ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ವರ್ಷಕ್ಕೆ ಎರಡು ಬಾರಿ ನವರಾತ್ರಿ ಉಪವಾಸ ಮಾಡ್ತಾರೆ. ಇದಾದ ಬಳಿಕ ಮಹತ್ವದ ಹೆಜ್ಜೆ ಇಡ್ತಾರೆ. ಈ ಬಾರಿ ಕೂಡ ಅಷ್ಟೇ ಪಂಚ ಸವಾಲುಗಳನ್ನ ಎದುರಿಸೋಕು ಮೊದಲೇ ನವರಾತ್ರಿ ಉಪವಾಸ ನಡೆಸ್ತಿದ್ದಾರೆ.
ಈ ವರ್ಷದ ಶರದ್ ನವರಾತ್ರಿ ಇಂದಿನಿಂದ (ಅಕ್ಟೋಬರ್ 10)ರಿಂದ ಆರಂಭವಾಗಲಿದ್ದು, ಅ.18ರ ವರೆಗೆ ಅಂದರೆ 9 ದಿನಗಳ ಕಾಲ ಮೋದಿಜೀ ಕಟ್ಟುನಿಟ್ಟಿನ ಉಪವಾಸದಲ್ಲಿರಲಿದ್ದಾರೆ. ಇಡೀ ದಿನದಲ್ಲಿ ಬಿಸಿನೀರು, ಸ್ವಲ್ಪ ಫಲಾಹಾರ ಸೇವಿಸುವ ಪ್ರಧಾನಿ, ಸಂಜೆ ಒಂದು ಲೋಟ ನಿಂಬೆಹಣ್ಣಿನ ರಸ ಬೆರೆಸಿದ ನೀರನ್ನು ಮಾತ್ರ ಕುಡಿಯುವರು. ಕಳೆದ 36 ವರ್ಷಗಳಿಂದ ನವರಾತ್ರಿ ವ್ರತವನ್ನು ಆಚರಿಸುತ್ತಿರುವ ಮೋದಿಯವರು ಇದೇ ವರ್ಷ ಚೈತ್ರ ನವರಾತ್ರಿಯನ್ನೂ ಸಹ ಶ್ರದ್ಧೆಯಿಂದ ಆಚರಿಸಿದ್ದರು. ಈಗ ಶರದ್ ನವರಾತ್ರಿ ಆಚರಿಸ್ತಿದ್ದಾರೆ.
Advertisement
Advertisement
ವ್ರತ ಹಿಂದಿನ ರಹಸ್ಯವೇನು?
ಮೋದಿಯವರು ನವರಾತ್ರಿಯನ್ನು ಈ ವಯಸ್ಸಿನಲ್ಲೂ ಕಠಿಣ ರೀತಿಯಲ್ಲಿ ಆಚರಿಸುವುದರ ಹಿಂದೆ ಒಂದು ರಹಸ್ಯವಿದೆ. ನವರಾತ್ರಿ ವ್ರತ ಕೈಗೊಳ್ಳುವುದಕ್ಕೂ ಮುನ್ನ ಮೋದಿಯವರು ಒಂದು ಅತ್ಯಂತ ಪ್ರಮುಖ ನಿರ್ಣಯದ ಸಾಫಲ್ಯತೆಗಾಗಿ ಅಂಬಾದೇವಿಯಲ್ಲಿ ಬೇಡುವರಂತೆ. ನವರಾತ್ರಿಯ ವ್ರತವನ್ನು ಪರಿಪೂರ್ಣವಾಗಿ ನಡೆಸಿ, ತನ್ನ ಬೇಡಿಕೆ ಸಫಲಗೊಳ್ಳುವಂತೆ ಬೇಡಿದ್ರೆ ಆ ದುರ್ಗಾಮಾತೆ ಕರುಣಿಸದೆ ಇರೋದಿಲ್ಲ ಅಂತ ಭಾವಿಸಲಾಗುತ್ತದೆ. ಅಂತೆಯೇ ಚೈತ್ರ ನವರಾತ್ರಿ ವ್ರತದ ಬಳಿಕವೇ ಮೋದಿ ಜಿಎಸ್‍ಟಿ ಜಾರಿಗೆ ತಂದಿದ್ದರು. ಈಗ ಪಂಚ ರಾಜ್ಯಗಳ ಚುನವಾಣೆ ಇದ್ದು ಯಶಸ್ಸಿಗಾಗಿ ಬೇಡಲಿದ್ದಾರೆ.
Advertisement
Advertisement
2014ರಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದಾಗ್ಲೂ ಮೋದಿ ತಮ್ಮ ನವರಾತ್ರಿ ಉಪವಾಸಕ್ಕೆ ಭಂಗ ತಂದುಕೊಳ್ಳಲಿಲ್ಲ. ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮೋದಿಯವ್ರಿಗಾಗಿ ವಿಶೇಷ ಔತಣಕೂಟ ಏರ್ಪಡಿಸಿದ್ದಾಗ್ಲೂ ಮೋದಿ ಕೇವಲ ನಿಂಬೆ ಪಾನೀಯ ಸ್ವೀಕರಿಸಿ ತಮ್ಮ ವ್ರತ ಪಾಲಿಸಿದ್ದರು. ಕಳೆದ ವರ್ಷ ನವರಾತ್ರಿ ಸಂದರ್ಭ ಮೋದಿಯವರು ತಮ್ಮ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದರು. ತಮ್ಮ ಗೆಲುವಿನ ಅಭಿಯಾನಕ್ಕೆ ಪ್ರಥಮ ಭಾಷ್ಯ ಬರೆದ ಪುಣ್ಯಕ್ಷೇತ್ರದಲ್ಲಿ ಸಮಯ ಕಳೆದಿದ್ದರು.
