ಧಾರವಾಡ: ಅನುಭವ ಮಂಟಪದ ಪರಿಕಲ್ಪನೆ ನೀಡಿದ ಬಸವಣ್ಣ ಅವರ ಮೂರ್ತಿ ಲಂಡನ್‌ನಲ್ಲಿ (London) ನಿರ್ಮಾಣವಾಗಿದೆ. ಆದರೆ ಕೆಲವರು ಲಂಡನ್‌ನಲ್ಲಿ ನಮ್ಮ ದೇಶದ ವಿರುದ್ಧ ಅಪಪ್ರಚಾರ ಮಾಡಿರುವುದು ನಮ್ಮ ದೌರ್ಭಾಗ್ಯ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಪರೋಕ್ಷವಾಗಿ ರಾಹುಲ್ ಗಾಂಧಿ (Rahul Gandhi) ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಧಾರವಾಡದಲ್ಲಿ (Dharwad) ನಡೆದ ಕಾರ್ಯಕ್ರಮದಲ್ಲಿ ಐಐಟಿ ಕ್ಯಾಂಪಸ್ (IIT Campus) ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲೇ ಅಗ್ರಮಾನ್ಯ ಪ್ರಜಾಪ್ರಭುತ್ವದ ದೇಶ ನಮ್ಮದು. ಅನುಭವ ಮಂಟಪ ಸ್ಥಾಪನೆ ಮಾಡಿದ ನಾಡು ಕರ್ನಾಟಕ. ಅನುಭವ ಮಂಟಪದ ಪರಿಕಲ್ಪನೆ ಕೊಟ್ಟ ಬಸವಣ್ಣ ಅವರ ಮೂರ್ತಿ ಲಂಡನ್‌ದಲ್ಲಿ ನಿರ್ಮಾಣವಾಗಿದೆ. ಅದ್ರೆ ನಮ್ಮ ದೌಭಾಗ್ಯವೆಂದರೆ ಅದೇ ಲಂಡನ್‌ನಲ್ಲಿ ಕೆಲವರು ನಮ್ಮ ದೇಶದ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಪರೋಕ್ಷವಾಗಿ ರಾಹುಲ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: JDS ಕಾರ್ಯಕರ್ತರಿಗೆ ಭರ್ಜರಿ ಬಾಡೂಟ -ನಾನು ರಾಮನಗರದಲ್ಲೇ ಮಣ್ಣಾಗೋದು ಎಂದ HDK
Advertisement
Advertisement
ಕನ್ನಡಿಗರ ಋಣ ತೀರಿಸುತ್ತೇನೆ: ಇದಕ್ಕೂ ಮುನ್ನ ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಬಸವಣ್ಣ ಅವರಿಗೆ ನನ್ನ ನಮನಗಳು. ನಾಡಿನ ಎಲ್ಲಾ ಸಹೋದರ-ಸಹೋದರಿಯರಿಗೆ ನನ್ನ ನಮಸ್ಕಾರಗಳು, ಕಳೆದ ಕೆಲವು ದಿನಗಳಲ್ಲಿ ನನಗೆ ಹುಬ್ಬಳ್ಳಿಗೆ ಬರುವ ಅವಕಾಶ ಸಿಕ್ಕಿತ್ತು. ಅಂದು ನನಗೆ ಸಿಕ್ಕ ಪ್ರೀತಿ, ಸ್ವಾಗತ ನಾನು ಎಂದೂ ಮರೆಯುವುದಿಲ್ಲ. ಕನ್ನಡಿಗರ ಪ್ರೀತಿ ನನ್ನ ಮೇಲೆ ಋಣವಾಗಿದೆ, ಕನ್ನಡಿಗರ ಈ ಋಣವನ್ನು ರಾಜ್ಯದ ಅಭಿವೃದ್ಧಿ ಮಾಡುವ ಮೂಲಕ ತೀರಿಸುತ್ತೇನೆ ಎಂದು ಶಪಥ ಮಾಡಿದರು.
Advertisement
ಧಾರವಾಡ ಬಹು ಸಂಸ್ಕೃತಿ ಜಿಲ್ಲೆ, ವರಕವಿ ಬೇಂದ್ರೆ, ಭೀಮಸೇನ ಜೋಶಿ, ಬಸವರಾಜಗುರು ಅವರಂತಹ ರತ್ನಕೊಟ್ಟ ನಾಡು ಇದು. ಧಾರವಾಡ ಪೇಡವಂತೂ ನಾನು ಮರೆಯುವಂತಿಲ್ಲ. ಈಗಲೂ ಪ್ರಹ್ಲಾದ್ ಜೋಶಿ ನನಗೆ ಪೇಡ ಕೊಟ್ಟಿದ್ದಾರೆ. ಆದರೆ ಗ್ಲಾಸ್‌ನಲ್ಲಿ ಮುಚ್ಚಿದ ಬಾಕ್ಸ್ನಲ್ಲಿ ತುಂಬಿಕೊಟ್ಟಿದ್ದಾರೆ, ಅದನ್ನು ಹೇಗೆ ತಿನ್ನಲಿ? ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದನ್ನೂ ಓದಿ: ಹುಟ್ಟೂರಿನ ಮಣ್ಣಲ್ಲಿ ಧ್ರುವನಾರಾಯಣ್ ಲೀನ – ರಾಜಕೀಯದ ಅಜಾತಶತ್ರು ಇನ್ನು ನೆನಪು ಮಾತ್ರ
ಮುಂದುವರಿದು ಧಾರವಾಡ-ಹುಬ್ಬಳ್ಳಿ ಜಿಲ್ಲೆಯನ್ನು ಸ್ಮಾಟ್ ಸಿಟಿ ಮಾಡುವ ಮೂಲಕ ಇನ್ನಷ್ಟೂ ಅಭಿವೃದ್ಧಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಮೊದಲು ಜನರು ಮೂಲ ಸೌಕರ್ಯವಿಲ್ಲದೇ ಪರದಾಡುತ್ತಿದ್ದರು. ರಸ್ತೆಯಿಲ್ಲದೆ ಸಮಸ್ಯೆ ಎದುರಿಸುತ್ತಿದ್ದರು. ಆದರೆ ರಾಜ್ಯಕ್ಕೆ ಕಳೆದ 9 ವರ್ಷಗಳಿಂದ ಆಧುನಿಕ ಸ್ಪರ್ಶ ಸಿಕ್ಕಿದೆ. ಕೇವಲ ರಸ್ತೆಗಳು ಮಾತ್ರವಲ್ಲದೇ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ನಿರ್ಮಾಣವಾಗಿವೆ. ಗ್ರಾಮ-ಗ್ರಾಮಗಳಿಗೆ ಅಂತರ್ಜಾಲ ವ್ಯವಸ್ಥೆ ಕಲ್ಪಿಸಲಾಗಿದೆ, ಡಿಜಿಟಲೀಕರಣದಲ್ಲಿ ಭಾರತ ಅಗ್ರಮಾನ್ಯವಾಗಿ ಬೆಳೆದಿದೆ ಎಂದು ಶ್ಲಾಘಿಸಿದರು.