ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚುನಾವಣಾ ಪ್ರಚಾರಕ್ಕಾಗಿ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ (Congress) ಆರೋಪಿಸಿರುವ ಬೆನ್ನಲ್ಲೇ ಮೋದಿ ಗುಜರಾತ್‌ನಲ್ಲಿ (Gujarat) ಬುಡಕಟ್ಟು ಜನಾಂಗದ ಇಬ್ಬರು ಅನಾಥ ಬಾಲಕರನ್ನು (Orphans) ಭೇಟಿಯಾಗಿ, ಅವರನ್ನು ಹೆಮ್ಮೆಯಿಂದ ಶ್ಲಾಘಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಚುನಾವಣಾ ರ‍್ಯಾಲಿಯಲ್ಲಿ ಇಬ್ಬರು ಬಾಲಕರ ಬಗ್ಗೆ ಪ್ರಧಾನಿ ಮಾತನಾಡಿರುವ ವೀಡಿಯೋವನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಗೌರವಾನ್ವಿತ ಪ್ರಧಾನಿಯವರಿಂದ ಅವಿ ಮತ್ತು ಜೈ ಎಂಬ ಭವಿಷ್ಯದ ಕನಸಿನ ಕಥೆ ಕೇಳಿ ಎಂದು ಪಟೇಲ್ ಬರೆದಿದ್ದಾರೆ.
Advertisement
Advertisement
ವೀಡಿಯೋದಲ್ಲೇನಿದೆ?
ಮೋದಿ ಅವರು, ಬುಡಕಟ್ಟು ಜನಾಂಗದ 6 ವರ್ಷಗಳ ಹಿಂದೆ ತಮ್ಮ ಪೋಷಕರನ್ನು ಕಳೆದುಕೊಂಡ ಅವಿ ಹಾಗೂ ಜೈ ಹೆಸರಿನ ಬಾಲಕರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ನೇತ್ರಂಗ್‌ನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಬಾಲಕರ ವಿವರಗಳನ್ನು ಮೋದಿ ಹಂಚಿಕೊಂಡಿದ್ದಾರೆ.
Advertisement
ನಮ್ಮ ಸರ್ಕಾರ ಕೈಗೊಂಡಿರುವ ಉಪಕ್ರಮಗಳಿಂದ ಇಬ್ಬರು ಅನಾಥ ಮಕ್ಕಳ ಜೀವನ ಇದೀಗ ಉತ್ತಮವಾಗಿದ್ದು, ಅವರನ್ನು ಭೇಟಿಯಾಗುವಲ್ಲಿ ಸ್ವಲ್ಪ ತಡವಾಗಿದೆ. ಈ ಇಬ್ಬರೂ ಬಾಲಕರು 6 ವರ್ಷಗಳ ಹಿಂದೆ ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದಾರೆ. ಇವರಿಬ್ಬರಿಗೆ ಇದೀಗ ಕೇವಲ 8 ಹಾಗೂ 6 ವರ್ಷ ವಯಸ್ಸು. ಅವರಿಬ್ಬರನ್ನು ನೋಡಿಕೊಳ್ಳಲು ಯಾರೂ ಇಲ್ಲ. ಆದರೂ ಅವರಿಬ್ಬರು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಿದ್ದರು ಎಂದು ನುಡಿದಿದ್ದಾರೆ. ಇದನ್ನೂ ಓದಿ: ಪೊಲೀಸರಿಗೆ ಹೆದರಬೇಡಿ, ಬೇಕಾದ್ರೆ ಅವರ ಮೇಲೆ ಬಾಂಬ್ ಹಾಕಿ: ʼಕೈʼ ನಾಯಕಿ ವಿವಾದಾತ್ಮಕ ಹೇಳಿಕೆ
Advertisement
સાંભળીએ અવિ અને જય નામના બાળકોના સંઘર્ષની હૃદયસ્પર્શી વાત માનનીય પ્રધાનમંત્રીશ્રીના મુખેથી.. #ભરોસો_તો_ભાજપનો pic.twitter.com/clj6SQoUE4
— Bhupendra Patel (@Bhupendrapbjp) November 27, 2022
ಈ ಬಾಲಕರ ಬಗ್ಗೆ ನಾನು ತಿಳಿದುಕೊಂಡಾಗ ಅವರಿಗೆ ಸಹಾಯ ಮಾಡುವಂತೆ ನಮ್ಮ ಪಕ್ಷದ ಸದಸ್ಯ ಸಿಆರ್ ಪಾಟೀಲ್ ಅವರನ್ನು ಕೇಳಿದೆ. ಇದೀಗ ಈ ಬಾಲಕರಿಗೆ ಉತ್ತಮ ಶಿಕ್ಷಣದ ವ್ಯವಸ್ಥೆ ಹಾಗೂ ಮನೆಯನ್ನೂ ನೀಡಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.
ಡಿಸಿ ಹಾಗೂ ಎಂಜಿನಿಯರ್ ಆಗಲು ಬಯಸುವ ಈ ಬಾಲಕರನ್ನು ನೋಡಿದಾಗ ನನ್ನ ಹೃದಯ ಹೆಮ್ಮೆಯಿಂದ ಉಬ್ಬುತ್ತಿದೆ. ತಮ್ಮ ಹೆತ್ತವರ ಅನುಪಸ್ಥಿತಿಯಲ್ಲೂ, ಸ್ವಂತ ಆಶ್ರಯವಿಲ್ಲದ ಸ್ಥಿತಿಯಲ್ಲೂ ಈ ಬಾಲಕರ ದೊಡ್ಡ ಕನಸಿನ ಬಗ್ಗೆ ಕೇಳಿ ನನಗೆ ಸ್ಪೂರ್ತಿಯೆನಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: `ಏರೋ ಇಂಡಿಯಾ 2023′ ಏರ್ ಶೋಗೆ ದಿನಾಂಕ ಫಿಕ್ಸ್