ಈ ಬಾರಿ ಐದು ರಾಜ್ಯಗಳ ಚುನಾವಣೆ ಇರೋದ್ರಿಂದ ನವರಾತ್ರಿ ಉಪವಾಸ ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಅದರಲ್ಲೂ ನವರಾತ್ರಿಯ 2ನೇ ದಿನ ಮಾತೆ ದುರ್ಗಿಯನ್ನು, ಪ್ರೀತಿ, ನಿಷ್ಠೆ ಮತ್ತು ಜ್ಞಾನದ ಧ್ಯೋತಕವಾದ ಬ್ರಹ್ಮಚಾರಿಣಿ ಸ್ವರೂಪದಲ್ಲಿ ಆರಾಧಿಸಲಾಗುತ್ತದೆ. ತಾಯಿ ಬ್ರಹ್ಮಚಾರಣಿಯು ಅಪಾರ ಭಾವನಾತ್ಮಕ ಶಕ್ತಿಯನ್ನು ಕೊಡುವಳಂತೆ. ಒಬ್ಬ ವ್ಯಕ್ತಿಯ ಬ್ರಹ್ಮಚರ್ಯದ ಕಾಲವನ್ನು ಪ್ರತಿನಿಧಿಸುವ ಆಕೆ ಅತ್ಯಂತ ಕಷ್ಟಕರ ಸನ್ನಿವೇಶಗಳಲ್ಲೂ ಮನೋಸ್ಥೈರ್ಯ ಕುಗ್ಗದಂತೆ ಕಾಪಾಡುತ್ತಾಳೆ ಅನ್ನೋದು ಮೋದಿ ನಂಬಿಕೆ. ಇಂಥ ಬ್ರಹ್ಮಾಚಾರಣಿ ಅವತಾರದ ದುರ್ಗಿಯನ್ನು ಆರಾಧಿಸುವ ತಾಯಿ ಬ್ರಹ್ಮಚಾರಣಿಯ ಕೃಪೆಗೆ ಪಾತ್ರರಾಗಲು ಸಜ್ಜಾಗಿದ್ದಾರೆ. ಪ್ರತಿಸಲ ನವರಾತ್ರಿ ಆಚರಿಸಿದಾಗ್ಲೂ ಮೋದಿಯವ್ರಿಗೆ ಒಳಿತಾಗಿದೆ ಅಂತ ಹೇಳಲಾಗುತ್ತಿದ್ದು, ಈ ಬಾರಿ ಮೋದಿಯವರ ಮುಂದೆ ಅತಿ ಕಠಿಣ ಸವಾಲೇ ಇದೆ.
ಹೀಗೆ ಅತಿದೊಡ್ಡ ಸವಾಲನ್ನ ಇಟ್ಕೊಂಡು ಮೋದಿ ಕಠಿಣ ಉಪವಾಸ ಶುರುಮಾಡ್ತಿದ್ದಾರೆ. ಬುಧವಾರ ಬೆಳಗ್ಗೆಯಿಂದಲೇ ಉಪವಾಸ ಶುರು. ಇನ್ನು ಮುಂದಿನ ಒಂಬತ್ತು ದಿನಗಳ ಕಾಲ ಮೋದಿಯವರದ್ದು ಶುದ್ಧ ಉಪವಾಸ ಕೈಗೊಳ್ತಾರೆ. ವ್ರತಾಚರಣೆ ಮಾಡೊ ಮೊದಲು ಕೆಲವೊಂದು ಸಂಕಲ್ಪಗಳನ್ನೂ ಮಾಡಲಾಗುತ್ತೆ. ಆ ಉದ್ದೇಶ ಈಡೇರಿಸುವಂತೆ ಆದಿಮಾಯೆಯಯಲ್ಲಿ ಬೇಡಿಕೊಳ್ಳೋದು ವಾಡಿಕೆ. ಅದೇ ರೀತಿ ಮೋದಿ ಕೂಡ ಆ ಕೆಲವೊಂದು ಉದ್ದೇಶ ಇಟ್ಕೊಂಡೇ ವ್ರತಾಚರಣೆ ಮಾಡ್ತಿದ್ದಾರೆ.
ಸದ್ಯ ನವರಾತ್ರಿ ಹಬ್ಬ ಆರಂಭವಾಗುತ್ತಿರಬೇಕಾದ್ರೆ ಇಡೀ ದೇಶವೇ ಆದಿಶಕ್ತಿಯ ಆರಾಧನೆಯಲ್ಲಿ ತೊಡಗಿದೆ. ಅದೇ ರೀತಿ ಮೋದಿ ಕೂಡ ವ್ರತಾಚರಣೆಯಲ್ಲಿ ತೊಡಗ್ತಿದ್ದಾರೆ. ಈ ಬಾರಿ ಮಾತ್ರ ತುಂಬಾ ವಿಶೇಷವಾದ ಉದ್ದೇಶ ಇಟ್ಟುಕೊಂಡೇ ಮೋದಿ ತಪ್ಪಸ್ಸು ನಡೆಸಲಿದ್ದಾರೆ. ಯಾಕಂದ್ರೆ ಮುಂಬರುವ ಪಂಚ ಸವಾಲುಗಳನ್ನ ಮೆಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಮೋದಿಗಿದೆ. ಹೀಗಾಗಿ ಇವೆಲ್ಲವನ್ನ ಮನಸ್ಸಲ್ಲಿಟ್ಟುಕೊಂಡೇ ಮೋದಿ ಈ ಬಾರಿ ಆದಿಶಕ್ತಿಯ ಆರಾಧನೆ ನಡೆಸಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv