ವಾಷಿಂಗ್ಟನ್‌ನಲ್ಲಿ ಅದ್ಧೂರಿ ಸ್ವಾಗತ – ಮೋದಿಗಾಗಿ ಖಾದ್ಯ ತಯಾರಿಸಿದ್ದಾರೆ ಜಿಲ್ ಬೈಡೆನ್

Public TV
1 Min Read
Joe Biden hosts Indian Prime Minister Modi at White House 2

ವಾಷಿಂಗ್ಟನ್‌: ಎರಡನೇ ದಿನದ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಈಗ ವಾಷಿಂಗ್ಟನ್‌ ತಲುಪಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನದಂದು (International Yoga Day) ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಕಟ್ಟಡದಲ್ಲಿ ಯೋಗ ಕಾರ್ಯಕ್ರಮವನ್ನು ನಡೆಸಿದ ಬಳಿಕ ವಾಷಿಂಗ್ಟನ್‌ಗೆ ತೆರಳಿದ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.   ಇದನ್ನೂ ಓದಿ: ಯೋಗಕ್ಕೆ ಯಾವುದೇ ಹಕ್ಕುಸ್ವಾಮ್ಯ, ಪೇಟೆಂಟ್‌ಗಳಿಲ್ಲ: ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮೋದಿ ಭಾಷಣ

PM Narendra Modi In Washington Dinner With Bidens US Congress Address First Lady of the US Jill Biden worked with guest Chef 1

ಆಂಡ್ರ್ಯೂಸ್ ಏರ್ ಬೇಸ್‌ನಲ್ಲಿ ಇಳಿದ ಮೋದಿ ಅವರಿಗೆ ಗೌರವ ವಂದನೆಯನ್ನು ನೀಡುವ ಮೂಲಕ ಸ್ವಾಗತಿಸಲಾಯಿತು. ಈ ವೇಳೆ ಎರಡೂ ದೇಶಗಳ ರಾಷ್ಟ್ರಗೀತೆಗಳನ್ನು ನುಡಿಸಲಾಯಿತು.

ನಂತರ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತ ಭವನಕ್ಕೆ  (White House) ಆಗಮಿಸಿದ ಮೋದಿ ಅವರಿಗೆ ಅಧ್ಯಕ್ಷ ಜೋ ಬೈಡನ್‌ (Joe Biden) ಮತ್ತು ಪತ್ನಿ ಜಿಲ್ ಬಿಡೆನ್ (Jill Biden) ಸ್ವಾಗತಿಸಿದರು. ವಿಶೇಷವಾಗಿ ವೈಟ್‍ಹೌಸ್‍ನಲ್ಲಿ ಪ್ರಧಾನಿ ಮೋದಿಗೆ ಬೈಡೆನ್ ದಂಪತಿ ಔತಣಕೂಟ ಏರ್ಪಡಿಸಿದ್ದಾರೆ.

ಮೋದಿಗೆ ಸಸ್ಯಾಹಾರಿ ಭೋಜನವನ್ನು ಆಯೋಜಿಸಲಾಗಿದ್ದು ವಿಶೇಷವಾಗಿ ಸಿರಿಧಾನ್ಯಗಳ ಖಾದ್ಯ ಮಾಡಲಾಗಿದೆ. ಮೋದಿ ಔತಣಕೂಟಕ್ಕೆ ಬೈಡೆನ್ ಪತ್ನಿ ಉತ್ಸುಕರಾಗಿದ್ದಾರೆ. ಖುದ್ದು ಜಿಲ್ ಬೈಡೆನ್ ಅವರೇ ಖಾದ್ಯ ತಯಾರಿಸಿದ್ದಾರೆ ಎಂದು ವೈಟ್‍ಹೌಸ್ ಶೆಫ್ ಹೇಳಿದ್ದಾರೆ.

ಇಂದು ಮೋದಿ ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ಅಮೆರಿಕ ಸಂಸತ್ತಿನಲ್ಲಿ ಎರಡನೇ ಬಾರಿ ಭಾಷಣ ಮಾಡಿದ ಭಾರತದ ಮೊದಲ ಪ್ರಧಾನಿ ಎನ್ನಿಸಿಕೊಳ್ಳಲಿದ್ದಾರೆ.

Share This Article