ಅಬುಧಾಬಿಯಲ್ಲಿ ಯಕ್ಷಗಾನ ವೇಷಧಾರಿಗಳಿಂದ ಮೋದಿಗೆ ಅದ್ಧೂರಿ ಸ್ವಾಗತ

Public TV
1 Min Read
NARENDRA MODI 1

ದುಬೈ: ಅಬುಧಾಬಿ (Abu Dhabi) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಇಂದು ಕಾರ್ಯಕ್ರಮವೊಂದಕ್ಕೆ ಬಹಳ ವಿಶೇಷವಾಗಿ ಸ್ವಾಗತಿಸಿರುವುದು ಗಮನ ಸೆಳೆದಿದೆ.

ಹೌದು. ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿ ನಿರ್ಮಾಣಗೊಂಡಿರೋ ದೇಶದ ಮೊದಲ ಹಿಂದೂ ದೇವಸ್ಥಾನವನ್ನು ಪ್ರಧಾನಿ ಮೋದಿ (Narendra Modi) ಫೆ.14ರಂದು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿಯವರು ಈಗಾಗಲೇ ಅಬುಧಾಬಿಗೆ ಬಂದಿಳಿದಿದ್ದಾರೆ. ಬಳಿಕ ‘ಅಹ್ಲಾನ್ ಮೋದಿ’ ಕಾರ್ಯಕ್ರಮಕ್ಕಾಗಿ ಮೋದಿ ಅವರು ಅಬುಧಾಬಿಯ ಜಾಯೆದ್ ಸ್ಪೋರ್ಟ್ಸ್ ಸ್ಟೇಡಿಯಂಗೆ ಆಗಮಿಸಿದರು. ಈ ವೇಳೆ ಮೋದಿಯವರನ್ನು ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನ (Yakshagana) ಹಾಗೂ ಭರತನಾಟ್ಯ (Bharatanatya) ಮೊದಲಾದ ವೇಷಗಳ ಮೂಲಕ ವಿಶೇಷವಾಗಿ ಸ್ವಾಗತಿಸಲಾಯಿತು.

ಅಬುದಾಬಿಯ ಜಾಯೆದ್ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂ ಮೋದಿ ಮಯವಾಗಿದೆ. ಮೋದಿ ಪರ ಘೋಷಣೆಗಳು ಮುಗಿಲುಮುಟ್ಟಿದವು. ಈ ಕಾರ್ಯಕ್ರಮಕ್ಕೆ ಹಾಜರಾಗಲು ಬರೋಬ್ಬರಿ 65 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ರು. ಆದ್ರೆ ಪ್ರತಿಕೂಲ ಹವಾಮಾನದ ಕಾರಣ 35 ಸಾವಿರ ಮಂದಿಗೆ ಮಾತ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಯ್ತು. ಭಾರತೀಯ ಅಭಿಮಾನಿಗಳತ್ತ ಪ್ರಧಾನಿ ಮೋದಿ ಕೈಬೀಸಿ ಸಂತಸ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಮೋದಿಯಿಂದ ಬುಧವಾರ UAEಯ ಮೊದಲ ಹಿಂದೂ ದೇಗುಲ ಉದ್ಘಾಟನೆ – 65,000ಕ್ಕೂ ಹೆಚ್ಚು ಗಣ್ಯರ ನೋಂದಣಿ!

Share This Article