ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಅನ್ನು ಸಂಸತ್‌ನಲ್ಲಿ ಮಂಗಳವಾರ ಮಂಡಿಸಿದರು. ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
Advertisement
ಆದಾಯ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಬಗ್ಗೆ ಹೆಚ್ಚು ನಿರೀಕ್ಷೆ ಹೊಂದಲಾಗಿತ್ತು. ಆದರೆ ಬಜೆಟ್‌ನಲ್ಲಿ ಅದ್ಯಾವುದೇ ಬದಲಾವಣೆ ಆಗಿಲ್ಲ. ಆದಾಗ್ಯೂ ತೆರಿಗೆದಾರರು ಈಗ ಎರಡು ವರ್ಷಗಳಲ್ಲಿ ಐಟಿ ರಿಟರ್ನ್ಸ್ ಅನ್ನು ನವೀಕರಿಸಬಹುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದನ್ನೂ ಓದಿ: Budget 2022: ರಾಷ್ಟ್ರೀಯ ಹೆದ್ದಾರಿ 25 ಸಾವಿರ ಕಿ.ಮೀ ವಿಸ್ತರಣೆ – 400 ವಂದೇ ಭಾರತ್ ರೈಲು ತಯಾರಿ ಗುರಿ
Advertisement
ಐಟಿ ರಿಟರ್ನ್ಸ್ ಸಲ್ಲಿಕೆ ವೇಳೆ ಆಗಿರುವ ಲೋಪ ಸರಿಪಡಿಸಿ, ನವೀಕೃತ ರಿಟರ್ನ್ಸ್ ಸಲ್ಲಿಸಲು ಮೌಲ್ಯಮಾಪನ ವರ್ಷದಿಂದ 2 ವರ್ಷಗಳವರೆಗೆ ಕಾಲಾವಕಾಶ ನೀಡಲಾಗಿದೆ. ವರ್ಜುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆಯಿಂದ ಬರುವ ಯಾವುದೇ ಆದಾಯಕ್ಕೆ ಶೇ.30 ತೆರಿಗೆ ವಿಧಿಸಲಾಗುತ್ತದೆ. ವರ್ಚುವಲ್ ಸ್ವತ್ತುಗಳ ಉಡುಗೊರೆಗಳನ್ನು ಸ್ವೀಕರಿಸುವವರಿಗೆ ತೆರಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Budget 2022: ವರ್ಲ್ಡ್ ಕ್ಲಾಸ್ ಶಿಕ್ಷಣಕ್ಕೆ ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆ
Advertisement
Advertisement
ಆದಾಯ ತೆರಿಗೆ ದರಗಳು
2.5 ಲಕ್ಷ ರೂ.ವರೆಗೆ – ಶೂನ್ಯ
2.5-5 ಲಕ್ಷ – ಶೇ.5
5-7.50 ಲಕ್ಷ – ಶೇ.10 (ಒಟ್ಟು ಆದಾಯ 5 ಲಕ್ಷ ಮೇಲ್ಪಟ್ಟು ಇದ್ದರೆ 12,500 ರೂ. ಹೆಚ್ಚುವರಿ ತೆರಿಗೆ)
7.50-10 ಲಕ್ಷ – ಶೇ.15 (ಒಟ್ಟು ಆದಾಯ 7.5 ಲಕ್ಷ ಮೇಲ್ಪಟ್ಟು ಇದ್ದರೆ 37,500 ರೂ. ಹೆಚ್ಚುವರಿ ತೆರಿಗೆ)
10-12.50 ಲಕ್ಷ – ಶೇ.20 (ಒಟ್ಟು ಆದಾಯ 10 ಲಕ್ಷ ಮೇಲ್ಪಟ್ಟು ಇದ್ದರೆ 75,000 ರೂ. ಹೆಚ್ಚುವರಿ ತೆರಿಗೆ)
12.50-15 ಲಕ್ಷ – ಶೇ.25 (ಒಟ್ಟು ಆದಾಯ 12.5 ಲಕ್ಷ ಮೇಲ್ಪಟ್ಟು ಇದ್ದರೆ 1,25,000 ರೂ. ಹೆಚ್ಚುವರಿ ತೆರಿಗೆ)
15 ಲಕ್ಷ ಮೇಲ್ಪಟ್ಟು – ಶೇ.30 (ಒಟ್ಟು ಆದಾಯ 15 ಲಕ್ಷ ಮೇಲ್ಪಟ್ಟು ಇದ್ದರೆ 1,87,500 ರೂ. ಹೆಚ್ಚುವರಿ ತೆರಿಗೆ)