ನವದೆಹಲಿ: ಕಳೆದ ದೀಪಾವಳಿಗೆ ಸೈನಿಕರಿಗೆ ಸಂದೇಶ ಕಳುಹಿಸಿ ಎಂದು ದೇಶದ ಜನರಲ್ಲಿ ಕೇಳಿದ್ದ ಪ್ರಧಾನಿ ಮೋದಿ ಈ ಹೋಳಿಯ ಸಂಭ್ರಮದಲ್ಲಿ ಹೊಸ ಭಾರತದ ನಿರ್ಮಾಣಕ್ಕಾಗಿ ಪ್ರತಿಜ್ಞೆಯನ್ನು ಕೈಗೊಂಡು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಈ ಸಂಬಂಧ ನಮೋ ಆಪ್ ಮೂಲಕ ದೇಶವ್ಯಾಪಿ ಪ್ರತಿಜ್ಞಾ ಆಂದೋಲನಕ್ಕೆ ಮೋದಿ ಚಾಲನೆ ನೀಡಿದ್ದಾರೆ. 2022ರ ಸ್ವಾತಂತ್ರ್ಯ ಸಂಭ್ರಮಕ್ಕೆ 75 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಗಾಂಧೀಜಿ, ಸರ್ದಾರ್ ವಲ್ಲಭಭಾಯ್ ಪಾಟೇಲ್, ಅಂಬೇಡ್ಕರ್ ಕನಸನ್ನು ನನಸು ಮಾಡಿ ಹೊಸ ಭಾರತ ನಿರ್ಮಿಸಲು ಸಹಕಾರ ನೀಡಿ ಎಂದು ಮೋದಿ ವಿನಂತಿ ಮಾಡಿಕೊಂಡಿದ್ದಾರೆ.
Advertisement
ಜನ ಏನು ಮಾಡಬೇಕು?
ಆಪ್‍ನಲ್ಲಿ ದೇಶದ ಕೆಲವೊಂದು ಸಮಸ್ಯೆ/ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಟಗೆರಿಗಳನ್ನು ನೀಡಲಾಗಿದ್ದು, ಇವುಗಳಲ್ಲಿ ಒಂದು ಆಯ್ಕೆಯನ್ನು ಜನ ಆರಿಸಿಕೊಳ್ಳಬೇಕಾಗುತ್ತದೆ.
Advertisement
ಯಾವೆಲ್ಲ ವಿಭಾಗಗಳಿವೆ?
– ಭಾರತದ ಭ್ರಷ್ಟಾಚಾರ ನಿರ್ಮೂಲನೆಗೆ ಕೈ ಜೋಡಿಸುತ್ತೇನೆ
– ಕ್ಯಾಶ್‍ಲೆಸ್ ವ್ಯವಹಾರ ಹೆಚ್ಚಿಸಲು ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ
– ಸ್ವಚ್ಛ ಭಾರತಕ್ಕಾಗಿ ನಾನು ಕೆಲಸ ಮಾಡುತ್ತೇನೆ
– ಡ್ರಗ್ಸ್ ಮುಕ್ತ ಭಾರತ ನಿರ್ಮಾಣಕ್ಕೆ ಕೈ ಜೋಡಿಸುತ್ತೇನೆ
– ಮಹಿಳೆಯರಿಗೆ ಪ್ರೋತ್ಸಾಹ ಮತ್ತು ಅಭಿವೃದ್ಧಿಗೆ ನಾನು ಬೆಂಬಲ ನೀಡುತ್ತೇನೆ
– ಪ್ರಕೃತಿ ಮತ್ತು ಪಾಕೃತಿಕ ಸಂಪನ್ಮೂಲಗಳ ರಕ್ಷಣೆಗೆ ನಾನು ಕಟಿಬದ್ಧನಾಗಿದ್ದೇನೆ
– ಭಾರತದ ಶಕ್ತಿ, ಏಕತೆ ಮತ್ತು ಸದ್ಭಾವನೆಗಾಗಿ ನಾನು ನಿಲ್ಲುತ್ತೇನೆ
– ನಾನು ಉದ್ಯೋಗವನ್ನು ಬೇಡದೇ ಉದ್ಯೋಗ ನೀಡುವ ವ್ಯಕ್ತಿಯಾಗುತ್ತೇನೆ
Advertisement
ಈ ಮೇಲೆ ತಿಳಿಸಿದ ಆಯ್ಕೆಯಲ್ಲಿ ಒಂದನ್ನು ಆರಿಸಿಕೊಂಡು ಪ್ರತಿಜ್ಞೆ ಮಾಡಬೇಕು. ಈ ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ನೀವು ನಿಮ್ಮ ಪ್ರತಿಜ್ಞೆಯನ್ನು ಫೇಸ್‍ಬುಕ್ ಮತ್ತು ಟ್ವಿಟ್ಟರ್‍ನಲ್ಲಿ ಶೇರ್ ಮಾಡಲು ಸಾಧ್ಯವಿದೆ. ನರೇಂದ್ರ ಮೋದಿ ಆಪ್‍ನ್ನು ನೀವು ಗೂಗಲ್ ಆಂಡ್ರಾಯ್ಡ್ ಪ್ಲೇ ಸ್ಟೋರ್ ಮತ್ತು ಆಪಲ್ ಐಟ್ಯೂನ್ ಸ್ಟೋರ್‍ನಿಂದ ಡೌನ್‍ಲೋಡ್ ಮಾಡಬಹುದು.
Advertisement
@NamoApp — For
Android : https://t.co/lnk1tIaFdE
iOS : https://t.co/ql8OOkLfR9
Windows: https://t.co/pyJg9Fp97X pic.twitter.com/tgEdVilVQV
— NarendraModi App (@NamoApp) July 22, 2016