ಪ್ರಧಾನಿ ಮೋದಿ ವಿರುದ್ಧ ಯಡಿಯೂರಪ್ಪ ಸಿಡಿದ ಭಾಷಣ ರಹಸ್ಯ

Public TV
2 Min Read
BSY NAMASKARA PM MODI

ಬೆಂಗಳೂರು: ಪ್ರಧಾನಿ ನರೇಂದ್ರ ಬಹಿರಂಗ ಸಮಾವೇಶದಲ್ಲಿ ನೆರೆ ಪರಿಹಾರ ಪ್ರಸ್ತಾಪದ ಬಗ್ಗೆ ಬಿಎಸ್‍ವೈಗೆ ಗೊತ್ತಿತ್ತಾ? ರಾಜ್ಯ ಬಿಜೆಪಿಯಿಂದ ತನಿಖಾ ವರದಿಯಲ್ಲಿನ ಅಸಲಿಯತ್ತು ಏನು? ಈ ಎಲ್ಲ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಒಂದು ಭಾಷಣದ ರಹಸ್ಯ ಎಕ್ಸ್ ಕ್ಲೂಸಿವ್  ಸ್ಟೋರಿ ರೋಚಕವಾಗಿದೆ. ಅಷ್ಟಕ್ಕೂ ಬಿಎಸ್‍ವೈ ಭಾಷಣ ಸಿದ್ಧವಾಗಿದ್ದು ಡಾಲರ್ಸ್ ಕಾಲೋನಿ ನಿವಾಸದಲ್ಲಿ ಅಂತೆ. ಇದು ಬಿಜೆಪಿಯ ಆಂತರಿಕ ತನಿಖಾ ವರದಿ.

ಜನವರಿ 2ರಂದು ತುಮಕೂರಿಗೆ ಪ್ರಧಾನಿ ಬಂದಾಗ ಬಿಎಸ್‍ವೈ ಮೇಲೆ ಫುಲ್ ಖುಷಿಯಾಗಿದ್ರಂತೆ. ಸಿದ್ಧಗಂಗಾ ಮಠದಲ್ಲಿ ಭಾಷಣ ಮಾಡಿದ ನಂತರವೂ ಮೋದಿ ಯಡಿಯೂರಪ್ಪ ಮೇಲೆ ವಿಶ್ವಾಸ, ಪ್ರೀತಿ ಅಪಾರ ಅಂತೆ. ಆದ್ರೆ ಅದೇ ತುಮಕೂರಿನ ಕೃಷಿ ಸಮ್ಮಾನ್ ಕಾರ್ಯಕ್ರಮದಲ್ಲಿ ಮೋದಿ ಸಪ್ಪೆಯಾದ್ರಂತೆ. ಬಿಎಸ್‍ವೈ ಮೇಲೆ ಸಣ್ಣದೊಂದು ಅಸಮಾಧಾನ ವ್ಯಕ್ತಪಡಿಸಿದ್ದು ಹಳೆಯ ಸುದ್ದಿ.

pm Modi BSY

ಆದರೆ ಈಗ ನೆರೆ ಪರಿಹಾರ ವಿಚಾರದಲ್ಲಿ ಅಸಮಾಧಾನ ವ್ಯಕ್ತವಾಗುವ ರೀತಿ ಭಾಷಣದ ಬಗ್ಗೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ. ಭಾಷಣ ಬರೆದವರು ಯಾರು ಎಂಬ ಆಂತರಿಕ ತನಿಖೆಗೆ ಸೂಚಿಸಿದ್ದ ಹೈಕಮಾಂಡ್‍ಗೆ ಉತ್ತರ ಸಿಕ್ಕಿದೆ. ಭಾಷಣದ ಸಿದ್ಧಪಡಿಸಿದ ಬಗ್ಗೆ ರಾಜ್ಯ ಬಿಜೆಪಿ. ರಹಸ್ಯ ತನಿಖಾ ವರದಿ ರವಾನಿಸಿದೆ. ಭಾಷಣ ಸಿದ್ಧಪಡಿಸಿದ್ದು ವಾರ್ತಾ ಇಲಾಖೆಯ ಅಧಿಕಾರಿಗಳು ಅಲ್ಲ. ಯಡಿಯೂರಪ್ಪ ನಿವಾಸದಲ್ಲೇ ಸಿದ್ಧಗೊಂಡಿದ್ದ ಭಾಷಣದ ಸಾರಾಂಶ ಅನ್ನೋದು ಬಿಜೆಪಿ ತನಿಖಾ ವರದಿಯ ಹೈಲೈಟ್ಸ್. ಇದನ್ನೂ ಓದಿ: ಪ್ರಗತಿ ಸಭೆಯಲ್ಲಿ ಕರ್ನಾಟಕದ ಸಾಧನೆಯನ್ನು ಹೊಗಳಿದ ಮೋದಿ

ಅಷ್ಟೇ ಅಲ್ಲ ಮೊದಲು ಯಡಿಯೂರಪ್ಪ ಭಾಷಣವನ್ನ ಓದಿ ಓಕೆ ಮಾಡಿದ್ರಂತೆ. ಆದರೆ ಯಡಿಯೂರಪ್ಪ ಭಾಷಣ ಓಕೆ ಮಾಡಿದ ಮೇಲೆ ನೆರೆ ವಿಚಾರ ಸೇರಿಸಿದ್ರಂತೆ. ಭಾಷಣದಲ್ಲಿ ನೆರೆ ಪರಿಹಾರ ಆಗ್ರಹ ಅಂಶ ಸೇರಿಸಿದವರ ಹೆಸ್ರು ಯಡಿಯೂರಪ್ಪಗೆ ಮಾತ್ರ ಗೊತ್ತಂತೆ. ಆ ಭಾಷಣದಲ್ಲಿ ನೆರೆ ವಿಚಾರ ಸೇರಿಸಿದ್ದು ಯಾರು ಎಂಬುದನ್ನ ತಿಳಿದು ಬಿಎಸ್‍ವೈ ಸೈಲೆಂಟ್ ಆಗಿದ್ದಾರೆ ಅಂತಾ ರಾಜ್ಯ ಬಿಜೆಪಿ ವರದಿ ರವಾನಿಸಿದೆ. ಹಾಗಾದ್ರೆ ಆ ಭಾಷಣದಲ್ಲಿ ನೆರೆ ಪರಿಹಾರ ಆಗ್ರಹ ವಿಚಾರ ಸೇರಿಸಿದವರು ಅಷ್ಟು ಪ್ರಮುಖರೇ? ನೆರೆ ಪರಿಹಾರವನ್ನು ಮನವಿ ರೂಪದಲ್ಲಿ ಕೇಳಲು ಹೋಗಿ ಆಗ್ರಹ ರೂಪದಲ್ಲಿ ಕೇಳಿಬಿಟ್ಟರಾ? ಈ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಕ್ಕಿಲ್ಲ.

Share This Article
Leave a Comment

Leave a Reply

Your email address will not be published. Required fields are marked *