Wednesday, 11th December 2019

ಪ್ರಗತಿ ಸಭೆಯಲ್ಲಿ ಕರ್ನಾಟಕದ ಸಾಧನೆಯನ್ನು ಹೊಗಳಿದ ಮೋದಿ

ನವದೆಹಲಿ: ಪ್ರಗತಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರದ ಸಾಧನೆಯನ್ನು ಪ್ರಶಂಸಿದ್ದಾರೆ.

ಬುಧವಾರ ನಡೆದ 31ನೇ ಪ್ರಗತಿ ಸಭೆಯಲ್ಲಿ ದೇಶದ ವಿವಿಧ ಯೋಜನೆಗಳ ಅಭಿವೃದ್ಧಿ ಕುರಿತಾಗಿ ನಡೆಯುತ್ತಿರುವ ಪ್ರಗತಿಯನ್ನು ಪರಿಶೀಲಿಸಿದರು. ಈ ವೇಳೆ ನವೀಕರೀಸಬಹುದಾದ ಇಂಧನ ಪ್ರಸರಣ ಸಂಬಂಧ ಗ್ರಿಡ್ ನಿರ್ಮಾಣ ಯೋಜನೆಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳು ನಿಗದಿತ ಸಮಯದ ಒಳಗಡೆ ಕೆಲಸವನ್ನು ಪೂರ್ಣಗೊಳಿಸಿದ್ದಕ್ಕೆ ಶ್ಲಾಘಿಸಿದರು.

ಕರ್ನಾಟಕ, ತಮಿಳುನಾಡು, ರಾಜಸ್ಥಾನ, ಗುಜರಾತ್, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್, ಮಧ್ಯಪ್ರದೇಶದಲ್ಲಿ ನವೀಕರಿಸಬಹುದಾದ ಇಂಧನ ಸಂಪನ್ಮೂಲ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಈ 8 ರಾಜ್ಯಗಳ ನಡುವೆ ಕೇಂದ್ರ ಸರ್ಕಾರ ಗ್ರಿಡ್ ನಿರ್ಮಾಣ ಯೋಜನೆ ಆರಂಭಿಸಿದೆ.

ಈ ಸಭೆಯಲ್ಲಿ ಸೋಲಾರ್ ಮತ್ತು ಗಾಳಿ ವಿದ್ಯುತ್ ಉತ್ಪಾದನೆ ಕಂಪನಿಗಳ ಸಮಸ್ಯೆ, ಭೂ ಸ್ವಾಧೀನ ವಿಚಾರದ ಬಗ್ಗೆ ಚರ್ಚೆ ನಡೆಯಿತು.

ಹಲವು ವರ್ಷಗಳಿಂದ ಪೂರ್ಣವಾಗದೇ ಇರುವ ಯೋಜನೆಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರಗಳು ಮುಂದಾಗಬೇಕು ಮತ್ತು ಆ ಯೋಜನೆಗಳ ಪ್ರಗತಿಯ ವಿವರಗಳು ನನ್ನ ಕಚೇರಿಗೆ ಕಳಹಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಈ ಸಭೆಯಲ್ಲಿ ಮೋದಿ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *