ನವದೆಹಲಿ: ಈ ಬಾರಿಯ ಬಜೆಟ್‌ನ ಮಹತ್ವಪೂರ್ಣ ಘಟ್ಟವೆಂದರೆ ಬಡವರ ಕಲ್ಯಾಣ. ಪ್ರತಿಯೊಬ್ಬ ಬಡವನಲ್ಲೂ ಸುಸಜ್ಜಿತ ಮನೆ ಇರಬೇಕು, ಅದರಲ್ಲಿ ನಲ್ಲಿಯ ವ್ಯವಸ್ಥೆ, ಶೌಚಾಲಯ, ಗ್ಯಾಸ್ ವ್ಯವಸ್ಥೆ ಈ ಎಲ್ಲಾ ವಿಷಯಗಳ ಬಗ್ಗೆ ವಿಶೇಷ ಗಮನ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ವರ್ಷದ ಬಜೆಟ್ ಬಗೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಆಧುನಿಕತೆ ಬಂದಿದೆ. ಟೆಕ್ನಾಲಜಿ, ಕಿಸಾನ್ ಡ್ರೋನ್, ವಂದೇ ಭಾರತ್ ರೈಲು, ಡಿಜಿಟಲ್ ಕರೆನ್ಸಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲ್ ಯುನಿಟ್‌ಗಳು, ಡಿಜಿಟಲ್ ಪರಿಸರ ವ್ಯವಸ್ಥೆ ಬರಲಿದೆ. ಯುವ, ಮಧ್ಯಮ, ಬಡವರು, ದಲಿತರು, ಎನ್ನುವ ತಾರತಮ್ಯ ಇಲ್ಲದೇ ಎಲ್ಲರಿಗೂ ಈ ಸೇವೆ ಲಭ್ಯವಾಗಲಿದೆ ಎಂದು ಪ್ರಧಾನಿ ತಿಳಿಸಿದರು.
Advertisement
Advertisement
ಆಧುನಿಕ ಇಂಟರ್‌ನೆಟ್ ಸಂಪರ್ಕದ ಬಗೆಯೂ ಅಷ್ಟೇ ಮಹತ್ವ ನೀಡಲಾಗಿದೆ. ದೇಶದ ಎತ್ತರದ ಪ್ರದೇಶಗಳಾದ ಹಿಮಾಲಯ, ಜಮ್ಮು ಕಾಶ್ಮೀರಗಳಲ್ಲಿ ಜನಜೀವನ ಸರಳವಾಗಬೇಕು. ಆ ಪ್ರದೇಶಗಳಿಂದ ಜನರು ಪಲಾಯನಗೈಯುವಂತಾಗಬಾರದು. ಇವುಗಳನ್ನು ಗಮನದಲ್ಲಿರಿಸಿಕೊಂಡೇ ಹೊಸ ಘೋಷಣೆಗಳನ್ನು ಮಾಡಲಾಗಿದೆ. ಭಾರತದ ಎತ್ತರದ ಪ್ರದೇಶಗಳಿಗಾಗಿ ಪರ್ವತ್ ಮಾಲಾ ಯೋಜನೆ ತರಲಾಗಿದೆ. ಇದು ಸಾರಿಗೆ ಹಾಗೂ ಸಂಪರ್ಕದ ಆಧುನಿಕ ವ್ಯವಸ್ಥೆಯ ನಿರ್ಮಾಣ ಮಾಡುತ್ತದೆ. ಇದರಿಂದ ಗಡಿ ಪ್ರದೇಶದ ಜನರಿಗೂ ದೊಡ್ಡ ಮಟ್ಟದ ಬಲ ದೊರೆಯುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: Budget 2022: ಯಾವುದು ಇಳಿಕೆ? ಯಾವುದು ಏರಿಕೆ?
Advertisement
ಭಾರತದ ಕೋಟಿ ಕೋಟಿ ಜನರ ಆಶಯ ಗಂಗೆಯ ಶುದ್ಧೀಕರಣ. ಇದರೊಂದಿಗೆ ರೈತರ ಕಲ್ಯಾಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಒಂದು ಮಹತ್ವಪೂರ್ಣ ಹೆಜ್ಜೆ ಇಡಲಾಗಿದೆ. ಗಂಗಾ ನದಿ ತೀರ ಪ್ರದೇಶಗಳಲ್ಲಿ ನೈಸರ್ಗಿಕ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇದರಿಂದ ಗಂಗೆ ನೀರಿಗೆ ರಾಸಾಯನಿಕ ಬೆರಕೆಯಾಗುವುದನ್ನು ತಡೆಯಲು ಸಹಾಯವಾಗುತ್ತದೆ ಎಂದರು.
Advertisement
ಹೊಸ ಕೈಗಾರಿಕೆಯ ಸ್ಟಾರ್ಟ್ಪ್‌ಗಳಿಗೆ ಪ್ರೋತ್ಸಾಹ ನೀಡಲು ವಿಶೇಷ ಸಹಾಯ ನಿಧಿ ನೀಡಲಾಗುತ್ತಿದೆ. ಆಹಾರ ಸಂಸ್ಕರಣೆ ಉದ್ಯೋಗಕ್ಕೆ ಹೊಸ ಪ್ಯಾಕೇಜ್ ನೀಡಲಾಗುತ್ತಿದೆ. ಇದರಿಂದ ರೈತರಿಗೆ ಲಾಭ ದೊರಕಿಸಲು ದೊಡ್ಡ ಮಟ್ಟದಲ್ಲಿ ಸಹಾಯವಾಗಲಿದೆ. ರೈತರ ಖಾತೆಗಳಿಗೆ 2 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ನೇರ ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: Budget 2022: ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ
ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಹಾಗೂ ಅವರ ಸಂಪೂರ್ಣ ತಂಡಕ್ಕೆ ಜನ ಸ್ನೇಹಿ ಹಾಗೂ ಪ್ರಗತಿಶೀಲ ಬಜೆಟ್ ಮಂಡನೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ತುಂಬು ಹೃದಯದ ಧನ್ಯವಾದ ತಿಳಿಸಿದರು.