೆ ಸಲ್ಲಿಸಲು ನನಗೆ ಆಶೀರ್ವಾದಿಸಬೇಕು. ನನ್ನ ಬಳಿ ಏನೂ ಇಲ್ಲ ನೀವೆಲ್ಲರೂ ಕುಟುಂಬದವರು, ನಿಮ್ಮಗಾಗಿ ನಿಮ್ಮ ಮಕ್ಕಳಿಗಾಗಿ ಮಾತ್ರ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.