ಲಕ್ನೋ: ಅಯೋಧ್ಯೆ ರಾಮಮಂದಿರದ (Ayodhya Ram mandir) ಬಳಿಕ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಇಂದು ಉತ್ತರಪ್ರದೇಶದ ಸಂಭಾಲ್‌ನಲ್ಲಿ ಮತ್ತೊಂದು ಹಿಂದೂ ದೇಗುಲ ಶ್ರೀ ಕಲ್ಕಿಧಾಮದ ಶಂಕುಸ್ಥಾಪನೆಯನ್ನು ನೆರವೇರಿಸಿದರು.
#WATCH | Saints of Hindu shrine Kalki Dham present the proposed form of Kalki Dham temple to Prime Minister Narendra Modi. pic.twitter.com/OiviwNBTp6
— ANI (@ANI) February 19, 2024
Advertisement
ಉತ್ತರ ಪ್ರದೇಶ (Uttarpradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮತ್ತು ಕಲ್ಕಿಧಾಮ (Kalki Dham) ಪೀಠಾಧೀಶ್ವರ ಆಚಾರ್ಯ ಪ್ರಮೋದ್ ಕೃಷ್ಣಂ ಅವರೊಂದಿಗೆ ಆಗಮಿಸಿದ ಮೋದಿ ಅವರು ಮೊದಲು ದೇವಾಲಯದ ಮಾದರಿಯನ್ನು ಅನಾವರಣಗೊಳಿಸಿದರು. ನಂತರ ಶಂಕುಸ್ಥಾಪನೆ ನೆರವೇರಿಸಿದರು.
Advertisement
Advertisement
ಬಳಿಕ ಮಾತನಾಡಿದ ಪ್ರಧಾನಿ, ಇಂದು ಛತ್ರಪತಿ ಶಿವಾಜಿ ಮಹಾರಾಜರ (Chhatrapati Shivaji Maharaj) ಜನ್ಮದಿನವೂ ಆಗಿದೆ. ಆದ್ದರಿಂದ ಈ ದಿನವು ಹೆಚ್ಚು ಪವಿತ್ರ ಮತ್ತು ಹೆಚ್ಚು ಸ್ಪೂರ್ತಿದಾಯಕವಾಗಿದೆ. ಈ ಸಂದರ್ಭದಲ್ಲಿ ನಾನು ಛತ್ರಪತಿ ಶಿವಾಜಿ ಮಹಾರಾಜರಿಗೆ ಗೌರವಪೂರ್ವಕವಾಗಿ ನಮಸ್ಕರಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ಏ.13ರಿಂದ 23ರ ವರೆಗೆ ವಿಶ್ವವಿಖ್ಯಾತ ಬೆಂಗಳೂರು ಕರಗ
Advertisement
#WATCH | UP: At the foundation stone laying ceremony of the Hindu shrine Kalki Dham in Sambhal, PM Modi says "…Just last month, on 22nd January, the country saw the wait of 500 years come to an end in Ayodhya. That experience of Ram Lalla's presence, that divine feeling, still… pic.twitter.com/LNhpRE1HlC
— ANI (@ANI) February 19, 2024
ಇಂದು ಸಂತರ ಭಕ್ತಿ ಮತ್ತು ಸಾರ್ವಜನಿಕರ ಉತ್ಸಾಹದಿಂದ ಮತ್ತೊಂದು ಪುಣ್ಯ ಕ್ಷೇತ್ರಕ್ಕೆ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಆಚಾರ್ಯರು ಮತ್ತು ಸಂತರ ಸಮ್ಮುಖದಲ್ಲಿ ಭವ್ಯವಾದ ಕಲ್ಕಿ ಧಾಮದ ಶಂಕುಸ್ಥಾಪನೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಕಲ್ಕಿಧಾಮವು ಭಾರತೀಯ ನಂಬಿಕೆಯ ಮತ್ತೊಂದು ಧಾರ್ಮಿಕ ಕೇಂದ್ರವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ನನಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಧರ್ಮಗುರುಗಳು ಹಾಗೂ ಧರ್ಮಗುರುಗಳು ಪಾಲ್ಗೊಂಡಿದ್ದರು. ಶ್ರೀ ಕಲ್ಕಿ ಧಾಮದ ನಿರ್ಮಾಣವನ್ನು ಕೃಷ್ಣಂ ಅವರ ಅಧ್ಯಕ್ಷತೆಯ ಶ್ರೀ ಕಲ್ಕಿ ಧಾಮ್ ನಿರ್ಮಾಣ್ ಟ್ರಸ್ಟ್ ನೋಡಿಕೊಳ್ಳುತ್ತದೆ.